ಭಾರತದ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆ ಮೇಲೆ ಅಮೆರಿಕ 'ಕಳ್ಳಗಣ್ಣು' ಇಟ್ಟಿತ್ತು: ವರದಿ

ಭಾರತದ ಮಹತ್ವಾಕಾಂಕ್ಷಿ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆ ಮೇಲೆ ಅಮೆರಿಕ ಗೂಢಚಾರಿಕೆ ಮಾಡಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Published: 30th March 2019 12:00 PM  |   Last Updated: 30th March 2019 09:04 AM   |  A+A-


US reconnaissance aircraft monitors India's ASAT missile test: Plane spotter Aircraft Spots

ಸಂಗ್ರಹ ಚಿತ್ರ

Posted By : SVN SVN
Source : PTI
ವಾಷಿಂಗ್ಟನ್: ಭಾರತದ ಮಹತ್ವಾಕಾಂಕ್ಷಿ ಎಸ್ಯಾಟ್ ಉಪಗ್ರಹ ನಿಗ್ರಹ ಕ್ಷಿಪಣಿ ಯೋಜನೆ ಮೇಲೆ ಅಮೆರಿಕ ಗೂಢಚಾರಿಕೆ ಮಾಡಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಈ ಬಗ್ಗೆ ಅಮೆರಿಕ ಮೂಲದ ಬಾಹ್ಯಾಕಾಶ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದು, ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್-ಸ್ಮಿತ್ ಸನ್ ಸೆಂಟರ್ ಫಾರ್ ಆ್ಯಸ್ಟ್ರೋ ಫಿಸಿಕ್ಸ್ ಸಂಸ್ಥೆಯ  ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜೋನಾಥನ್ ಮೆಕ್ ಡಾವೆಲ್ ಈ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, 'ಭಾರತದ ಎ-ಸ್ಯಾಟ್ ಕ್ಷಿಪಣಿಯನ್ನು ಅಮೆರಿಕ ವಾಯುಸೇನೆ ಪತ್ತೆ ಮಾಡಿತ್ತು. ಭಾರತದ ಬಹುಉದ್ದೇಶಿತ ಎಸ್ಯಾಟ್ ಕ್ಷಿಪಣಿ ಯೋಜನೆಯ ಮೇಲೆ ಗೂಢಚಾರಿಕೆ ನಡೆಸಲೆಂದೇ ಅಮೆರಿಕ ತನ್ನ ಅತ್ಯಾಧುನಿಕ ಸ್ಥಳಾನ್ವೇಷಣಾ ವಿಮಾನವನ್ನು ಡಿಯಾಗೋ ಗಾರ್ಷಿಯಾ ಮೂಲಕ ಹಿಂದೂ ಮಹಾಸಾಗರದ ಬಂಗಾಳಕೊಲ್ಲಿಗೆ ರವಾನೆ ಮಾಡಿತ್ತು. ಹೀಗಾಗಿ ಭಾರತದ ಎಸ್ಯಾಟ್ ಕ್ಷಿಪಣಿ ಯೋಜನೆ ಬಗ್ಗೆ ಅಮೆರಿಕಕ್ಕೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದಾರೆ.

ಅಂತೆಯೇ ಅಮೆರಿಕದ ಈ ಕೃತ್ಯದಿಂದಾಗಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರದು ಎಂದೂ ಹೇಳಿರುವ ಅವರು, ಎಲ್ಲರೂ ಗೂಢಚಾರಿಕೆ ನಡೆಸುತ್ತಾರೆ. ತನ್ನ ಶತ್ರುಗಳೂ ಸೇರಿದಂತೆ ಸ್ನೇಹಿತರ ಮೇಲೂ ಗೂಢಚಾರಿಕೆ ಮಾಡುತ್ತಾರೆ. ಆಧುನಿಕ ಶಸ್ತ್ರಾಸ್ತ್ರ ಯುಗದಲ್ಲಿ ಇದು ಸಾಮಾನ್ಯ. ಇಂದಿನ ದಿನಗಳಲ್ಲಿ ಇಡೀ ಪ್ರಪಂಚ ಇದೇ ರೀತಿ ಕಾರ್ಯ ನಿರ್ವಹಿಸುತ್ತಿದೆ. ಒಂದು ವೇಳೆ ಈ ವಿಚಾರ ಅಮೆರಿಕಕ್ಕೆ ತಿಳಿಯದೇ ಇದ್ದಿದರೆ ಅದು ಆಶ್ಟರ್ಯದ ವಿಚಾರವಾಗುತ್ತಿತ್ತು ಎಂದು ಜೋನಾಥನ್ ವ್ಯಂಗ್ಯ ಮಾಡಿದ್ದಾರೆ.

ಇದೇ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊಟ್ಟ ಮೊದಲ ಸಕ್ರಿಯ ಉಪಗ್ರಹ ನಿಗ್ರಹ ಕ್ಷಿಪಣಿ ಎಸ್ಯಾಟ್ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿದ್ದರು. ಅಲ್ಲದೆ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಇಸ್ರೋ ಮತ್ತು ಡಿಆರ್ ಡಿಒ ವಿಜ್ಞಾನಿಗಳಿಗೆ ಅಭಿನಂದನೆ ಕೂಡ ಸಲ್ಲಿಕೆ ಮಾಡಿದ್ದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp