ನೋಟು ಬದಲಾದರೂ ಛಾಳಿ ಬದಲಿಸದ ಪಾಕ್; ನಕಲಿ ನೋಟು ದಂಧೆ ಅರೋಪದಲ್ಲಿ 6 ಮಂದಿ ಬಂಧನ

ನಕಲಿ ಭಾರತೀಯ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಮಾಫಿಯಾವನ್ನು ನೇಪಾಳ ಪೊಲೀರು ಬೇಧಿಸಿದ್ದು, ಈ ಸಂಬಂಧ ನಾಲ್ಕು ಮಂದಿ ಪಾಕಿಸ್ತಾನೀಯರು ಮತ್ತು ಇಬ್ಬರು ನೇಪಾಳಿಗರನ್ನು ಬಂಧಿಸಿದ್ದಾರೆ.
ನೇಪಾಳದಲ್ಲಿ ನಕಲಿ ಭಾರತೀಯ ನೋಟು ವಶಕ್ಕೆ
ನೇಪಾಳದಲ್ಲಿ ನಕಲಿ ಭಾರತೀಯ ನೋಟು ವಶಕ್ಕೆ
ಕಠ್ಮಂಡು: ನಕಲಿ ಭಾರತೀಯ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಮಾಫಿಯಾವನ್ನು ನೇಪಾಳ ಪೊಲೀರು ಬೇಧಿಸಿದ್ದು, ಈ ಸಂಬಂಧ ನಾಲ್ಕು ಮಂದಿ ಪಾಕಿಸ್ತಾನೀಯರು ಮತ್ತು ಇಬ್ಬರು ನೇಪಾಳಿಗರನ್ನು ಬಂಧಿಸಿದ್ದಾರೆ.
ನಕಲಿ ನೋಟು ಹಾವಳಿ ಮತ್ತು ಕಪ್ಪು ಹಣವನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ಮೋದಿ ನೋಟು ನಿಷೇಧ ಜಾರಿಗೆ ತಂದಿದ್ದರು. ಇದರಿಂದ ನಕಲಿ ಭಾರತೀಯ ರೂಪಾಯಿ ನೋಟುಗಳನ್ನು ಮುದ್ರಿಸುತ್ತಿದ್ದ ಪಾಕಿಸ್ತಾನದ ಹಲವು ಮುದ್ರಣಾಲಯಗಳು ಬೀಗ ಹಾಕಿವೆ ಎಂದೇ ಭಾವಿಸಲಾಗಿತ್ತು. ಆದರೆ ನೋಟು ಬದಲಾದರೂ ಛಾಳಿ ಬದಲಿಸದ ಪಾಕಿಗಳು ಹೆಚ್ಚು ಸುರಕ್ಷತಾ ಮಾನದಂಡವಿರುವ ಹೊಸ ಮಾದರಿಯ ಭಾರತೀಯ ರೂಪಾಯಿ ನೋಟುಗಳನ್ನೇ ಮುದ್ರಿಸಿ ಚಲಾವಣೆ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಬೃಹತ್ ಮಾಫಿಯಾವನ್ನು ಪೊಲೀಸರು ಬೇಧಿಸಿದ್ದು, ಲಕ್ಷಾಂತರ ಮೌಲ್ಯದ ನಕಲಿ ಭಾರತೀಯ ನೋಟುಗಳನ್ನು ಸಾಗಿಸುತ್ತಿದ್ದ ಗ್ಯಾಂಗ್ ವೊಂದನ್ನು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಈ ಪೈಕಿ ನಾಲ್ಕು ಮಂದಿ ಪಾಕಿಸ್ತಾನೀಯರು ಮತ್ತು ಇಬ್ಬರು ನೇಪಾಳಿಗರು ಇದ್ಜರು. ಬಂಧಿತರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ನೋಟುಗಳನ್ನು ಪಾಕಿಸ್ತಾನದಿಂದ ನೇಪಾಳಕ್ಕೆ ತಂದು ನೇಪಾಳದಿಂದ ಭಾರತಕ್ಕೆ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com