ಭಾರತದ ಯುದ್ದ ವಿಮಾನ ಎಂದು ತಿಳಿದು ತನ್ನದೇ 2 ಯುದ್ದ ವಿಮಾನಗಳ ಹೊಡೆದುರುಳಿಸಿದ ಪಾಕಿಸ್ತಾನ!

ಪಾಕಿಸ್ತಾನದ ಮಂಕು ಬುದ್ಧಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.. ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನ ಎಂದು ತಿಳಿದು ತನ್ನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಅದು ಒಂದಲ್ಲ.. ಎರಡೆರಡು ಯುದ್ದ ವಿಮಾನಗಳನ್ನು...

Published: 27th March 2019 12:00 PM  |   Last Updated: 27th March 2019 12:15 PM   |  A+A-


Pakistan Airforce shot down its own two JF17 in panic mistaking as IAF: Lt Gen Vinod Bhatia

ಸಂಗ್ರಹ ಚಿತ್ರ

Posted By : SVN SVN
Source : Online Desk
ಮುಲ್ತಾನ್: ಪಾಕಿಸ್ತಾನದ ಮಂಕು ಬುದ್ಧಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.. ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನ ಎಂದು ತಿಳಿದು ತನ್ನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಅದು ಒಂದಲ್ಲ.. ಎರಡೆರಡು ಯುದ್ದ ವಿಮಾನಗಳನ್ನು...

ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಆಗಸದಲ್ಲಿ ಏನೇ ಹಾರಾಡಿದರೂ ಭಾರತದ ಯುದ್ದ ವಿಮಾನಗಳೆಂದು ಪಾಕಿಸ್ತಾನ ಸೇನೆ ಬೆಚ್ಚಿ ಬೀಳುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನಗಳೆಂದು ತಿಳಿದು ಮುಲ್ತಾನ್ ನಲ್ಲಿ ತನ್ನದೇ ಎರಡೆರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಪಾಕಿಸ್ತಾನದ ಈ ಪ್ರಮಾದಕ್ಕೆ ಚೀನಾ ಕೂಡ ಸಾಥ್ ನೀಡಿದ್ದು, ಪಾಕ್ ಸೇನೆಯ ಪ್ರಮಾದದಲ್ಲಿ ಚೀನಾ ಪಾಕಿಸ್ತಾನಕ್ಕೆ ನೀಡಿದ್ದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ನ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ ಪಾಕಿಸ್ತಾನದ 2 ಜೆಎಫ್ 17ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇ ಚೀನಾದ ಈ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ಅಂತೆ.

ಈ ಬಗ್ಗೆ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, 'ಪಾಕಿಸ್ತಾನವು ಭಾರತದ ವಿಮಾನವೆಂದು ತಿಳಿದು ತನ್ನದೇ ಎರಡು ಜೆಎಫ್-17 ವಿಮಾನಗಳನ್ನು ಹೊಡೆದುರುಳಿಸಿದೆ. ಆಗಸದಲ್ಲಿ ಎರಡು ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಪಾಕಿಸ್ತಾನ ವಾಯುಸೇನೆ ಭಾರತದ ಯುದ್ಧ ವಿಮಾನಗಳು ಎಂದು ತಪ್ಪಾಗಿ ತಿಳಿದು ತನ್ನದೇ 2 ಜೆಎಫ್ 17 ಯುದ್ದ ವಿಮಾನಗಳನ್ನು ಹೊಡೆದುರುಳಿಸಿದೆ. ಬಹುಶಃ ಬಾಲಾಕೋಟ್ ವಾಯುದಾಳಿಯಿಂದ ಉಂಟಾಗಿರುವ ಭೀತಿ ಇಂದ ಇರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ಪಾಕ್ ಪ್ರಜೆಯೊಬ್ಬ ಈ ಘಟನೆ ಬಗ್ಗೆ ಟ್ವಿಟ್ಟರ್ ​ನಲ್ಲಿ ಬರೆದುಕೊಂಡಿದ್ದು, 'ಇದು ನಿಜಕ್ಕೂ ಬೇಸರದ ಸಂಗತಿ. ಮುಲ್ತಾನ್ ​ನಲ್ಲಿ ಜೆಎಫ್​-17 ವಿಮಾನ ಹೊಡೆದುರುಳಿಸಲಾಗಿದೆ. ಚೀನಾದಿಂದ ಆಮದು ಮಾಡಿಕೊಂಡಿದ್ದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್​ ನಮ್ಮ ವಿಮಾನವನ್ನು ನಾಶ ಮಾಡಿದೆ. ಚೀನಾದ ಆ್ಯಂಟಿ-ಏರ್​​ ಮಿಸೈಲ್​ ಸಿಸ್ಟಮ್ ನಮ್ಮ ದೇಶಕ್ಕೆ ಮಾರಕ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಈ ಘಟನೆಯಲ್ಲಿ ಪೈಲಟ್​ ಮೃತಪಟ್ಟಿದ್ದಾನೆ,” ಎಂದು ಬರೆದುಕೊಂಡಿದ್ದಾನೆ.

ಈ ಘಟನೆ ಬಗ್ಗೆ ಪಾಕಿಸ್ತಾನ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಭಾರತ ಎಫ್​-16 ಹೊಡೆದುರುಳಿಸಿದ ಸಂದರ್ಭದಲ್ಲೂ ಪಾಕಿಸ್ತಾನ ಆ ರೀತಿ ಘಟನೆ ನಡೆದೇ ಇಲ್ಲ ಎಂದು ಎಂದು ಹೇಳಿಕೊಂಡು ತಿರುಗಿದ್ದನ್ನು ಇಲ್ಲಿ ಸ್ಮರಿಸಬಹುದು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp