ಫ್ಲೋರಿಡಾ: ರನ್ ವೇಯಲ್ಲಿ ಜಾರಿ ನದಿಗೆ ಬಿದ್ದ ಬೋಯಿಂಗ್ 737 ವಿಮಾನ, ಪ್ರಯಾಣಿಕರು ಅಪಾಯದಿಂದ ಪಾರು

ಕ್ಯೂಬಾದಿಂದ ಉತ್ತರ ಫ್ಲೋರಿಡಾಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 737 ವಿಮಾನ ಫ್ಲೋರಿಡಾದ ಜಾಕ್ಸನ್ವಿಲ್ಲೆಯ ಹತ್ತಿರ...
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ
ಜಾಕ್ಸನ್ವಿಲ್ಲೆ(ಫ್ಲೋರಿಡಾ): ಕ್ಯೂಬಾದಿಂದ ಉತ್ತರ ಫ್ಲೋರಿಡಾಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 737 ವಿಮಾನ ಫ್ಲೋರಿಡಾದ ಜಾಕ್ಸನ್ವಿಲ್ಲೆಯ ಹತ್ತಿರ ಸೈಂಟ್ ಜಾನ್ಸ್ ನದಿಗೆ ಅಪ್ಪಳಿಸಿದ ಘಟನೆ ಕಳೆದ ರಾತ್ರಿ ನಡೆದಿದೆ. ರನ್ ವೇಯ ಕೊನೆಯ ಹೊತ್ತಿಗೆ ನದಿಗೆ ಅಪ್ಪಳಿಸಿದ್ದು ವಿಮಾನದಲ್ಲಿದ್ದು ಎಲ್ಲಾ 136 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ನೌಕಾ ಏರ್ ಸ್ಟೇಷನ್ ಜಾಕ್ಸನ್ವಿಲ್ಲೆ ನ್ಯೂಸ್ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಕ್ಯೂಬಾದ ಗ್ವಾಟನಾಮೊ ಬೇ ನೌಕಾ ಸ್ಟೇಷನ್ ನಿಂದ ಆಗಮಿಸುತ್ತಿದ್ದ ಬೋಯಿಂಗ್ 737 ವಿಮಾನ ಕಳೆದ ರಾತ್ರಿ 9.40ರ ಸುಮಾರಿಗೆ ರನ್ ವೇ ಕೊನೆಗೆ ಸೈಂಟ್ ಜಾನ್ಸ್ ನದಿಗೆ ಅಪ್ಪಳಿಸಿತು ಎಂದು ಹೇಳಿದೆ. ಈ ವಿಷಯವನ್ನು ಜಾಕ್ಸನ್ವಿಲ್ಲೆ ಮೇಯರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಬಂದರು ಘಟಕ ಕೂಡಲೇ ಸ್ಥಳಕ್ಕೆ ಆಗಮಿಸಿ ಸಹಾಯಕ್ಕೆ ನೆರವಾಯಿತು. ವಿಮಾನ ನೀರಿನಲ್ಲಿ ತೇಲುತ್ತಿದ್ದು ಮುಳುಗಲಿಲ್ಲ. ಹೀಗಾಗಿ ವಿಮಾನದಲ್ಲಿದ್ದ ಯಾರಿಗೂ ಪ್ರಾಣಹಾನಿಯಾಗದೆ ಸುರಕ್ಷಿತವಾಗಿದ್ದಾರೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಈ ಘಟನೆ ಕಳೆದ ರಾತ್ರಿ ನಡೆದಿದೆ ಎಂದು ತಿಳಿಸಿದ್ದಾರೆ.
ವಿಮಾನ ಸಿಬ್ಬಂದಿ ನೀರಿನಲ್ಲಿ ವಿಮಾನದ ಇಂಧನವನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ. ವಿಮಾನ ಮುಳುಗದೆ ನೀರಿನಲ್ಲಿ ತೇಲುತ್ತಿದ್ದ ಕಾರಣ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಮಿಯಾಮಿ ಅಂತಾರಾಷ್ಟ್ರೀಯ ವೈಮಾನಿಕ ಕೇಂದ್ರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com