ಜೀವ ಬೆದರಿಕೆ, ಸಾಕ್ಷಿ ಮೇಲೆ ಪ್ರಭಾವದ ಆರೋಪ: ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ನೀರವ್ ಮೋದಿ
ನೀರವ್ ಮೋದಿ
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. 
ಲಂಡನ್ ನಲ್ಲಿ ತಮ್ಮ ಬಂಧನವನ್ನು ತಪ್ಪಿಸಿಕೊಳ್ಳುವುದಕ್ಕೆ 20 ಲಕ್ಷ ರೂ ಲಂಚ ನೀಡಿರುವುದು ಹಾಗೂ ಸಾಕ್ಷಿಯ ಮೇಲೆ ಪ್ರಭಾವ ಬೀರಿರುವ ಆರೋಪ ನೀರವ್ ಮೋದಿ ವಿರುದ್ಧ ಕೇಳಿಬಂದಿದ್ದು, ಜಾಮೀನು ನೀಡಬಾರದೆಂದು ಬ್ರಿಟನ್ ಪ್ರಾಸಿಕ್ಯೂಟರ್ ಲಂಡನ್ ಕೋರ್ಟ್ ಗೆ ಹೇಳಿದ್ದಾರೆ. 
ನೀರವ್ ಮೋದಿಗೆ ಜಾಮೀನು ನೀಡಿದಲ್ಲಿ ಆತ ಪರಾರಿಯಾಗುವ ಸಾಧ್ಯತೆ ಇದ್ದು, ಸಾಕ್ಷ್ಯ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾನೆ. ಆದ್ದರಿಂದ ಜಾಮೀನು ನೀಡಬಾರದು ಎಂದು ವಕೀಲರು ವಾದಿಸಿದ್ದಾರೆ. 
ಮಲ್ಯ ಪರ ವಾದಿಸಿದ್ದ ವಕೀಲರೇ ನೀರವ್ ಮೋದಿ ಪರವೂ ವಾದ ಮಂಡನೆ ಮಾಡಿದ್ದು, ನೀರವ್ ಮೋದಿ ಲಂಡನ್ ನಲ್ಲಿ ತನ್ನದೇ ಫ್ಲ್ಯಾಟ್ ನ್ನು ಬಾಡಿಗೆಗೆ ನೀಡಿದ್ದಾರೆ, ಮಾ.20 ರಂದು ಬಂಧನವಾಗುವುದಕ್ಕೂ ಮುನ್ನ ನೀರವ್ ಮೋದಿ ಬ್ಯಾಂಕ್ ಖಾತೆಯನ್ನು ತೆರೆಯುವುದಕ್ಕೂ ಯತ್ನಿಸಿದ್ದರು. ಹೀಗಾಗಿ ತನ್ನ ಕಕ್ಷೀದಾರ ಪರಾರಿಯಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ. 
ಪಿಎನ್ಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿಯನ್ನು ಗಡೀಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ಕೋರಿಕೆ ಮೇರೆಗೆ ಲಂಡನ್ ಕೋರ್ಟ್ ನೀರವ್ ಮೋದಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com