ಉಗ್ರ ಮಸೂದ್ ಅಜರ್ ಮೇಲೆ ಪ್ರವಾಸ ನಿಷೇಧ ಹೇರಿದ ಪಾಕ್ ಸರ್ಕಾರ, ಆಸ್ತಿ-ಪಾಸ್ತಿ ಜಪ್ತಿಗೂ ಆದೇಶ!

ಪುಲ್ವಾಮ ಉಗ್ರ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ವಿವಿಧ ಉಗ್ರ ದಾಳಿಗಳ ರೂವಾರಿಯಾಗಿದ್ದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಕೂಡ ಆತ ಮೇಲೆ ಗಂಭೀರ ಕ್ರಮ ಕೈಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ವಿವಿಧ ಉಗ್ರ ದಾಳಿಗಳ ರೂವಾರಿಯಾಗಿದ್ದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಕೂಡ ಆತ ಮೇಲೆ ಗಂಭೀರ ಕ್ರಮ ಕೈಗೊಂಡಿದೆ.
ಹೌದು.. ನಿನ್ನೆಯಷ್ಟೇ ವಿಶ್ವಸಂಸ್ಥೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿ ಘೋಷಣೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಕೂಡ ಮಸೂದ್ ಅಜರ್ ವಿರುದ್ಧ ಕ್ರಮ ಕೈಗೊಂಡಿದ್ದು, ಆತನ ಮೇಲೆ ಪ್ರಯಾಣ ನಿಷೇಧ ಹೇರಿದೆ. ಅಲ್ಲದೆ ಆತನ ಆಸ್ತಿ ಪಾಸ್ತಿಗಳನ್ನೂ ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ವಿಶ್ವಸಂಸ್ಥೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿ ಘೋಷಣೆ ಹೊರಡಿಸಿತ್ತು, ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಪಾಕಿಸ್ತಾನ ಸರ್ಕಾರ ಅಜರ್​ನ ವಿರುದ್ಧ ನಾವು ಸಂಪೂರ್ಣವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿತ್ತು.  ಅದರಂತೆ ಇಂದು ಮಸೂದ್ ಅಜರ್ ನ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ. ಅಲ್ಲದೆ, ಆತನ ವಿದೇಶಿ ಪ್ರಯಾಣದ ಮೇಲೆ ನಿಷೇಧ ಹೇರಲಾಗಿದ್ದು, ವಿಶ್ವಸಂಸ್ಥೆ ಅಜರ್​ ಮೇಲೆ ನಿಷೇಧ ಹೇರಿರುವುದರಿಂದ ಆತನಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಹಾಗೂ ಕೊಂಡುಕೊಳ್ಳುವುದರ ಮೇಲೂ ನಿಷೇಧ ಜಾರಿಯಾದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com