ಜೂನ್ 7 ಕ್ಕೆ 'ಮೇ' ರಾಜೀನಾಮೆ

ಬ್ರೆಕ್ಸಿಟ್ ಒತ್ತಡದ ಕಾರಣದಿಂದಾಗಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ಘೋಷಣೆ ಮಾಡಿದ್ದು, ಜೂನ್.7 ಕ್ಕೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

Published: 24th May 2019 12:00 PM  |   Last Updated: 24th May 2019 04:53 AM   |  A+A-


Theresa May to step down as British Prime Minister on June 7 amid Brexit pressure

ಜೂನ್ 7 ಕ್ಕೆ 'ಮೇ' ರಾಜೀನಾಮೆ

Posted By : SBV SBV
Source : The New Indian Express
ಲಂಡನ್: ಬ್ರೆಕ್ಸಿಟ್ ಒತ್ತಡದ ಕಾರಣದಿಂದಾಗಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ಘೋಷಣೆ ಮಾಡಿದ್ದು, ಜೂನ್.7 ಕ್ಕೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. 

ಕನ್ಸರ್ವೆಟೀವ್ ಪಕ್ಷದ ನಾಯಕಿಯ ಸ್ಥಾನಕ್ಕೆ ಥೆರೇಸಾ ಮೇ ರಾಜೀನಾಮೆ ಘೋಷಿಸಿದ್ದು, ಬ್ರಿಟನ್ ನ ಹಂಗಾಮಿ ಪ್ರಧಾನಿಯಾಗಿ ಮೇ ಮುಂದುವರೆಯಲಿದ್ದಾರೆ. ಮೇ ರಾಜೀನಾಮೆ ಹಿನ್ನೆಲೆಯಲ್ಲಿ ಯಾವುದೆ ಚುನಾವಣೆ ಇಲ್ಲದೇ ಇನ್ನು ಕೆಲವೇ ವಾರಗಳಲ್ಲಿ ಯುಕೆ ಕನ್ಸರ್ವೆಟೀವ್ ಪಕ್ಷದ ಮತ್ತೋರ್ವ ನಾಯಕ ಬ್ರಿಟನ್ ಪ್ರಧಾನಿ ಹುದ್ದೆಗೆ ನೇಮಕಗೊಳ್ಳಲಿದ್ದಾರೆ. 

ಬ್ರೆಕ್ಸಿಟ್ ಪ್ರಕಾರ ಬ್ರಿಟನ್ ನ್ನು ಯುರೋಪಿಯನ್ ಯೂನಿಯನ್ ನಿಂದ ನಿಗದಿತ ಸಮಯಕ್ಕೆ ಹೊರತರುವುದರಲ್ಲಿ ವಿಫಲರಾಗಿದ್ದಾರೆ ಎಂದು ಅವರದ್ದೇ ಪಕ್ಷದ ನಾಯಕರ ಅಸಮಾಧಾನಕ್ಕೆ ಥೆರೇಸಾ ಮೇ ಗುರಿಯಾಗಿದ್ದರು. ಈ ಒತ್ತಡದ ಪರಿಣಾಮ  ಥೆರೇಸಾ ಮೇ ರಾಜೀನಾಮೆ ಘೋಷಣೆ ಮಾಡಿದ್ದಾರೆ. 

ಬ್ರಿಟನ್ ಪ್ರಧಾನಿ ಹುದ್ದೆಗೆ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಬ್ರೆಕ್ಸಿಟ್ ನ ಬಲವಾದ ಸಮರ್ಥಕ ಬೊರಿಸ್ ಜಾನ್ಸನ್ ನೇಮಕವಾಗುವ ಸಾಧ್ಯತೆಗಳಿವೆ. 2016 ರಲ್ಲಿ ಥೆರೇಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 
Stay up to date on all the latest ಅಂತಾರಾಷ್ಟ್ರೀಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp