ಭಾರತದ ಯುದ್ಧ ವಿಮಾನ ಹೊಡೆದುರುಳಿಸಲು ಎಫ್-16 ಬಳಸಿಲ್ಲ; ಉಲ್ಟಾ ಹೊಡೆದ ಪಾಕಿಸ್ತಾನ

ಭಾರತದ ವಿರುದ್ಧ ತಮ್ಮ ಎಫ್-16 ಯುದ್ಧ ವಿಮಾನ ಬಳಸಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ದೊಡ್ಡಣ್ಣ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಪಾಕಿಸ್ತಾನ, ತಾನು ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಲು ಎಫ್ 16 ಬಳಕೆ ಮಾಡಿಲ್ಲ ಎಂದು ಉಲ್ಟಾ ಹೊಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತದ ವಿರುದ್ಧ ತಮ್ಮ ಎಫ್-16 ಯುದ್ಧ ವಿಮಾನ ಬಳಸಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ದೊಡ್ಡಣ್ಣ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಪಾಕಿಸ್ತಾನ, ತಾನು ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಲು ಎಫ್ 16 ಬಳಕೆ ಮಾಡಿಲ್ಲ ಎಂದು ಉಲ್ಟಾ ಹೊಡೆದಿದೆ.
ಹೌದು.. ಕಳೆದ ಫೆಬ್ರವರಿಯಲ್ಲಿ ಪುಲ್ವಾಮ ಉಗ್ರದಾಳಿ ಬಳಿಕ ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಜೈಶ್ ಇ ಮೊಹಮದ್ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿತ್ತು, ಇದರ ಮಾರನೆಯ ದಿನವೇ ಪಾಕಿಸ್ತಾನ ವಾಯುಸೇನೆ ಕೂಡ ಭಾರತೀಯ ವಾಯುಗಡಿ ಉಲ್ಲಂಘಿಸುವ ಪ್ರಯತ್ನ ಮಾಡಿತ್ತು. ಈ ವೇಳೆ ಭಾರತದ ವಿಂಗ್ ಕಮಾಂಡರ್ ಮತ್ತಿತರೆ ಪೈಲಟ್ ಗಳು ಪಾಕ್ ಯುದ್ಧ ವಿಮಾನಗಳನ್ನು ಹಿಂದಕ್ಕೆ ಅಟ್ಟುವ ಕೆಲಸಕ್ಕೆ ಮುಂದಾಗಿದ್ದರು. ಈ ವೇಳೆ ಪಾಕಿಸ್ತಾನದ ಎಫ್-16 ಯುದ್ದ ವಿಮಾನವನ್ನು ಅಭಿನಂದನ್ ಹೊಡೆದುರುಳಿಸಿದ್ದರು. 
ಅಂತೆಯೇ ಅವರು ಚಾಲನೆ ಮಾಡುತ್ತಿದ್ದ ಮಿಗ್ 21 ಯುದ್ದ ವಿಮಾನವನ್ನು ಪಾಕಿಸ್ತಾನ ತನ್ನ ಎಫ್ 16 ಯುದ್ಧ ವಿಮಾನದ AIM-120 AMRAAM ಮಿಸೈಲ್ ಮೂಲಕ ಹೊಡೆದುರುಳಿಸಿತ್ತು. ಈ ಬಗ್ಗ ಪಾಕಿಸ್ತಾನದ ರಕ್ಷಣಾ ವಕ್ತಾರ ಆಸಿಫ್ ಗಫೂರ್ ಅವರೇ ಸುದ್ದಿಗೋಷ್ಠಿ ಬಹಳ ಹೆಮ್ಮಯಿಂದ ಹೇಳಿಕೊಂಡಿದ್ದರು. ಅಂತೆಯೇ ಇದರ ಅವಶೇಷಗಳು ಕೂಡ ಭಾರತೀಯ ಗಡಿಯಲ್ಲಿ ಬಿದ್ದಿತ್ತು ಇದನ್ನು ಭಾರತ ವಿಶ್ವ ಸಮುದಾಯಕ್ಕೆ ಸಾಕ್ಷಿಯಾಗಿ ತೋರಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ದುಷ್ಟಕಾರ್ಯದ ವಿರುದ್ಧ ಕೆಂಡಾಮಂಡಲವಾಗಿದ್ದ ಅಮೆರಿಕ ಭಾರತದ ವಿರುದ್ಧ ತಮ್ಮ ಎಫ್-16 ಯುದ್ಧ ವಿಮಾನ ಬಳಸಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದೀಗ ಅಮೆರಿಕ ಎಚ್ಚರಿಕೆಗೆ ಕಂಗಾಲಾಗಿರುವ ಪಾಕಿಸ್ತಾನ ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದು, ತಾನು ಎಫ್-16 ಮೂಲಕ ಭಾರತದ ಮೇಲೆ ದಾಳಿ ಮಾಡಿಲ್ಲ. ಬದಲಿಗೆ ತನ್ನ ಜೆಎಫ್ 17 ಥಂಡರ್ ಕಾಂಬ್ಯಾಟ್ ಯುದ್ಧ ವಿಮಾನವನ್ನು ಭಾರತದ ಮಿಗ್ 21 ಯುದ್ಧ ವಿಮಾನ ಹೊಡೆದುರುಳಿಸಲು ಬಳಕೆ ಮಾಡಿದ್ದಾಗಿ ತೇಪೆ ಹಾಕುತ್ತಿದೆ.
ಈ ಬಗ್ಗೆ ರಷ್ಯಾದ ಸುದ್ದಿಸಂಸ್ಥೆ ಸ್ಪುಟ್ನಿಕ್ ಇಂಟರ್ ನ್ಯಾಷನಲ್ ಜೊತೆ ಮಾತನಾಡಿರುವ ಆಸಿಫ್ ಗಫೂರ್, ಭಾರತೀಯ ಯುದ್ಧ ವಿಮಾನಗಳು ವಾಯುಗಡಿ ಉಲ್ಲಂಘಿಸಿ ಪಾಕಿಸ್ತಾನದ ವಾಯುಗಡಿ ಪ್ರವೇಶಿಸಿದ್ದವು. ಹೀಗಾಗಿ ನಾವು ಜೆಎಫ್ 17 ಮೂಲಕ ಪ್ರತಿದಾಳಿ ನಡೆಸಿದೆವು ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com