ಸಾಯಲೊ ಬೇಡವೊ: ಇನ್‌ಸ್ಟಾಗ್ರಾಮ್ ಫಲಿತಾಂಶ ನೋಡಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣು!

ತಾನು ಬದುಕಿರಬೇಕೋ ಅಥವಾ ಸಾಯಬೇಕೋ ಎಂದು ತನ್ನ ಇನ್‌ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಬಂದ ಅಚ್ಚರಿಯ ಫಲಿತಾಂಶದಿಂದ ನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೌಲಲಾಂಪುರ: ತಾನು ಬದುಕಿರಬೇಕೋ ಅಥವಾ ಸಾಯಬೇಕೋ ಎಂದು ತನ್ನ ಇನ್‌ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಬಂದ ಅಚ್ಚರಿಯ ಫಲಿತಾಂಶದಿಂದ ನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಲೇಶಿಯಾದಲ್ಲಿ ಈ ಘಟನೆ ನಡೆದಿದೆ. ಬಾಲಕಿಯೊಬ್ಬಳು ತನ್ನ ಮೇ 13ರಂದು ಇನ್‌ಸ್ಟಾಗ್ರಾಮ್ ಹಿಂಬಾಲಕರಿಗೆ ನಾನು ಸಾಯಬೇಕೇ ಅಥವಾ ಬದುಕಿರಬೇಕೆ ಎಂದು ಪ್ರಶ್ನಿ ಮಾಡಿದ್ದಾಳೆ. ಇದಕ್ಕೆ ಶೇಖಡ 69ರಷ್ಟು ಹಿಂಬಾಲಕರು ನೀನು ಸಾಯುವುದೇ ಉತ್ತಮ ಎಂದು ಹೇಳಿದ್ದಾರೆ. 
ಇದರಿಂದ ಮನನೊಂದು ಖಿನ್ನತೆಗೊಳಗಾದ ಬಾಲಕಿ ಎತ್ತರದ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸರಾವಾಕ್ ನಗರದ ಪೊಲೀಸರು ತಿಳಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಹಿಂಬಾಲಕರು ಎದುರಿಸುತ್ತಿದ್ದಾರೆ. 
ಮಲೇಶಿಯಾದಲ್ಲಿ ಕಾನೂನಿನ ಪ್ರಕಾರ ಅಪ್ರಾಪ್ತರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾದರೆ ಅಂತಹವರಿಗೆ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಅಥವಾ 20 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಈ ಪ್ರಕರಣದಲ್ಲಿ ಯಾರೆಲ್ಲಾ ನೀನು ಸಾಯಬೇಕು ಅಂತಾ ವೋಟ್ ಮಾಡಿದ್ದಾರೋ ಅವರೆಲ್ಲಾ ಆತ್ಮಹತ್ಯೆಗೆ ಪ್ರಚೋಜನೆ ನೀಡಿದ ಆರೋಪ ಎದುರಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com