ಶ್ರೀಲಂಕಾ ಬಾಂಬ್ ದಾಳಿ: ಫೋಟೋ ತೆಗೆಯುತ್ತಿದ್ದ ಭಾರತೀಯ ಛಾಯಾಗ್ರಾಹಕ ಪತ್ರಕರ್ತ ಬಂಧನ

ಈಸ್ಟರ್ ಸಂಡೆ ಬಾಂಬ್ ಸ್ಫೋಟ ಘಟನೆ ನಡೆದ ನಂತರ ಶ್ರೀಲಂಕಾದಲ್ಲಿನ ಸ್ಥಿತಿಗತಿಯ ಬಗ್ಗೆ ಫೋಟೋ...

Published: 03rd May 2019 12:00 PM  |   Last Updated: 03rd May 2019 11:29 AM   |  A+A-


Siddiqui Ahamad Danish who was arrested by the Lankan police

ಛಾಯಾಗ್ರಾಹಕ ಪತ್ರಕರ್ತ ಸಿದ್ದಿಖಿ ಅಹಮದ್ ಡ್ಯಾನಿಶ್

Posted By : SUD SUD
Source : Online Desk
ಕೊಲಂಬೊ: ಈಸ್ಟರ್ ಸಂಡೆ ಬಾಂಬ್ ಸ್ಫೋಟ ಘಟನೆ ನಡೆದ ನಂತರ ಶ್ರೀಲಂಕಾದಲ್ಲಿನ ಸ್ಥಿತಿಗತಿಯ ಬಗ್ಗೆ ಫೋಟೋ ತೆಗೆಯುತ್ತಿದ್ದ ಭಾರತೀಯ ಛಾಯಾಗ್ರಾಹಕ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಅವರು ಶಾಲೆಯೊಂದಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿದ್ಧಿಖಿ ಅಹಮದ್ ಡ್ಯಾನಿಶ್ ನೆಗೊಂಬೊ ಶ್ರೀಲಂಕಾ ಸಿಟಿಯಲ್ಲಿ ಶಾಲೆಯೊಂದರ ಒಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಛಾಯಾಗ್ರಾಹಕ ಪತ್ರಕರ್ತನನ್ನು ಬಂಧಿಸಿ ಮೇ 15ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ವಿದ್ಯಾರ್ಥಿಯ ಬಗ್ಗೆ ಮಾಹಿತಿ ಪಡೆಯಲು ಆತ ಕಲಿಯುತ್ತಿದ್ದ ಶಾಲೆಯೊಳಗೆ ಹೋಗಲು ಡ್ಯಾನಿಶ್ ಯತ್ನಿಸಿದ್ದರು. ಆಗ ಶಾಲೆಯಲ್ಲಿದ್ದ ಆತನ ಪೋಷಕರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದರು.

ಕಳೆದ ತಿಂಗಳು ಶ್ರೀಲಂಕಾದ ಚರ್ಚ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 253 ಮಂದಿ ಮೃತಪಟ್ಟು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp