ಸಾಕ್ಷಿ ಮೇಲೆ ಪ್ರಭಾವದ ಆರೋಪ: ನೀರವ್ ಮೋದಿಗೆ ಜಾಮೀನು ನಕಾರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಯುನೈಟೆಡ್ ಕಿಂಗ್ಡಮ್ ನ್ಯಾಯಾಲಯ ಎರಡನೇ ಬಾರಿಗೆ....
ನೀರವ್ ಮೋದಿ
ನೀರವ್ ಮೋದಿ
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಯುನೈಟೆಡ್ ಕಿಂಗ್ಡಮ್ ನ್ಯಾಯಾಲಯ ಎರಡನೇ ಬಾರಿಗೆ ಜಾಮೀನು ನಿರಾಕರಿಸಿದೆ. ಇದರಿಂದ ಮೋದಿ ಇನ್ನಷ್ಟು ದಿನ ಜೈಲಿನಲ್ಲೇ ಉಳಿಯುವಂತಾಗಿದೆ.
ನೀರವ್ ಮೋದಿಗೆ ಜಾಮೀನು ನೀಡಿದಲಿ ಆತ ಸಾಕ್ಷಿಯ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ.ಹೀಗಾಗಿ ಯಾವ ಕಾರಣಕ್ಕೂ ಜಾಮೀನು ನೀಡಬಾರದೆಂದು ಬ್ರಿಟನ್ ಪ್ರಾಸಿಕ್ಯೂಟರ್ ಲಂಡನ್ ಕೋರ್ಟ್ ಗೆ ಹೇಳಿದ್ದಾರೆ. 
ಇದರೊಡನೆ ಜಾರಿ ನಿರ್ದೇಶನಾಲಯ, ಸಿಬಿಐ ಸಹ ನೀರವ್ ಮೋದಿಗೆ ಜಾಮೀನು ನೀಡಬಾರದೆಂದು ಒತ್ತಾಯಿಸಿದ್ದವು. 
ಕಡೆಗೆ ವಾದ ವಿವಾದ ಆಲಿಸಿದ ನ್ಯಾಯಾಲಯ ಮೋದಿಗೆ ಷರತ್ತುಬದ್ದ ಜಾಮೀನು ನೀಡಲು ನಿರಾಕರಿಸಿದ್ದು ಏ. 26ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಇದರೊಡನೆ ಮುಂದಿನ ಒಂದು ತಿಂಗಳ ಕಾಲ ನೀರವ್ ಮೋದಿ ಜೈಲಿನಲ್ಲೇ ಕಾಲ ತಳ್ಳಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com