ಭಾರತದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಗೆ ಪಾಕಿಸ್ತಾನ ತೀವ್ರ ವಿರೋಧ, ವಿಶ್ವ ಸಮುದಾಯದ ಮೊರೆ!

ಭಾರತದ ಮಹತ್ವಾಕಾಂಕ್ಷಿ ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಪರೀಕ್ಷೆಗೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಾಹ್ಯಾಕಾಶವನ್ನು ಮಿಲಿಟರೀಕರಣಗೊಳಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತದ ಮಹತ್ವಾಕಾಂಕ್ಷಿ ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಪರೀಕ್ಷೆಗೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಾಹ್ಯಾಕಾಶವನ್ನು ಮಿಲಿಟರೀಕರಣಗೊಳಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಸರ್ಕಾರ, 'ಬಾಹ್ಯಾಕಾಶವನ್ನು ಮಿಲಿಟರೀಕರಣಗೊಳಿಸುವುದನ್ನು ಪಾಕಿಸ್ತಾನ ವಿರೋಧಿಸುತ್ತದೆ. ಬಾಹ್ಯಾಕಾಶದ ಮೇಲೆ ಎಲ್ಲರಿಗೂ ಒಂದೇ ಸಮನಾದ ಅಧಿಕಾರವಿದೆ. ಇದನ್ನು ಮಿಲಿಟರೀಕರಣಗೊಳಿಸುವ ಯತ್ನಗಳನ್ನು ತಡೆಯುವುದು ಎಲ್ಲ ರಾಷ್ಟ್ರಗಳ ಜವಾಬ್ದಾರಿಯಾಗಿದೆ' ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಜಲ್ ಅವರು,'ಪಾಕಿಸ್ತಾನ ಬಾಹ್ಯಾಕಾಶ ಶಸ್ತ್ರಾಸ್ತ್ರಗಳ ರೇಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯ ಸಂಕಲ್ಪವನ್ನು ಬೆಂಬಲಿಸುತ್ತದೆ. ಇಂತಹ ಕ್ರಮ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇನ್ನು  ಇದಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ಭಾರತಕ್ಕೆ ಬಾಹ್ಯಾಕಾಶ ಶಸ್ತ್ರಾಸ್ತ್ರ ರೇಸ್ ನಲ್ಲಿ ಸೇರಿಕೊಳ್ಳುವ ಉದ್ದೇಶವಿಲ್ಲ. ಆದರೆ ತನ್ನ ರಕ್ಷಣೆಗೆ ಭಾರತ ಎಂದೆಂದಿಗೂ ಬದ್ಧ ಎಂದು ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com