ಭಾರತ ಇನ್ನು ನಮಗೆ ಮತ್ತಷ್ಟು ಕಠಿಣ ದೇಶ; ಮೋದಿ ಗೆಲುವಿನ ಕುರಿತು ಪಾಕ್ ಮಾಜಿ ಸಚಿವರ ಹೇಳಿಕೆ

ಭಾರತ ಇನ್ನು ನಮಗೆ ಮತ್ತಷ್ಟು ಕಠಿಣ ದೇಶವಾಗಲಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

Published: 23rd May 2019 12:00 PM  |   Last Updated: 23rd May 2019 07:33 AM   |  A+A-


India is Going to be a tougher neighbourhood for us; Former Pakistan former minister on Modi's Election victory

ಸಂಗ್ರಹ ಚಿತ್ರ

Posted By : SVN SVN
Source : PTI
ಇಸ್ಲಾಮಾಬಾದ್: ಭಾರತ ಇನ್ನು ನಮಗೆ ಮತ್ತಷ್ಟು ಕಠಿಣ ದೇಶವಾಗಲಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿನ ಮೋದಿ ಮತ್ತು ಬಿಜೆಪಿ ಗೆಲುವು ಕೇವಲ ದೇಶದಲ್ಲಿ ಮಾತ್ರವಲ್ಲ.. ಬದಲಿಗೆ ನೆರೆಯ ಪಾಕಿಸ್ತಾನದಲ್ಲೂ ಬಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಪಾಕಿಸ್ತಾನದಲ್ಲಿ ಭಾರತದ ಚುನಾವಣಾ ಫಲಿತಾಂಶವನ್ನು ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಲಾಗುತ್ತಿದೆ. ಆ ಮೂಲಕ ಪಾಕಿಸ್ತಾನದಲ್ಲೂ ಭಾರತದ ಲೋಕಸಭಾ ಚುನಾವಣೆ ಪ್ರಾಮುಖ್ಯತೆ ಪಡೆದಿದೆ.

ಇದಕ್ಕೆ ಇಂಬು ನೀಡುವಂತೆ ಪಾಕಿಸ್ತಾನದ ಮಾಜಿ ಮಾಹಿತಿ ಸಚಿವೆ ಹಾಗೂ ಪಾಕಿಸ್ತಾನ ಪೀಪಲ್ ಪಕ್ಷದ ನಾಯಕಿ ಶೆರ್ರಿ ರೆಹಮಾನ್ ಈ ಕುರಿತಂತೆ ಟ್ವೀಟ್ ಮಾಡಿದ್ದು, ಭಾರತದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನತ್ತ ದಾಪುಗಾಲಿರಿಸಿದೆ. ಎಕ್ಸಿಟ್ ಪೋಲ್ ನಂತೆಯೇ ಫಲಿತಾಂಶ ಬಂದರೆ, ಭಾರತ ಇನ್ನು ಮುಂದೆ ಮತ್ತಷ್ಟು ಕಠಿಣ ನೆರೆಯ ದೇಶವಾಗಲಿದೆ ಎಂಬ ಆತಂಕ ಅವರು ವ್ಯಕ್ತಪಡಿಸಿದ್ದಾರೆ. ಅಂತೆಯೇ ತಮ್ಮ ಐಎಸ್ಐ ಸಂಸ್ಥೆಯ ಸಾಮರ್ಥ್ಯದ ಕುರಿತು ಮಾತನಾಡಿರುವ ಅವರು ಮೋದಿ ಮಿಠಾಯಿಗೆ ಐಎಸ್ಐ ಹಲ್ಲು ಮಜುಭೂತಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಲೋಕಸಭಾ ಚುನಾವಣೆಯ ನೇರ ಪ್ರಸಾರ
ಇನ್ನು ಭಾರತದ ಲೋಕಸಭಾ ಚುನಾವಣೆ ಪಾಕಿಸ್ತಾನದಲ್ಲೂ ಭಾರಿ ಸದ್ದು ಮಾಡುತ್ತಿದ್ದು, ಪಾಕಿಸ್ತಾನದಲ್ಲಿ ಚುನಾವಣಾ ಫಲಿತಾಂಶವನ್ನೂ ಕೂಡ ನೇರ ಪ್ರಸಾರ ಮಾಡಲಾಗುತ್ತಿದೆ. ಪಾಕಿಸ್ತಾನ ಪ್ರಮುಖ ಸುದ್ಧಿ ಸಂಸ್ಥೆ ಡಾನ್ ಸೇರಿದಂತೆ ಹಲವು ಖ್ಯಾತನಾಮ ಪತ್ರಿಕೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ತತ್ ಕ್ಷಣದ ವರದಿ ಮಾಡುತ್ತಿವೆ. ಡಾನ್ ಸುದ್ದಿಸಂಸ್ಥೆ ಭಾರತದ ಲೋಕಸಭಾ ಚುನಾವಣೆಗಾಗಿಯೇ ಪ್ರತ್ಯೇಕ ವೆಬ್ ಪುಟವನ್ನು ತೆರೆದಿದ್ದು, ಡಾನ್ ಮಾತ್ರವಲ್ಲದೇ ಪಾಕಿಸ್ತಾನದ ಬಹುತೇಕ ಸುದ್ದಿ ಮಾಧ್ಯಮಗಳು ಚುನಾವಣಾ ಫಲಿತಾಂಶದ ಲೈವ್ ಕವರೇಜ್ ನೀಡುತ್ತಿವೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp