ಅಮೆರಿಕಾದಿಂದ ಭಾರತಕ್ಕೆ ಮೊದಲ ಅಪಾಚೆ ಎಎಚ್-64ಡಿ ಯುದ್ಧ ಹೆಲಿಕಾಪ್ಟರ್ ಹಸ್ತಾಂತರ

ಅಮೆರಿಕಾದ ಬಹುದೊಡ್ಡ ಅಂತರಿಕ್ಷ ತಯಾರಿಕಾ ಸಂಸ್ಥೆ ಬೋಯಿಂಗ್ ಕಂಪೆನಿ ಮೊದಲ 22 ಅಪಚೆ ಗಾರ್ಡಿಯನ್ ಯುದ್ಧ ಹೆಲಿಕಾಪ್ಟರ್ ನ್ನು ಭಾರತೀಯ ವಾಯುಪಡೆಗೆ ...
ಭಾರತಕ್ಕೆ ಅಧಿಕೃತವಾಗಿ ಹೆಲಿಕಾಪ್ಟರ್ ಹಸ್ತಾಂತರ ಪ್ರಕ್ರಿಯೆ
ಭಾರತಕ್ಕೆ ಅಧಿಕೃತವಾಗಿ ಹೆಲಿಕಾಪ್ಟರ್ ಹಸ್ತಾಂತರ ಪ್ರಕ್ರಿಯೆ
ನವದೆಹಲಿ: ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಕಂಪೆನಿಯಾದ ಅಮೆರಿಕದ ಬೋಯಿಂಗ್ ನಿಂದ 22 ಅಪಾಚೆ ಎಎಚ್-64ಡಿ ದಾಳಿಯ ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ. ಮೂರೂವರೆ ವರ್ಷಗಳ ಹಿಂದೆಯೇ ಭಾರತ ಮತ್ತು ಅಮೆರಿಕಾ ಮಧ್ಯೆ ಈ ಬಹುಶತಕೋಟಿ ಹೆಲಿಕಾಪ್ಟರ್ ಖರೀದಿ ಮತ್ತು ಮಾರಾಟ ಒಪ್ಪಂದವಾಗಿತ್ತು.
ಅಮೆರಿಕಾದ ಎಎಚ್-64 ಇ(1) ಅಪಚೆ ಹೆಲಿಕಾಪ್ಟರ್ ಭಾರತೀಯ ವಾಯುಪಡೆಗೆ ಸೇರ್ಪಡೆಯಿಂದ ಭಾರತದ ಯುದ್ಧವಿಮಾನ ಪಡೆಯ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಭವಿಷ್ಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ಹೆಲಿಕಾಪ್ಟರ್ ನ್ನು ವಿನ್ಯಾಸಗೊಳಿಸಲಾಗಿದ್ದು ಪರ್ವತ, ಕಣಿವೆಗಳಲ್ಲಿ ಸಹ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಮೊದಲ ಎಎಚ್-64ಇ(1) ಅಪಚೆ ಗಾರ್ಡಿಯನ್ ಹೆಲಿಕಾಪ್ಟರ್ ನ್ನು ಭಾರತೀಯ ವಾಯುಪಡೆಗೆ ಔಪಚಾರಿಕವಾಗಿ ಅಮೆರಿಕಾದ ಬೋಯಿಂಗ್ ಉತ್ಪಾದನಾ ಕೇಂದ್ರವಾದ ಮೆಸಾ, ಅರಿಜೊನಾದಲ್ಲಿ ನಿನ್ನೆ ಹಸ್ತಾಂತರಿಸಲಾಯಿತು ಎಂದು ಭಾರತೀಯ ವಾಯುಪಡೆ ವಕ್ತಾರ ಗ್ರೂಪ್ ಕಾಪ್ಟನ್ ಅನುಪಮ್ ಬ್ಯಾನರ್ಜಿ ತಿಳಿಸಿದ್ದಾರೆ.
ಎಎಚ್-64ಇ ಅಪಚೆ ಪ್ರಮುಖ ಬಹುಬಳಕೆಯ ಯುದ್ಧ ಹೆಲಿಕಾಪ್ಟರ್ ಆಗಿದ್ದು ಅದನ್ನು ಅಮೆರಿಕಾ ಸೇನೆ ಬಳಸಿಕೊಂಡಿದೆ. ಭಾರತೀಯ ವಾಯುಪಡೆ ಬಹುಶತಕೋಟಿ ಡಾಲರ್ ಮೊತ್ತದ 22 ಅಪಚೆ ಹೆಲಿಕಾಪ್ಟರ್ ಖರೀದಿಗೆ 2015ರ ಸೆಪ್ಟೆಂಬರ್ ನಲ್ಲಿ ಅಮೆರಿಕಾ ಸರ್ಕಾರ ಮತ್ತು ಬೋಯಿಂಗ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿತ್ತು.
ಇದರಿಂದ ಭಾರತ-ಅಮೆರಿಕಾ ನಡುವಣ ರಕ್ಷಣಾ ಸಹಕಾರವನ್ನು ವೃದ್ಧಿಯಾಗಲಿದೆ
#ApacheInduction: First AH-64E (I) Apache Guardian helicopter was formally handed over to the IAF at Boeing production facility in Mesa, Arizona, USA on 10 May 19. Air Mshl AS Butola, represented the IAF & accepted the first Apache in a ceremony at Boeing production facility. pic.twitter.com/FzA0IfRine

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com