ರಕ್ಕಸ ಅಲೆಗೆ ಎದುರಾಗಿ ನಿಂತ ಯುವತಿಯನ್ನು ಹೊತ್ತೊಯ್ದ ದೈತ್ಯ ಅಲೆ; ವಿಡಿಯೋ ವೈರಲ್!

ಹರಿಯುವ ನೀರಿಗೆ ಎದುರಾಗಿ ಈಜುತ್ತೇನೆ ಎಂಬುದು ಎಷ್ಟು ಮೂರ್ಖತ್ವವೋ. ಅದೇ ರೀತಿ ರಕ್ಕಸ ಅಲೆಗಳಿಗೆ ಮೈಯೊಡ್ಡಿ ನಿಲ್ಲುವುದು ಎಂಬುದಕ್ಕೆ ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹರಿಯುವ ನೀರಿಗೆ ಎದುರಾಗಿ ಈಜುತ್ತೇನೆ ಎಂಬುದು ಎಷ್ಟು ಮೂರ್ಖತ್ವವೋ. ಅದೇ ರೀತಿ ರಕ್ಕಸ ಅಲೆಗಳಿಗೆ ಮೈಯೊಡ್ಡಿ ನಿಲ್ಲುವುದು ಎಂಬುದಕ್ಕೆ ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ.
ಇಂಡೋನೇಷ್ಯಾದ ಬಾಲಿಯ ಪ್ರಸಿದ್ಧ ಪ್ರವಾಸಿ ತಾಣ ಡೆವಿಲ್ಸ್ ಟೀರ್ ನಲ್ಲಿ ಯುವತಿಯೋರ್ವಳು ಮೈಮರೆತು ಫೋಟೋಗೆ ಪೋಸ್ ನೀಡುತ್ತಿದ್ದಾಗ ದೈತ್ಯ ಅಲೆಯೊಂದು ಆಕೆಯನ್ನು ಕೊಚ್ಚಿಕೊಂಡು ಹೋಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಕಲ್ಲಿನ ತುದಿಯಲ್ಲಿ ಮೈಮರೆತು ನಿಂತಿದ್ದ ಯುವತಿಯನ್ನು ರಕ್ಕಸ ಅಲೆಗಳು ಹೊತ್ತೊಯ್ದಿದ್ದು ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಲೆಯ ಹೊಡೆತದ ಶಾಕ್ ಗೆ ಒಳಗಾಗಿರುವ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 
ಇನ್ನು ಈ ವಿಡಿಯೋ ನೋಡಿದ ನೆಟಿಗರು ಕಮೆಂಟ್ ಮಾಡುತ್ತಿದ್ದಾರೆ. ಪ್ರವಾಸಿ ಸ್ಥಳಗಲ್ಲಿ ಹುಚ್ಚಾಟದಿಂದ ವರ್ತಿಸುವ ಸ್ನೇಹಿತರಿಗೆ ವಿಡಿಯೋ ಟ್ಯಾಗ್ ಮಾಡಿ ಎಚ್ಚರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com