ಜಪಾನ್ ನಲ್ಲಿ ಭಾರಿ ಪ್ರಮಾಣದ ಅವಳಿ ಭೂಕಂಪನ!

ಜಪಾನ್ ಕರಾವಳಿಯಲ್ಲಿ ಶುಕ್ರವಾರ ಭಾರಿ ಪ್ರಮಾಣದ ಅವಳಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ಮತ್ತು 6.3ರಷ್ಟು ತೀವ್ರತೆ ದಾಖಲಾಗಿತ್ತು.
ಜಪಾನ್ ನಲ್ಲಿ ಭೂಕಂಪನ
ಜಪಾನ್ ನಲ್ಲಿ ಭೂಕಂಪನ
ಟೋಕಿಯೋ: ಜಪಾನ್ ಕರಾವಳಿಯಲ್ಲಿ ಶುಕ್ರವಾರ ಭಾರಿ ಪ್ರಮಾಣದ ಅವಳಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6 ಮತ್ತು 6.3ರಷ್ಟು ತೀವ್ರತೆ ದಾಖಲಾಗಿತ್ತು.
ಶುಕ್ರವಾರ ಬೆಳಗ್ಗೆ 8.48ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು, ಆಗ್ನೇಯ ಮಿಯಾಝಾಕಿ ಶಿ ನಗರದ ಸುಮಾರು 44 ಕಿಮೀ ಆಳದಲ್ಲಿ ಭೂಂಕಪನದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕರಾವಳಿಯಲ್ಲಿ ಸಂಭವಿಸಿದ್ದ ಭಾರಿ ಪ್ರಮಾಣದ ಭೂಕಂಪನದಿಂದಾಗಿ ಜಪಾನ್ ಕರಾವಳಿ ಜನತೆ ತೀವ್ರ ಆತಂಕಕ್ಕೆ ಕಾರಣವಾಗಿದ್ದರು. ಆದರೆ ಸಮುದ್ರದ ತೀರಾ ಆಳದಲ್ಲಿ ಭೂಕಂಪನ ಸಂಭವಿಸಿದ್ದರಿಂದ ಸುನಾಮಿ ಸಾಧ್ಯತೆ ಇಲ್ಲ ಎಂದು ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಭೂ ಕಂಪನದಿಂದಾಗಿ ಯಾವುದೇ ಪ್ರಾಣ ಹಾನಿ, ಇತರೆ ಯಾವುದೇ ನಷ್ಟ ಸಂಭವಿಸಿದ ಕುರಿತು ಮಾಹಿತಿ ಲಭ್ಯವಾಗಿಲ್ಲ. 
ಅಂತೆಯೇ ಜಪಾನಿನ ಕರಾವಳಿ ಪ್ರದೇಶದ ಕ್ಯುಶು ಎಂಬ ದ್ವೀಪದಲ್ಲಿ ಭೂಕಂಪನವಾಗಿದ್ದು, ಸ್ಥಳೀಯ ಹವಾಮಾನ ಇಲಾಖೆ ಜನರಿಗೆ ತುರ್ತು ಎಚ್ಚರಿಕೆ ನೀಡಿದೆ. ಅಲ್ಲದೆ, ಭೂಕಂಪನದಿಂದ ಉಂಟಾಗುವ ಹಾನಿಯ ಕುರಿತು ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಜಪಾನ್ ಸರ್ಕಾರ ಸಜ್ಜಾಗಿದೆ. ಕ್ಯುಶು ಪ್ರದೇಶದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರವಿದ್ದು, ಇಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com