ಬಾಂಗ್ಲಾಗೆ ಅಪ್ಪಳಿಸಿದ ಫನಿ, ದುರ್ಬಲಗೊಂಡರೂ ನಿಲ್ಲದ ಅಬ್ಬರ, 14 ಸಾವು, 63 ಮಂದಿಗೆ ಗಾಯ

ನಿರೀಕ್ಷೆಯಂತೆಯೇ ಇಂದು ಮುಂಜಾನೆ ಬಾಂಗ್ಲಾದೇಶಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಬಾಂಗ್ಲಾದಲ್ಲಿ ಫೋನಿ ಅಬ್ಬರಕ್ಕೆ 14 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದಲ್ಲಿ ಫೋನಿ ಅಬ್ಬರ
ಬಾಂಗ್ಲಾದಲ್ಲಿ ಫೋನಿ ಅಬ್ಬರ
ಢಾಕಾ: ನಿರೀಕ್ಷೆಯಂತೆಯೇ ಇಂದು ಮುಂಜಾನೆ ಬಾಂಗ್ಲಾದೇಶಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಬಾಂಗ್ಲಾದಲ್ಲಿ ಫೋನಿ ಅಬ್ಬರಕ್ಕೆ 14 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಒಡಿಶಾದಲ್ಲಿ ತನ್ನ ರುದ್ರ ನರ್ತನ ತೋರಿದ್ದ ಫೋನಿ ಚಂಡಮಾರುತ ಬಳಿಕ ಪಶ್ಚಿಮ ಬಂಗಾಳ ಮೂಲಕವಾಗಿ ಸಾಗಿ ಇಂದು ಮುಂಜಾನೆ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಫೋನಿ ಚಂಡಮಾರುತದ ಅಬ್ಬರಕ್ಕೆ 14 ಮಂದಿ ಬಲಿಯಾಗಿ, 63 ಮಂದಿ ಗಾಯಗೊಂಡಿದ್ದಾರೆ ಎಂದು ಬಾಂಗ್ಲಾದೇಶ ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದಲ್ಲಿ ರುದ್ರತಾಂಡವ ನಡೆಸಿ 12 ಜನರನ್ನು ಬಲಿ ಪಡೆದಿದ್ದ ಫೊನಿ ಚಂಡಮಾರುತ ಶನಿವಾರ ಬಾಂಗ್ಲಾ ದೇಶದಲ್ಲಿ ಮರಣಮೃದಂಗ ಭಾರಿಸಿದೆ. ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿರುವ ಫೋನಿ ಚಂಡಮಾರುತ ಇಲ್ಲಿನ ನೊವಾಖಲಿ, ಭೋಲಾ ಮತ್ತು ಲಕ್ಷ್ಮಿಪುರ್‌ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡಿದೆ. ಈ ಜಿಲ್ಲೆಗಳಲ್ಲಿ ಅಧಿಕ ಸಾವು-ನೋವುಗಳೂ ಸಹ ವರದಿಯಾಗಿವೆ. ಮೃತರಲ್ಲಿ ಎರಡು ವರ್ಷದ ಮಗವೂ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಬರ್ಗುನಾದಲ್ಲಿ ಇಬ್ಬರು, ಬೋಲಾ ಮತ್ತು ನೋವಾಖಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇದೇ ವಿಚಾರವಾಗಿ ಢಾಕಾ ಟ್ರಿಬ್ಯೂನ್ ವರದಿ ಮಾಡಿರುವಂತೆ ಫೋನಿ ಚಂಡಮಾರುತ ಅಬ್ಬರಕ್ಕೆ ಬಾಂಗ್ಲಾದೇಶದಲ್ಲಿ 14 ಮಂದಿ ಬಲಿಯಾಗಿದ್ದಾರೆ. ನೋವಾಖಲಿ, ಭೋಲಾ, ಲಕ್ಷ್ಮೀಪುರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ತೀರ ಪ್ರದೇಶದ ಸುಮಾರು 16 ಲಕ್ಷ ಜನರನ್ನು 4,000 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರೂ ಪ್ರಾಣಹಾನಿ ತಪ್ಪಿಸಲು ಸಾಧ್ಯವಾಗಿಲ್ಲ. ತೀರ ಪ್ರದೇಶದ ಹಲವು ಹಳ್ಳಿಗಳು ಭಾರಿ ಮಳೆಯಿಂದಾಗಿ ಜಲಾವೃತಗೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com