ಭಾರತದಿಂದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆ, ಉಪಗ್ರಹ ತ್ಯಾಜ್ಯದ ಕುರಿತು ಅಮೆರಿಕ ಆತಂಕ!

ಇಡೀ ವಿಶ್ವವೇ ಬೆರಗಾಗುವಂತೆ ಭಾರತೀಯ ವಿಜ್ಞಾನಿಗಳು ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಭಾರತದ ಈ ನಡೆ ಇದೀಗ ಹಲವು ದೇಶಗಳ ಹುಬ್ಬೇರುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಉಪಗ್ರಹ ತ್ಯಾಜ್ಯದ ಕುರಿತು ಕಳವಳ ವ್ಯಕ್ತಪಡಿಸಿದೆ.

Published: 28th March 2019 12:00 PM  |   Last Updated: 28th March 2019 11:18 AM   |  A+A-


US takes note of India's Mission Shakti, warns of space debris

ಸಂಗ್ರಹ ಚಿತ್ರ

Posted By : SVN SVN
Source : PTI
ವಾಷಿಂಗ್ಟನ್: ಇಡೀ ವಿಶ್ವವೇ ಬೆರಗಾಗುವಂತೆ ಭಾರತೀಯ ವಿಜ್ಞಾನಿಗಳು ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಭಾರತದ ಈ ನಡೆ ಇದೀಗ ಹಲವು ದೇಶಗಳ ಹುಬ್ಬೇರುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಉಪಗ್ರಹ ತ್ಯಾಜ್ಯದ ಕುರಿತು ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನ್ ಹನ್ ಅವರು, 'ಯಾವುದೇ ದೇಶದ, ಯಾವುದೇ ಪ್ರಯೋಗವೂ ಬಾಹ್ಯಾಕಾಶವನ್ನು ಅಸ್ಥಿರಗೊಳಿಸಬಾರದು. ಇಂಥಹ ಬೆಳವಣಿಗೆಗಳನ್ನು ಸಹಿಸಲು ಆಗುವುದಿಲ್ಲ. ಉಪಗ್ರಹಗಳನ್ನು ಹೊಡೆದುರುಳಿಸುವ ಎ-ಸ್ಯಾಟ್‌ ಪ್ರಯೋಗಗಳಿಂದ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಅನಿಯಂತ್ರಿತ ತುಣುಕುಗಳ ಸಮಸ್ಯೆ ಉಂಟಾಗುವ ಅಪಾಯವಿದೆ. ಭಾರತದಂತೆ ಮುಂದಿನ ದಿನಗಳಲ್ಲಿ ಉಪಗ್ರಹ ನಿರೋಧಕ ಕ್ಷಿಪಣಿಗಳನ್ನು ಪರೀಕ್ಷಿಸಲು ಇಚ್ಛಿಸುವ ಯಾವುದೇ ದೇಶವು ಬಾಹ್ಯಾಕಾಶದಲ್ಲಿ ಅನಾಹುತ ಉಂಟಾಗದಂತೆ ಎಚ್ಚರಿಕೆಯಿಂದ ವರ್ತಿಸಬೇಕು. ಇಂಥ ಪ್ರಯೋಗಗಳ ನಂತರ ಬಾಹ್ಯಾಕಾಶದಲ್ಲಿ ಉಪಗ್ರಹ ತ್ಯಾಜ್ಯಗಳು ಅಪಾಯ ಉಂಟುಮಾಡಬಹುದು ಎಂದು ಹೇಳಿದ್ದರು.

'ಭಾರತ ನಡೆಸಿದ ಪ್ರಯೋಗದ ಪರಿಣಾಮಗಳನ್ನು ಅಮೆರಿಕ ಗಮನಿಸುತ್ತಿದೆ. ನಾವೆಲ್ಲರೂ ಬದುಕುವ, ನಮ್ಮೆಲ್ಲರ ಬದುಕಿಗೆ ಅತ್ಯಗತ್ಯವಾಗಿ ಬೇಕಿರುವ ಬಾಹ್ಯಾಕಾಶವನ್ನು ತಿಪ್ಪೆಗುಂಡಿ ಮಾಡುವುದು ಬೇಡ. ಬಾಹ್ಯಾಕಾಶ ಎನ್ನುವುದು ವ್ಯಾಪಾರದ ಸ್ಥಳ, ಬಾಹ್ಯಕಾಶದಲ್ಲಿ ಯಾರು ಬೇಕಾದರೂ ಮುಕ್ತವಾಗಿ ವ್ಯವಹಾರ ನಡೆಸಲು ಅವಕಾಶ ಇರಬೇಕು. ಬಾಹ್ಯಾಕಾಶದ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಬಾಹ್ಯಾಕಾಶದಲ್ಲಿ ವಿವಿಧ ದೇಶಗಳು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದಕ್ಕೆ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿಲ್ಲ. ನಿಯಮಗಳ ಇಲ್ಲದಿರುವ ಸನ್ನಿವೇಶದಲ್ಲಿ ವಿಜ್ಞಾನಿಗಳು ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸುತ್ತಾರೆ ಮತ್ತು ಪರೀಕ್ಷಿಸುತ್ತಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಶೀಘ್ರ ಇತ್ತ ಗಮನಕೊಡಬೇಕಿದೆ. ಯಾವ ದೇಶ ನಡೆಸುವ ಪರೀಕ್ಷೆಯೂ ಇನ್ನೊಂದು ದೇಶದ ಹಿತಾಸಕ್ತಿಯನ್ನು ಅಪಾಯಕ್ಕೆ ದೂಡಬಾರದು' ಎಂದು ಶಾನ್ ಹನ್ ಅಭಿಪ್ರಾಯಪಟ್ಟರು.

ಇನ್ನು ಅಮೆರಿಕಕ್ಕೆ ತಿರುಗೇಟು ನೀಡಿರುವ ಭಾರತೀಯ ವಿದೇಶಾಂಗ ಇಲಾಖೆ, 'ಎ-ಸ್ಯಾಟ್’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಭೂಮಿಯ ಕೆಳ ಕಕ್ಷೆಯಲ್ಲಿ ನಡೆದ ಕಾರಣ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಸಮಸ್ಯೆ ಉಂಟಾಗದು. ಎ-ಸ್ಯಾಟ್ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳು ಕೆಲವೇ ವಾರಗಳಲ್ಲಿ ಭೂಮಿಗೆ (ಉರಿದು ಬೂದಿಯಾಗಿ) ಬೀಳಲಿವೆ ಎಂದು ಹೇಳಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp