ಶಿಕ್ಷಣ ಅಲ್ಲ, ಧಾರ್ಮಿಕ ಇಲಾಖೆಯಡಿಯಲ್ಲಿ ಮದರಾಸಗಳು: ಶ್ರೀಲಂಕಾ ಸರ್ಕಾರದ ದಿಟ್ಟ ನಿರ್ಧಾರ

ಇತ್ತೀಚೆಗಷ್ಟೇ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಮತ್ತು ಇತರೆ ಮುಖವಸ್ತ್ರಗಳ ಮೇಲೆ ನಿಷೇಧ ಹೇರಿದ್ದ ಶ್ರೀಲಂಕಾ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ಇಷ್ಟು ದಿನ ಶಿಕ್ಷಣ ಇಲಾಖೆಯಡಿಯಲ್ಲಿದ್ದ ಮದರಸಾಗಳನ್ನು ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಇತ್ತೀಚೆಗಷ್ಟೇ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಮತ್ತು ಇತರೆ ಮುಖವಸ್ತ್ರಗಳ ಮೇಲೆ ನಿಷೇಧ ಹೇರಿದ್ದ ಶ್ರೀಲಂಕಾ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ಇಷ್ಟು ದಿನ ಶಿಕ್ಷಣ ಇಲಾಖೆಯಡಿಯಲ್ಲಿದ್ದ ಮದರಸಾಗಳನ್ನು ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ.
ಹೌದು.. 253 ಮಂದಿಯ ಸಾವಿಗೆ ಕಾರಣವಾಗಿದ್ದ ಈಸ್ಟರ್ ಸಂಡೇ ದಾಳಿ ಬಳಿಕ ಶ್ರೀಲಂಕಾ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬುರ್ಖಾ ನಿಷೇಧ ನಿರ್ಣಯ ಕೈಗೊಂಡ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಯಡಿಯಲ್ಲಿದ್ದ ಮದರಸಾಗಳನ್ನು ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ. ಈ ಬಗ್ಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಮಾಹಿತಿ ನೀಡಿದ್ದು, ಉಗ್ರ ದಾಳಿಯಲ್ಲಿ ಕೆಲ ಮದರಸಾಗಳ ಕೈವಾಡದ ಕುರಿತು ತನಿಖಾ ಸಂಸ್ಥೆಗಳು ಶಂಕಿಸಿವೆ. ಅಲ್ಲದೆ ಕೆಲ ಮದರಸಾಗಳ ಕಾರ್ಯ ನಿರ್ವಹಣೆ ಮೇಲೂ ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸಿದ್ದು, ಈ ಕಾರಣಕ್ಕೆ ಶ್ರೀಲಂಕಾ ಸರ್ಕಾರ ಮದರಸಾಗಳನ್ನು ಶಿಕ್ಷಣ ಇಲಾಖೆಯಿಂದ ಧಾರ್ಮಿಕ ಮತ್ತು ಸಂಸ್ಕೃತಿ ಇಲಾಖೆಯಡಿಗೆ ತಂದಿದೆ ಎನ್ನಲಾಗಿದೆ.
ಇದೇ ವಿಚಾರವಾಗಿ ಮಾದ್ಯಮಗಳೊಂದಿಗೆ ಮಾತನಾಡಿರುವ ಶ್ರೀಲಂಕಾ ಶಿಕ್ಷಣ ಸಚಿವ ಅಕಿಲ ಕರಿಯಮಸಂ ಅವರು, ಪ್ರಧಾನಿ ವಿಕ್ರಮ ಸಿಂಘೆ ಅವರು, ಮದರಸಾಗಳನ್ನು ಮುಸ್ಲಿಂ ಧಾರ್ಮಿಕ ಮತ್ತು ಸಂಸ್ಕ್ರೃತಿ ಇಲಾಖೆಯಡಿಗೆ ತಂದಿದ್ದಾರೆ. ಅಲ್ಲದೆ ಈ ಕುರಿತ ಯಾವುದೇ ವಿವಾದಗಳನ್ನು ನಿರ್ವಹಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ತನ್ನ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿರುವ ಮದರಸಾಗಳಲ್ಲಿ ಸುಮಾರು 800ಕ್ಕೂ ಹೆಚ್ಚು ವಿದೇಶಿ ಇಸ್ಲಾಮಿಕ್ ಪ್ರಚಾರಕರಿದ್ದು, ಧಾರ್ಮಿಕತೆ ಕುರಿತಂತೆ ಮದರಸಾಗಳಲ್ಲಿ ಪಾಠ ಮಾಡುತ್ತಿದ್ದಾರೆ. ಆದರೆ ಅವರು ಶ್ರೀಲಂಕಾಗೆ ಪ್ರವಾಸದ ವೀಸಾ ಮೂಲಕ ಪ್ರವೇಶ ಮಾಡಿದ್ದಾರೆ. ಇಂತಹವರನ್ನು ಕಂಡುಹಿಡಿದು ಗಡಿಪಾರು ಮಾಡಲಾಗುತ್ತದೆ ಎಂದು ಶ್ರೀಲಂಕಾ ಮೆಗಾ ಪೊಲೀಸ್, ವೆಸ್ಟರ್ನ್ ಡೆವಲಪ್ ಮೆಂಟ್ ಸಚಿವ ಪಟಲಿ ಚಂಪಿಕಾ ರಣವಾಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com