ಭಾರತ ಹೇಳಿರುವ 22 ಉಗ್ರ ಶಿಬಿರ ತಾಣಗಳು ನಮ್ಮಲ್ಲಿ ಇಲ್ಲವೇ ಇಲ್ಲ; ಪಾಕಿಸ್ತಾನದ ಹೊಸ ವಾದ

ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ವಿವಿಧ ರೀತಿಯ ಖ್ಯಾತೆ, ತರ್ಕ ಮತ್ತು ವಾದ ...
ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ನಂತರದ ದೃಶ್ಯ
ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ನಂತರದ ದೃಶ್ಯ
ಇಸ್ಲಾಮಾಬಾದ್: ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ವಿವಿಧ ರೀತಿಯ ಖ್ಯಾತೆ, ತರ್ಕ ಮತ್ತು ವಾದ ಮುಂದಿಡುತ್ತಿರುವ ಪಾಕಿಸ್ತಾನ ಇದೀಗ ಹೊಸ ವರಸೆ ಆರಂಭಿಸಿದೆ.ದಾಳಿ ನಂತರ ಭಾರತ ಹಂಚಿಕೊಂಡಿರುವ 22 ಗುರುತರ ಪ್ರದೇಶಗಳಲ್ಲಿ ಯಾವೊಂದು ಉಗ್ರಗಾಮಿ ಶಿಬಿರ ತಾಣಗಳನ್ನು ಹೊಂದಿಲ್ಲ ಎಂದು ಹೇಳಿದೆ.
ಅಲ್ಲದೆ ದಾಳಿ ನಂತರ ಬಂಧಿಸಲ್ಪಟ್ಟ 54 ಮಂದಿ ದಾಳಿಯ ಹಿಂದೆ ಯಾವುದೇ ರೀತಿಯಲ್ಲಿ ಸಂಬಂಧವಾಗಲಿ, ಕೈವಾಡವಾಗಲಿ ಹೊಂದಿದ್ದು ತಿಳಿದುಬಂದಿಲ್ಲ ಎಂದು ಹೇಳಿದೆ.
ಈ ಸಂಬಂಧ ಪಾಕಿಸ್ತಾನ ಭಾರತದ ಜೊತೆ ಪ್ರಾಥಮಿಕ ಶೋಧ ವರದಿಯನ್ನು ಹಂಚಿಕೊಂಡಿದೆ. ಬೇಕಿದ್ದರೆ ಭಾರತ ಈ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ, ತಪಾಸಣೆ ನಡೆಸಲಿ ಎಂದು ಪಾಕಿಸ್ತಾನ ಸವಾಲು ಹಾಕಿದೆ. ಅಲ್ಲಿನ ವಿದೇಶಾಂಗ ಇಲಾಖೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಬಂಧಿತರಾಗಿರುವ 54 ಮಂದಿಯನ್ನು ತನಿಖೆ ಮಾಡಲಾಗಿದ್ದು ಅವರು ದಾಳಿ ಹಿಂದೆ ಯಾವುದೇ ಸಂಬಂಧ ಹೊಂದಿರುವುದು ಕಂಡುಬಂದಿಲ್ಲ. ಅದೇ ರೀತಿ ಭಾರತ ಗುರುತಿಸಿರುವ 22 ಪ್ರಮುಖ ಉಗ್ರಗಾಮಿ ಶಿಬಿರ ತಾಣಗಳನ್ನು ಕೂಡ ತಪಾಸಣೆ ಮಾಡಲಾಗಿದೆ. ಅಂತಹ ಯಾವುದೇ ಶಿಬಿರ ಪಾಕಿಸ್ತಾನದಲ್ಲಿಲ್ಲ, ಬೇಕಿದ್ದರೆ ಈ ಸ್ಥಳಗಳಿಗೆ ಭಾರತದ ಅಧಿಕಾರಿಗಳು ಬಂದು ಪರೀಕ್ಷೆ ಮಾಡಲಿ ಎಂದು ಪಾಕಿಸ್ತಾನ ಸವಾಲು ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com