ಇಮ್ರಾನ್ ಖಾನ್
ಇಮ್ರಾನ್ ಖಾನ್

ಕರ್ತಾರ್ ಪುರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಪಾಸ್ ಪೋರ್ಟ್, ಶುಲ್ಕದಿಂದ ವಿನಾಯ್ತಿ: ಇಮ್ರಾನ್ ಖಾನ್ 

ಗುರು ನಾನಕ್ ರ 550ನೇ ಜಯಂತಿ ಅಂಗವಾಗಿ ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಇಸ್ಲಾಮಾಬಾದ್: ಗುರು ನಾನಕ್ ರ 550ನೇ ಜಯಂತಿ ಅಂಗವಾಗಿ ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಮೊದಲ ಎರಡು ದಿನ ಪ್ರವೇಶ ಶುಲ್ಕ ವಿನಾಯ್ತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.


ಗುರುನಾನಕ್ ದೇವರ ಜಯಂತಿ ಕಾರ್ಯಕ್ರಮ ಮತ್ತು ಕರ್ನಾರ್ ಪುರ ಕಾರಿಡಾರ್ ಉದ್ಘಾಟನೆ ದಿನ ಅಲ್ಲಿಗೆ ಹೋಗುವ ಭಾರತೀಯ ಯಾತ್ರಿಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.


ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಇಮ್ರಾನ್ ಖಾನ್, ಕರ್ತಾರ್ ಪುರಕ್ಕೆ ಹೋಗುವ ಯಾತ್ರಿಕರಿಗೆ ಎರಡು ವಿಷಯಗಳಿಂದ ವಿನಾಯ್ತಿ ನೀಡಲಾಗಿದೆ. ಅಲ್ಲಿಗೆ ಹೋಗುವ ಭಾರತೀಯರು ಪಾಸ್ ಪೋರ್ಟ್ ಹೊಂದಬೇಕಾಗಿಲ್ಲ ಯಾವುದಾದರೂ ಗುರುತು ಪತ್ರ ಹೊಂದಿದ್ದರೆ ಸಾಕು ಮತ್ತು ಮುಂಚೆಯೇ ಬುಕ್ಕಿಂಗ್ ಮಾಡುವ ಅಗತ್ಯ ಕೂಡ ಇಲ್ಲ ಎಂದಿದ್ದಾರೆ.


ಭಾರತದಿಂದ ಕರ್ತಾರ್ ಪುರಕ್ಕೆ ಬರುವ ಯಾತ್ರಿಕರಿಗೆ ನಾನು ಪಾಸ್ ಪೋರ್ಟ್ ಮತ್ತು ಮುಂಗಡ ಬುಕ್ಕಿಂಗ್ ನಿಂದ ವಿನಾಯ್ತಿ ನೀಡಿದ್ದೇನೆ. ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆ ದಿನ ಮತ್ತು ಗುರುನಾನಕ್ ರ 550ನೇ ಜಯಂತಿ ದಿನ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.


ಕರ್ತಾರ್ ಪುರ ಗುರುದ್ವಾರಕ್ಕೆ ಪ್ರಯಾಣಿಸುವ ಭಾರತೀಯ ಯಾತ್ರಿಕರಿಗೆ 20 ಡಾಲರ್ ಸೇವೆ ಶುಲ್ಕ ವಿಧಿಸುವ ಪಾಕಿಸ್ತಾನದ ಪ್ರಸ್ತಾವನೆಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com