ಪಾಕಿಸ್ತಾನಕ್ಕೆ ಆರ್ಥಿಕ ಆಘಾತ: ಪಾಕ್ ನ 146.25 ರೂಪಾಯಿ ಅಮೆರಿಕದ ಒಂದು ಡಾಲರ್ ಗೆ ಸಮ!

ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಜತೆಗಿನ ಪಾಕಿಸ್ತಾನದ 6 ಬಿಲಿಯನ್ ಡಾಲರ್ ನೆರವಿಗಾಗಿ ಪ್ರಾಥಮಿಕ ಒಪ್ಪಂದ ಮಾಡಿಕೊಂಡ ನಂತರ ಪಾಕ್ ರುಪಾಯಿ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲಿ....
ಪಾಕಿಸ್ತಾನಕ್ಕೆ ಆರ್ಥಿಕ ಆಘಾತ: ಪಾಕ್ ನ 146.25 ರೂಪಾಯಿ, ಅಮೆರಿಕದ ಒಂದು ಡಾಲರ್ ಗೆ ಸಮ!
ಪಾಕಿಸ್ತಾನಕ್ಕೆ ಆರ್ಥಿಕ ಆಘಾತ: ಪಾಕ್ ನ 146.25 ರೂಪಾಯಿ, ಅಮೆರಿಕದ ಒಂದು ಡಾಲರ್ ಗೆ ಸಮ!
ನ್ಯೂಯಾರ್ಕ್: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಜತೆಗಿನ ಪಾಕಿಸ್ತಾನದ 6 ಬಿಲಿಯನ್ ಡಾಲರ್ ನೆರವಿಗಾಗಿ ಪ್ರಾಥಮಿಕ ಒಪ್ಪಂದ ಮಾಡಿಕೊಂಡ ನಂತರ ಪಾಕ್ ರುಪಾಯಿ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲಿ ಸಾರ್ವಆಲಿಕ ಕುಸಿತ ದಾಖಲಿಸಿದೆ. ಗುರುವಾರ ಬೆಳಿಗ್ಗೆ ಪಾಕಿಸ್ತಾನ ರುಪಾಯಿ ಮೌಲ್ಯ ಅಮೆರಿಕಾ ಡಾಲರ್ ಎದುರು 146.25ಕ್ಕಿ ಕುಸಿದಿದೆ. 
ಕಳೆದ ವಾರ ಡಾಲರ್ ಎದುರು ಪಾಕ್ ರುಪಾಯಿ ವಹಿವಾಟು 141 ರು. ನಷ್ಟಿದ್ದರೆ ಈ ವಾರದಲ್ಲಿ ಇದು ಸುಮಾರು ಐದರಿಂದ ಆರು ರು. ನಷ್ಟು ಇಳಿಕೆ ಆಗಿದೆ. ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಕರೆನ್ಸಿ ವಿತರಕರೊಡನೆ ಸಭೆ ನಡೆಸಿದ್ದಾರೆ.
ಸಧ್ಯ ಪಾಕ್ ಕೇಂದ್ರ ಬ್ಯಾಂಕ್ ನಿಂದಲೇ ರುಪಾಯಿ ವಿನಿಮಯ ದರ ನಿಯಂತ್ರಣ ಮಾಡಲಾಗುತ್ತಿದೆ. ಈ ನಡುವೆ ಪಾಕ್ ಸರ್ಕಾರ ಕಳೆದ ವಾರ ಐಎಂಎಫ್ ನೊಡನೆ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿದ್ದು ಮಾರುಕಟ್ಟೆ ನಿರ್ಧಾರಿತ ವಿನಿಮಯ ದರವನ್ನು ಅನುಸರಿಸುವುದಾಗಿ ಹೇಳಿತ್ತು.
ಪಾಕಿಸ್ತಾನದ ವಿದೇಶೀ ವಿನಿಮಯ ಸಂಘದ ಅಧ್ಯಕ್ಷರಾದ ಮಲಿಕ್ ಬೋಸ್ಟನ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಐಎಂಎಫ್ ನಿಂದ ಕರೆನ್ಸಿ ಅಪಮೌಲ್ಯಕ್ಕೆ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಬೇಡಿಕೆ ಮತ್ತು ಸರಬರಾಜಿನ ಆಧಾರದ ಮೇಲೆ ವಿನಿಮಯ ದರವನ್ನು ನಿರ್ಧರಿಸಬೇಕೆಂದು ಐಎಂಎಫ್ ಒತ್ತಾಯಿಸಿದೆ." ಅವರು ಹೇಳಿದ್ದಾರೆ.
ಈ ನಡುವೆ ಐಎಂಎಫ್ ನೆರವು ಪ್ಯಾಕೇಜ್ ಪಡೆಯಲು ಕಿಸ್ತಾನವು ತೆರಿಗೆ ಆದಾಯದ ಸಂಗ್ರಹದಲ್ಲಿ ಸುಧಾರಣೆಗಳನ್ನು ಮಾಡಬೇಕಾಗಿದೆ ಮತ್ತು ದೇಶದ ಫಾರೆಕ್ಸ್ ಅಕೌಂಟ್ ಕೊರತೆಯನ್ನು ಕಡಿತಗೊಳಿಸುವುದರೊಂದಿಗೆ ಅದರ ಫಾರೆಕ್ಸ್ ನಿಕ್ಷೇಪಗಳ ಬಲವರ್ಧನೆಗೆ ಒತ್ತು ನೀಡಬೇಕಿದೆ. ಅಭಿವೃದ್ದಿ ಕುಸಿತ, ವಿತ್ತೀಯ ಕೊರತೆ ಸೇರಿ ಅನೇಕ ಸಮಸ್ಯೆಗಳನ್ನೆದುರಿಸುತ್ತಿರುವ ಪಾಕಿಸ್ತಾನತೀವ್ರವಾದ ಆರ್ಥಿಕ ಸಂಕಷ್ಟದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com