ಲಂಡನ್: ವಿಮಾನ ಪ್ರಯಾಣದ ವೇಳೆ ಮಹಿಳೆ ಒಳ ಉಡುಪಿಗೆ ಕೈಹಾಕಿದ ಭಾರತೀಯನಿಗೆ 1 ವರ್ಷ ಜೈಲು

: ಪ್ರವಾಸಿ ವೀಸಾದಲ್ಲಿ ಯುಕೆಗೆ ಪ್ರಯಾಣಿಸಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಮಾನ ಪ್ರಯಾಣದ ನಡುವೆ ಯುವತಿಯ ಒಳಉಡುಪಿಗೆ ಕೈ ಃಆಕಿ ಸುದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಒಂದು ವರ್ಷ ಕಾಲ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.

Published: 10th May 2019 12:00 PM  |   Last Updated: 10th May 2019 09:41 AM   |  A+A-


Hardeep Singh

ಹರ್ದೀಪ್ ಸಿಂಗ್

Posted By : RHN RHN
Source : The New Indian Express
ಲಂಡನ್: ಪ್ರವಾಸಿ ವೀಸಾದಲ್ಲಿ ಯುಕೆಗೆ ಪ್ರಯಾಣಿಸಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಮಾನ ಪ್ರಯಾಣದ ನಡುವೆ ಯುವತಿಯ ಒಳಉಡುಪಿಗೆ ಕೈ ಹಾಕಿ ಸುದೀರ್ಘಕಾಲ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಒಂದು ವರ್ಷ ಕಾಲ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.

ಆರೋಪಿಯನ್ನು 36 ವರ್ಷದ ಹರ್ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು ಈತನನ್ನು ಶಿಕ್ಷೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಹಿಂದೆ ಕಳಿಸಲಾಗುತ್ತದೆ.

ಮ್ಯಾಂಚೆಸ್ಟರ್ ನ ಮಿನ್ಷಲ್ ಸ್ಟ್ರೀಟ್ ಕ್ರೌನ್ ಕೋರ್ಟ್ ನಲ್ಲಿ ಗುರುವಾರ ಈ ತೀರ್ಪು ಪ್ರಕಟವಾಗಿದೆ. ವಿಮಾನ ಹಾರಾಟದ ವೇಳೆ ತನ್ನ ಸಹಪ್ರಯಾಣಿಕ ಯುವತಿಯೊಡನೆ ಸಿಂಗ್ ಅಸಭ್ಯವಾಗಿ ವರ್ತಿಸಿದ್ದನೆಂದು ನ್ಯಾಯಾಲಯ ಹೇಳೀದೆ.

"ಸಿಂಗ್ ವರ್ತನೆ ಪ್ರಾರಂಭದಿಂಡಲೂ ಅನುಮಾನಾಸ್ಪದವಾಗಿತ್ತು. ಆತ ತನ್ನ ಪಕ್ಕದ ಆಸನದಲ್ಲಿ ಕುಳಿತ ಯುವತಿಯ ಗುಪ್ತಾಂಗವನ್ನು ಸ್ಪರ್ಶಿಸಲು ಪ್ರಯತ್ನಿಸಿದನು, ಆಕೆ ಅವನೊಂದಿಗೆ ಸಂಭಾಷಿಸಲು ಇಷ್ಟಪಡದ ನಂತರ ಆತ ಈ ಕೆಲಸಕ್ಕಿಳಿದಿದ್ದ"ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸ್ ವಿಮಾನ ನಿಲ್ದಾಣದ ಡಿಟೆಕ್ಟಿವ್ ಕಾನ್ಸ್ಟೇಬಲ್ ಕ್ಯಾಥರೀನ್ ಇವಾನ್ಸ್ ಹೇಳಿದ್ದಾರೆ.

ಯುವತಿ ಹಾಗೂ ಸುತ್ತಲಿನ ಸಹ ಪ್ರಯಾಣಿಕರು ನಿದ್ದೆ ಹೋಗುವುದನ್ನು ಕಾಯುತ್ತಿದ್ದ ಸಿಂಗ್ ಯುವತಿಯ ಮೇಲೆ ದೀರ್ಘಕಾದ ಲೈಂಗಿಕ ಆಕ್ರಮಣಕ್ಕೆ ತೊಡಗಿದ.ಅಲ್ಲದೆ ಆಕೆ ಅದಕ್ಕೆ ವಿರೋಧಿಸಿದಾಗ ಬಲವಂತವಾಗಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ.  ಕಡೆಗೂ ಆಕೆ ತನ್ನೊಳಗಿನ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಆತನಿಂಡ ಬಿಡಿಸಿಕೊಂಡು ಮುಂದಕ್ಕೆ ಓಡಿ ವಿಮಾನ ಸಿಬ್ಬಂದಿಗೆ ತನ್ನ ಸಮಸ್ಯೆಯ ಕುರಿತು ವಿವರಿಸಿದ್ದಾರೆ.

ಘಟನೆ ವಿವರ

ಫೆಬ್ರವರಿ 23ರಂದು ಮುಂಬೈನಿಂದ ಮ್ಯಾಂಚೆಸ್ಟರ್ ಗೆ ಹೊರಟಿದ್ದ ವಿಮಾನದಲ್ಲಿ 20ರ ಹರೆಯದ ಯುವತಿ ಪ್ರಯಾಣಿಸುತ್ತಿದ್ದು ಆಕೆಯ ಆಸನದ ಇನ್ನೊಂದು ಕಡೆಯಲ್ಲಿ ಸಿಂಗ್ ಕುಳಿತಿದ್ದನು. ಆಗ ಯುವತಿಯೊಡನೆ ಸಂಬಾಷಣೆಗೆ ತೊಡಗಿಕೊಳ್ಳಲು ಸಿಂಗ್ ಬಯಸಿದ್ದ. ಆದರೆ ಆಕೆ ಅವನೊಂದಿಗೆ ಸಂಬಾಷಣೆಗೆ ಇಚ್ಚಿಸದೆ ಮೌನಆಗಿದ್ದಳು.ಮೊದಲಿಗೆ ಸಭ್ಯವಾಗಿದ್ದವನಂತೆ ಕಂಡ ಸಿಂಗ್ ಬರಬರುತ್ತಾ ಅಸಭ್ಯ ರೀತಿಯಲ್ಲಿ ವರ್ತಿಸತೊಡಗಿದ್ದ. ಅಲ್ಲದೆ ಆತನಿಗೆ ಸರಿಯಾಗಿ ಇಂಗ್ಲೀಷ್ ಬರದ ಕಾರಣ ಯುವತಿಗೆ ಆತನ ಸಂಬಾಷಣೆ ಅರ್ಥವಾಗುತ್ತಿರಲಿಲ್ಲ.

ವಿಮಾನ ಪ್ರಯಾಣದ ವೇಳೆ ಸಿಂಗ್ ಯುವತಿಯ ಪಕ್ಕದಲ್ಲಿ ಕುಳಿತ ಮಹಿಳೆಯನ್ನಿ ತೋರಿಸಿ "ಆಕೆ ನಿಮ್ಮ ತಾಯಿಯೆ?" ಎಂದು ಪ್ರಶ್ನಿಸಿದ್ದಾನೆ. ಯುವತಿ ಆಗ ಮೊಬೈಲ್ ನಲ್ಲಿ ಚಲನಚಿತ್ರ ವೀಕ್ಷಣೆಯಲ್ಲಿ ತೊಡಗಿದ್ದು ಆಕೆ ಸರಿಯಾಗಿ ಉತ್ತರಿಸಲಿಲ್ಲ.ಕಡೆಗೆ ಆಕೆ ವಿಮಾನದಲ್ಲಿನ ಫೆಸಿಲಿಟೀಸ್ ಬಳಸಲು ಮುಂದಾದಾಗಲೂ ಸಿಂಗ್ ಆಕೆಯನ್ನು ಹೋಗಲು ಬಿಡದೆ ತನ್ನ ಸಮೀಪದಲ್ಲೇ ಕುಳಿತಿರಲು ಒತ್ತಾಯಿಸಿದ್ದ. ಕಡೆಗೆ ಪ್ರಯಾಣದ ನಡುವೆ ವಿಮಾನದೊಳಗಿನ ದೀಪಗಳನ್ನು ಆರಿಸಲಾಗಿದ್ದು ಎಲ್ಲರೂ ಅವರವರ ಹೊದಿಕೆಗಳ ಹೊದ್ದು ಮಲಗಿರಲು ಸಿಂಗ್ ಯುವತಿಯ ಮೇಲೆ ಲೈಂಗಿಕ ಹಲ್ಲೆಗೆ ಪ್ರಾರಂಭಿಸಿದ. ಆಗ ಯುವತಿ ಎಚ್ಚರಗೊಂಡಿದ್ದಾಳೆ. ಮತ್ತು ಆತನನ್ನು ತಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಸಿಂಗ್ ಆಕೆಯ ಬಟ್ಟೆ ಹಾಗೂ ಒಳೌಡುಪಿನಲ್ಲಿ ಕೈ ಹಾಕಿ ಆಕೆಯನ್ನು ಬಲವಂತದಿಂದ ಚುಂಬಿಸಲು ಪ್ರಯತ್ನಿಸಿದ್ದನು.

ಆದ ವಿಮಾನದಲ್ಲಿನ ಸಹಪ್ರಯಾಣಿಕರೆಲ್ಲಾ ನಿದ್ರಿಸಿದ್ದರು. ಆಕೆ ಸಿಂಗ್ ಗೆ ಅವನು ತನ್ನ ಕೈಗಳನ್ನು ಹಿಂದೆ ತೆಗೆದುಕೊಳ್ಳಲು ಪದೇ ಪದೇ ವಿನಂತಿಸಿದ್ದಾಳೆ.ಅಲ್ಲದ್ ಆತನಿಂಡ ದೂರ ಹೋಗಲು ಸಹ ಪ್ರಯತ್ನಿಸಿದ್ದಾಳೆ. ಆದರೆ ಸಿಂಗ್ ತನ್ನ ಕಾಲನ್ನು ಮಾರ್ಗಕ್ಕೆ ಅಡ್ಡವಿಟ್ಟಿದ್ದ ಕಾರಣ ಆಕೆಗೆ ಚಲಿಸಲು ಸಾಧ್ಯವಾಗಿಲ್ಲ. ಎಲ್ಲರೂ ನಿದ್ರಿಸಿದ್ದ ಕಾರಣ ಆಕೆಗೆ ಸಹಾಯ ಮಾಆಡಲು ಯಾರೂ ಇರಲಿಲ್ಲ, ವಿಮಾನದಲ್ಲಿ ಆ ವೇಳೆ ಯಾವ ಕ್ಯಾಬಿನ್ ಸಿಬ್ಬಂದಿಯನ್ನೂ ಆಕೆ ಕಾಣಲಿಲ್ಲ.ಇದಾಗಿ ಸತತ ಸುರಾರು 15-20 ನಿಮಿಷ ಇಂತಹಾ ಹಿಂಸೆಯನ್ನನುಭವಿಸಿದ್ದ ಯುವತಿ ಕಡೆಗೂ ತನ್ನ ಅವಸ್ಥೆ ಹಾಗೂ ಸಿಂಗ್ ಬಗ್ಗೆ ವಿಮಾನದ ಸಿಬ್ಬಂದಿಗೆ ವಿವರಿಸಿದ್ದಾರೆ.

ಯುವತಿಯ ದೂರಿನನ್ವಯ ಪ್ರಯಾಣಿಕ ಸಿಂಗ್ ಮ್ಯಾಂಚೆಸ್ಟರ್ ನಲ್ಲಿಳಿಯುತ್ತಿದ್ದಂತೆ ಆತನನ್ನು ಅಲ್ಲಿನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಾರಂಭದಲ್ಲಿ ಸಿಂಗ್ ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದು ಅಂತಿಮವಾಗಿ ಆರೋಪ ಸಾಬೀತಾಗಿದೆ, ಇಂದು (ಗುರುವಾರ) ಶಿಕ್ಷೆ ಪ್ರಮಾಣ ಪ್ರಕಟವಾಗಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp