ಬಾಂಬ್ ದಾಳಿ ನಂತರ ಸೋಷಿಯಲ್ ಮೀಡಿಯಾಕ್ಕೆ ಹೇರಲಾಗಿದ್ದ ನಿಷೇಧ ಹಿಂಪಡೆದ ಶ್ರೀಲಂಕಾ ಸರ್ಕಾರ

ಇತ್ತೀಚೆಗೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 253 ಮಂದಿ ಮೃತಪಟ್ಟ ಘಟನೆಯ ಬಳಿಕ ಎಚ್ಚರಿಕೆ ವಹಿಸಲು ಸಾಮಾಜಿಕ...

Published: 01st May 2019 12:00 PM  |   Last Updated: 01st May 2019 12:05 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : PTI
ಕೊಲಂಬೊ: ಇತ್ತೀಚೆಗೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 253 ಮಂದಿ ಮೃತಪಟ್ಟ ಘಟನೆಯ ಬಳಿಕ ಎಚ್ಚರಿಕೆ ವಹಿಸಲು ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಷೇಧ ಹೇರಿದ್ದ ಶ್ರೀಲಂಕಾ ಸರ್ಕಾರ ಅದನ್ನು ಹಿಂತೆಗೆದುಕೊಂಡಿದೆ.

ಫೇಸ್ ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಇದರ ಸಾಮಾಜಿಕ ಮಾಧ್ಯಮಗಳ ಬಳಕೆಯ ಮೇಲೆ ಕಳೆದ 10 ದಿನಗಳಿಂದ ಹೇರಲಾಗಿದ್ದ ನಿಷೇಧವನ್ನು ನಿನ್ನೆ ಹಿಂತೆಗೆದುಕೊಳ್ಳಲು ದೂರಸಂಪರ್ಕ ನಿಯಂತ್ರಣ ಆಯೋಗಕ್ಕೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಆದೇಶ ನೀಡಿದ್ದಾರೆ. ಅದರಂತೆ ನಿನ್ನೆಯಿಂದ ನಿಷೇಧ ಹಿಂತೆಗೆದುಕೊಳ್ಳಲಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ಮಾಹಿತಿ ಶೇರ್ ಮಾಡುವ ಮುನ್ನ ಸಾರ್ವಜನಿಕರು ಜವಾಬ್ದಾರಿಯುತವಾಗಿ ದೇಶದಲ್ಲಿನ ಪ್ರಸ್ತುತದ ಪರಿಸ್ಥಿತಿ ಅರಿತುಕೊಂಡು ಮಾಹಿತಿ ಹಂಚಿಕೊಳ್ಳುವಂತೆ ಸರ್ಕಾರ ತಿಳಿಸಿದೆ.

ಕಳೆದ ಏಪ್ರಿಲ್ 21ರಂದು ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಐಷಾರಾಮಿ ಹೊಟೇಲ್ ಗಳ ಮೇಲೆ ನಡೆದ ಪ್ರಬಲ ಭಯೋತ್ಪಾದಕ ದಾಳಿಯಲ್ಲಿ 253 ಮಂದಿ ಅಸುನೀಗಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಘಟನೆ ಬಳಿಕ ಸುಳ್ಳು ಸುದ್ದಿಗಳು, ತಪ್ಪು ಮಾಹಿತಿಗಳು ಹಬ್ಬಿ ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಸೋಷಿಯಲ್ ಮೀಡಿಯಾ ಬಳಕೆಯನ್ನು ತಡೆಯೊಡ್ಡಿತ್ತು. ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆ ಹೊತ್ತಿದ್ದರೂ ಶ್ರೀಲಂಕಾ ಸರ್ಕಾರ ಮಾತ್ರ ಬಾಂಬ್ ದಾಳಿಗೆ ಸ್ಥಳೀಯ ಇಸ್ಲಾಮಿಕ್ ಭಯೋತ್ಪಾದಕ ಗುಂಪು ನ್ಯಾಶನಲ್ ತೊವೀತ್ ಜಮಾತ್(ಎನ್ ಟಿಜೆ) ಕಾರಣ ಎಂದು ಆರೋಪಿಸಿದೆ.

ಶ್ರೀಲಂಕಾದಲ್ಲಿ ಕ್ರೈಸ್ತ ಮತ್ತು ಮುಸಲ್ಮಾನ ಧರ್ಮಗಳು ಅಲ್ಪಸಂಖ್ಯಾತ ಧರ್ಮಗಳಾಗಿದ್ದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 10ರಷ್ಟು ಕೂಡ ಇಲ್ಲ. ಶ್ರೀಲಂಕಾದಲ್ಲಿ ಬಹುತೇಕರು ಇರುವುದು ಬೌದ್ಧ ಧರ್ಮೀಯರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp