ಮಯನ್ಮಾರ್: ರಹಸ್ಯ ದಾಖಲೆ ಹೊಂದಿದ್ದ ಆರೋಪದಡಿ ಬಂಧಿತರಾಗಿದ್ದ ರಾಯಿಟರ್ಸ್ ಪತ್ರಕರ್ತರ ಬಿಡುಗಡೆ

ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮಯನ್ಮಾರ್ ಸೇನೆ ನಡೆಸಿದ್ದ ತೆರವು ಕಾರ್ಯಾಚರಣೆಯಲ್ಲಿ ಹಿಂಸಾಚಾರ ಮತ್ತು ಸೈನಿಕರ ಅಪರಾಧಗಳಿಗೆ ಸಂಬಂಧಿಸಿದಂತೆ ರಹಸ್ಯ ವರದಿ ಮಾಡಿ ಬಂಧಿತರಾಗಿದ್ದ ರಾಯಿಟರ್ಸ್ ಸುದ್ದಿಸಂಸ್ಛೆಯ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದ ರಾಯಿಟರ್ಸ್ ಪತ್ರಕರ್ತರು
ಬಿಡುಗಡೆಯಾದ ರಾಯಿಟರ್ಸ್ ಪತ್ರಕರ್ತರು
ಯಂಗೋನ್: ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮಯನ್ಮಾರ್ ಸೇನೆ ನಡೆಸಿದ್ದ ತೆರವು ಕಾರ್ಯಾಚರಣೆಯಲ್ಲಿ ಹಿಂಸಾಚಾರ ಮತ್ತು ಸೈನಿಕರ ಅಪರಾಧಗಳಿಗೆ ಸಂಬಂಧಿಸಿದಂತೆ ರಹಸ್ಯ ವರದಿ ಮಾಡಿ ಬಂಧಿತರಾಗಿದ್ದ ರಾಯಿಟರ್ಸ್ ಸುದ್ದಿಸಂಸ್ಛೆಯ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ.
ಮಯನ್ಮಾರ್ ಸೈನಿಕರು ರೊಹಿಂಗ್ಯನ್ನರ ಕಗ್ಗೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಹಸ್ಯ ಕಾರ್ಯಾಚರಣೆ ನಡೆಸಿ ಬಂಧಿತರಾಗಿದ್ದ ರಾಯಿಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರು ಕೊನೆಗೂ ಬಿಡುಗಡೆಯಾಗಿದ್ದಾರೆ. 
ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ರೊಹಿಂಗ್ಯಾ ಕಗ್ಗೊಲೆ ಪ್ರಕರಣದ ವರದಿ ಮಾಡಿದ್ದ ವಾ ಲೋನ್ ಮತ್ತು ಕ್ಯಾ ಸೂ ಓ ಪತ್ರಕರ್ತರನ್ನು ಮಯನ್ಮಾರ್ ಪೊಲೀಸರು ಬಂಧಿಸಿದ್ದರು. ಅಂತೆಯೇ ರಹಸ್ಯ ದಾಖಲೆ ಹೊಂದಿದ್ಜ ಆರೋಪಕ್ಕೆ ಸಂಬಂಧಿಸಿದಂತೆ 2018 ಸೆಪ್ಟೆಂಬರ್ ನಲ್ಲಿ ಮಯನ್ಮಾರ್ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಪತ್ರಕರ್ತರನ್ನು ಮಯನ್ಮಾರ್ ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.
ಇನ್ನು ಪತ್ರಿಕಾ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಪತ್ರಕರ್ತರ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಹಲವಾರು ದೇಶಗಳಲ್ಲಿ ಪ್ರತಿಭಟನೆ ಸಹ ನಡೆದಿತ್ತು.
ಏನಿದು ಘಟನೆ?
ಕಳೆದ ಡಿಸೆಂಬರ್​ನಲ್ಲಿ ಮಯನ್ಮಾರ್ ​ನ ರಖಿನೇ ರಾಜ್ಯದಲ್ಲಿ ಸುಮಾರು ನೂರು ಮಂದಿ ರೋಹಿಂಗ್ಯಾ ಮುಸ್ಲಿಮರ ಕಗ್ಗೊಲೆ ನಡೆದಿತ್ತು. ಈ ವೇಳೆ ಪುರುಷರು, ಮಹಿಳೆಯರು ಹಾಗೂ ಸಾಕಷ್ಟು ಮಂದಿ ಬಾಲಕರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ ನ ಈ ಇಬ್ಬರು ಪತ್ರಕರ್ತರು ತನಿಖಾ ಪತ್ರಿಕೋದ್ಯಮ ಆರಂಭಿಸಿದ್ದರು. ಈ ವೇಳೆ ಮಯನ್ಮಾರ್ ಮಿಲಿಟರಿ ಶಿಸ್ತುಕ್ರಮದ ಸಮಯದಲ್ಲಿ ಈ ಕೊಲೆಗಳು ನಡೆದಿದ್ದವು ಎಂದು ವರದಿ ನೀಡಿದ್ದರು. 
ಈ ಸಂಬಂಧ ತನಿಖೆ ನಡೆಸಿದ್ದ ಮಯನ್ಮಾರ್ ಪೊಲೀಸರು ರೆಸ್ಟೊರೆಂಟ್ ಒಂದರಲ್ಲಿ ಕೆಲವು ರಹಸ್ಯ ಪೇಪರ್ ಗಳನ್ನು ನೀಡಿದ ಸಂದರ್ಭದಲ್ಲಿ ಪತ್ರಕರ್ತರನ್ನು ಬಂಧಿಸಿದ್ದರು. ಈ ವೇಳೆ ಇಬ್ಬರು ಪತ್ರಕರ್ತರ ವಿರುದ್ಧ ಅಧಿಕೃತ ರಹಸ್ಯ ಮಾಹಿತಿ ರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್ 2018ರ ಸೆಪ್ಟೆಂಬರ್ 8ರಂದು ತನ್ನ ತೀರ್ಪು ನೀಡಿ, ಅನಧಿಕೃತವಾಗಿ ತನಿಖೆ ನಡೆಸಿ ಗೌಪ್ಯ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ ಎಂದು ಹೇಳಿತ್ತು. ಅಲ್ಲದೆ ಇಬ್ಬರೂ ಪತ್ರಕರ್ತರಿಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com