ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಮಹತ್ವದ ಸ್ಥಾನ: ಸಹಾಯಕ ಮಹಾ ಕಾರ್ಯದರ್ಶಿಯಾಗಿ ಅನಿತಾ ಭಾಟಿಯಾ ನೇಮಕ

ವಿಶ್ವಸಂಸ್ಥೆಯ ಸಂಪನ್ಮೂಲ ನಿರ್ವಹಣೆ, ಸುಸ್ಥಿರತೆ ಮತ್ತು ಸಹಭಾಗಿತ್ವದ ಸಹಾಯಕ ಮಹಾ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಮಹಿಳಾ ಉಪ ಕಾರ್ಯಕಾರಿ ನಿರ್ದೇಶಕಿಯಾಗಿ ಭಾರತದ....

Published: 31st May 2019 12:00 PM  |   Last Updated: 31st May 2019 03:11 AM   |  A+A-


Anita Bhatia

ಅನಿತಾ ಭಾಟಿಯಾ

Posted By : RHN RHN
Source : UNI
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಂಪನ್ಮೂಲ ನಿರ್ವಹಣೆ, ಸುಸ್ಥಿರತೆ ಮತ್ತು ಸಹಭಾಗಿತ್ವದ ಸಹಾಯಕ ಮಹಾ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಮಹಿಳಾ ಉಪ ಕಾರ್ಯಕಾರಿ ನಿರ್ದೇಶಕಿಯಾಗಿ ಭಾರತದ ಅನಿತಾ ಭಾಟಿಯಾ ಅವರನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೆನಿಯೋ ಗುಟೆರ್ರಸ್ ನೇಮಿಸಿದ್ದಾರೆ.

ಸೋಮಾಲಿಯಾಕ್ಕೆ ತಮ್ಮ ವಿಶೇಷ ಪ್ರತಿನಿಧಿಯಾಗಿ ಹಾಗೂ ಸೋಮಾಲಿಯಾದಲ್ಲಿ ವಿಶ್ವಸಂಸ್ಥೆಯ ಸಹಾಯಕ ಮಿಷನ್‌ನ ಹೊಸ ಮುಖ್ಯಸ್ಥರಾಗಿ ಅಮೆರಿಕದ ಜೇಮ್ಸ್ ಸ್ವಾನ್ ಅವರನ್ನು ಗುಟೆರ್ರೆಸ್ ನೇಮಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾದ ನಿಕೋಲಸ್ ಹೈಸೊಮ್‌ ಅವರ ಉತ್ತರಾಧಿಕಾರಿಯಾಗಿದ್ದಾರೆ. ಇವರ ಸೇವೆಗೆ ಮಹಾ ಪ್ರಧಾನ ಕಾರ್ಯದರ್ಶಿ ಕೃತಜ್ಞತೆ ಸಲ್ಲಿಸಿದ್ದಾರೆ

ಮಕ್ಕಳ ವಿರುದ್ಧದ ಹಿಂಸಾಚಾರ ಕುರಿತ ಹೊಸ ವಿಶೇಷ ಪ್ರತಿನಿಧಿಯಾಗಿ ಮೊರಕ್ಕೋದ ನಜತ್ ಮಾಲ್ಲಾ ಮಾಜಿದ್ ಅವರನ್ನು ನೇಮಕ ಮಾಡಲಾಗಿದೆ. ಸುರಕ್ಷತೆ ಮತ್ತು ಭದ್ರತೆಯ ಅಧೀನ ಮಹಾ ಕಾರ್ಯದರ್ಶಿಯಾಗಿ ಗಿಲ್ಲ್ಸ್ಮಿ ಚೌಡ್ ಅವರನ್ನು, ಜಿನೇವಾದಲ್ಲಿ ವಿಶ್ವಸಂಸ್ಥೆಯ ಕಚೇರಿಯ ಮಹಾ ನಿರ್ದೇಶಕರಾಗಿ ರಷ್ಯಾದ ತಾತಿಯಾನ ವಲೊವಯ ಅವರನ್ನು ನೇಮಿಸಿ, ಗುಟೆರ್ರೆಸ್ ಆದೇಶ ಹೊರಡಿಸಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp