ಕರ್ತಾರ್ ಪುರ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು: ಭಾರತ ಅಸಮಾಧಾನ, ಸಭೆ ಮುಂದೂಡಿಕೆ!

ಕರ್ತಾರ್ ಪುರ ಕಾರಿಡಾರ್ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿರುವ ಪಾಕಿಸ್ತಾನದ ನಡೆಗೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ.
ಕರ್ತಾರ್ ಪುರ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು: ತೀವ್ರ ಅಸಮಾಧಾನ ಹೊರಹಾಕಿದ ಭಾರತ; ಸಭೆ ಮುಂದೂಡಿಕೆ!
ಕರ್ತಾರ್ ಪುರ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು: ತೀವ್ರ ಅಸಮಾಧಾನ ಹೊರಹಾಕಿದ ಭಾರತ; ಸಭೆ ಮುಂದೂಡಿಕೆ!
ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿರುವ ಪಾಕಿಸ್ತಾನದ ನಡೆಗೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ. 
ಕರ್ತಾರ್ ಪುರ ಕಾರಿಡಾರ್ ಗೆ ಸಂಬಂಧಪಟ್ಟ ಸಮಿತಿಯಲ್ಲಿ ಪಾಕಿಸ್ತಾನ ಸಚಿವ ಸಂಪುಟ 10 ಸದಸ್ಯರನ್ನೊಳಗೊಂಡ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೂ ಸ್ಥಾನ ನೀಡಿದೆ. 
ಪಾಕಿಸ್ತಾನದ ಉಪ ಹೈಕಮಿಷನರ್ ಸಯೀದ್ ಹೈದರ್ ಶಾ ಜೊತೆಗೆ ಮಾತನಾಡಿರುವ ಭಾರತ ಸಮಿತಿಯಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಲಾಗಿರುವ ವಿಷಯವನ್ನು ಪ್ರಸ್ತಾಪಿಸಿದ್ದು, ತನ್ನ ವಿರೋಧವನ್ನು ಸ್ಪಷ್ಟವಾಗಿ ರವಾನೆ ಮಾಡಿದೆ. 
ಕರ್ತಾರ್ ಪುರ ಕಾರಿಡಾರ್ ಗೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿ ಭಾರತ ಸಲ್ಲಿಸಿದ್ದ ಪ್ರಸ್ತಾವನೆಗಳ ಬಗ್ಗೆ ಪಾಕಿಸ್ತಾನದ ನಿಲುವನ್ನೂ ಸಹ ಕೇಳಲಾಗಿದೆ. ಭಾರತ ಕೇಳಿರುವ ಅಂಶಗಳ ಬಗ್ಗೆ ಪ್ರತಿಕ್ರಿಯೆ ದೊರೆತ ನಂತರ ಕಾರಿಡಾರ್ ಗೆ ಸಂಬಂಧಿಸಿದ ವಿಧಾನಗಳನ್ನು ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದೆ. ಕರ್ತಾರ್ ಪುರ ಕಾರಿಡಾರ್ ನ ಮೂಲಸೌಕರ್ಯ ಅಭಿವೃದ್ಧಿಗೆ ಕುರಿತು ಚರ್ಚಿಸುವುದಕ್ಕಾಗಿ ಭಾರತ-ಪಾಕಿಸ್ತಾನದ ಅಧಿಕಾರಿಗಳ ನಡುವಿನ ಸಭೆ ಏ.2 ಕ್ಕೆ ನಿಗದಿಯಾಗಿತ್ತು. ಆದರೆ ಈಗ ಭಾರತ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿದೆ. 
ಗುರುದ್ವಾರ ಕರ್ತಾರ್ ಪುರ ಸಾಹಿಬ್ ಗೆ ಭಾರತದ ಯಾತ್ರಾರ್ಥಿಗಳು ಬಯಸಿದಲ್ಲಿ ಕಾಲ್ನಡಿಗೆಯಲ್ಲೇ ಸುರಕ್ಷಿತವಾಗಿ ತೆರಳುವುದಕ್ಕೆ ಅವಕಾಶ ನೀಡಬೇಕೆಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಒತ್ತಡ ಹಾಕುತ್ತಿದೆ. 
ಸಭೆ ಮುಂದೂಡಿದ್ದೇಕೆ ತಿಳಿಯುತ್ತಿಲ್ಲ: ಪಾಕಿಸ್ತಾನ
ಸಭೆ ಮುಂದೂಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಭಾರತ ಸಭೆ ಮುಂದೂಡಿದ್ದೇಕೆ ಎಂಬುದು ತಿಳಿಯುತ್ತಿಲ್ಲ ಎಂದಷ್ಟೇ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com