ನ್ಯಾಯಾಲಯ ಆದೇಶ ನಿರ್ಲಕ್ಷ: ವಿಕಿಲೀಕ್ಸ್ ಸಂಸ್ಥಾಪಕ ಅಸ್ಸಾಂಜೆಗೆ 50 ವಾರಗಳ ಜೈಲು ಶಿಕ್ಷೆ

ವಿಕಿಲೀಕ್ಸ್ ಸಂಸ್ಥಾಪಕ ಅಧ್ಯಕ್ಷ ಜೂಲಿಯನ್ ಅಸ್ಸಾಂಜೆಗೆ ಐವತ್ತು ವಾರಗಳ ಜೈಲುವಾಸದ ಶಿಕ್ಷೆ ವಿಧಿಸಿ ಬ್ರಿತಿಷ್ ನ್ಯಾಯಾಲಯ ಇಂದು ಆದೇಶಿಸಿದೆ.
ಜೂಲಿಯನ್ ಅಸ್ಸಾಂಜೆ
ಜೂಲಿಯನ್ ಅಸ್ಸಾಂಜೆ
ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ ಅಧ್ಯಕ್ಷ  ಜೂಲಿಯನ್ ಅಸ್ಸಾಂಜೆಗೆ ಐವತ್ತು ವಾರಗಳ ಜೈಲುವಾಸದ ಶಿಕ್ಷೆ ವಿಧಿಸಿ ಬ್ರಿತಿಷ್ ನ್ಯಾಯಾಲಯ ಇಂದು ಆದೇಶಿಸಿದೆ. ಕಳೆದ ಏಳು ವಷಗಳಿಂದ ಬ್ರಿಟೀಷ್ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಕೊಡದಿದ್ದಕ್ಕೆ ಹಾಗೂ ಈಕ್ವೆಡಾರ್ ಲಂಡನ್ ರಾಯಭಾರ ಕಛೇರಿಯಲ್ಲಿ ಆಶ್ರಯ ಪಡೆದಿದ್ದಕ್ಕಾಗಿ ನ್ಯಾಯಾಲಯ ಈ ಶಿಕ್ಷೆ  ಜಾರಿ ಮಾಡಿದೆ.
ಈಕ್ವೆಡಾರ್ ಸರ್ಕಾರವು ಆತನನ್ನು ಗಡಿಪಾರು ಮಾಡಿದ ಬಳಿಕ  ಏಪ್ರಿಲ್ 11 ರಂದು ಅಸ್ಸಾಂಜೆ ಬಂಧನವಾಗಿತ್ತು. ಲಂಡನ್ ಸೌತ್ವಾರ್ಕ್ ಕ್ರೌನ್ ನ್ಯಾಯಾಲಯ ಅಸ್ಸಾಂಜೆಗೆ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ತನ್ನ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪಗಳಿಂದ ನುಣುಚಿಕೊಳ್ಲಲು ಹಾಗೂ ಸ್ವೀಡನ್ ಗೆ ಗಡಿಪಾರಾಗುವ ಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಸ್ಸಾಂಜೆ 2012ರಲ್ಲಿ ಈಕ್ವೆಡಾರ್ ನಲ್ಲಿನ ರಾಯಭಾರ ಕಛೇರಿಯ ಆಶ್ರಯ ಪಡೆದಿದ್ದರು.
ಸ್ವೀಡಿಶ್ ತನಿಖೆ ಇದಾಗಲೇ ಮುಕ್ತಾಯವಾಗಿದ್ದರೂ ಸಂಸ್ತ್ರಸ್ಥೆ ಪರ ವಕೀಲರೊಬ್ಬರು ಆರೋಪಗಳನ್ನು  ಪುನರ್ ಪರಿಶೀಲಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. 
ಪ್ರತ್ಯೇಕ ಪ್ರಕರಣದಲ್ಲಿ ವಿಕಿಲೀಕ್ಸ್ ನಲ್ಲಿ  ಲಕ್ಷಾಂತರ ಗುಪ್ತ ದಾಖಲೆಗಳನ್ನು ಬಿಡುಗಡೆ ಮಾಡಿದ ಆರೋಪದ ಮೇಲೆ ಅಸ್ಸಾಂಜೆ ಅವರನ್ನು ಅಮೆರಿಕಾ ಸಹ ಗಡಿಪಾರು ಮಾಡಿತ್ತು.  ಅ;ಲ್ಲದೆ ಆತನ ಮೇಲೆ ನ್ಯಾಯಾಲಯ್ವು ಕ್ರಿಮಿನಲ್ ಮೊಕದ್ದಮೆ ಹೂಡಿತ್ತು.  ಯು.ಎಸ್. ಸೈನ್ಯದ ಗುಪ್ತಚರ ವಿಶ್ಲೇಷಕ ಚೆಲ್ಸಿಯಾ ಮ್ಯಾನಿಂಗ್ರೊಂ ಜತೆ ಸೇರಿ ಅಸ್ಸಾಂಜೆ ಗುಪ್ತ ಸರ್ಕಾರಿ ದಾಖಲೆಗಳನ್ನು ಹ್ಯಾಕ್ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com