ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ ಪಾಕ್ ಗಾಯಕಿ ರಬಿ ಪಿರ್ಜಾಡಾ ನಗ್ನ ವಿಡಿಯೋ ವೈರಲ್!

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್ ಗಾಯಕಿ ರಬಿ ಪಿರ್ಜಾಡಳ ನಗ್ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಬಿ ಪಿರ್ಜಾಡಾ
ರಬಿ ಪಿರ್ಜಾಡಾ

ಇಸ್ಲಾಮಾಬಾದ್ :ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್ ಗಾಯಕಿ ರಬಿ ಪಿರ್ಜಾಡಾಳ ನಗ್ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಖಾಸಗಿ ವಿಡಿಯೋ ವೈರಲ್ ಆಗುತ್ತಿದ್ದಂತೆ ದಿಗಿಲುಗೊಂಡ ರಬಿ ಪಿರ್ಜಾಡಾ,  ಇವುಗಳನ್ನು ಪಾರ್ವಡ್ ಮಾಡದಂತೆ ತಡೆಯೊಡುವಂತೆ ಟ್ವೀಟರ್ ಸಂಸ್ಥೆಯನ್ನು ಕೇಳಿಕೊಂಡಿದ್ದಾರೆ. ಯಾವ ಕಾರಣಕ್ಕೆ ಈಕೆಯ ಖಾಸಗಿ ವಿಡಿಯೋಗಳು ಬಹಿರಂಗಗೊಂಡಿವೆ ಎಂಬುದು ತಿಳಿದುಬಂದಿಲ್ಲ.

ಆದಾಗ್ಯೂ,  ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಾಫೂರ್ ಜೊತೆಗಿನ ವಾಗ್ವಾದವೇ ಇದಕ್ಕೆ ಕಾರಣ ಎಂದು ಅನೇಕ ಮಂದಿ ಟ್ವೀಟ್ ಮಾಡುತ್ತಿದ್ದಾರೆ. 

ಐಟಂ ಸಾಂಗ್ಸ್ ಗಳನ್ನು ಸಮರ್ಥಿಸಿಕೊಂಡ ಗಾಫೂರ್ ಅವರನ್ನು ರಬಿ ಟೀಕಿಸಿದ ನಂತರ ಆಕೆಯ ಖಾಸಗಿ ವಿಡಿಯೋಗಳು ಬಹಿರಂಗವಾಗುತ್ತಿವೆ ಎಂದು ಟ್ವೀಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಆದಾಗ್ಯೂ, ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ತಿಳಿದುಬಂದಿಲ್ಲ ಎಂದು ಅನೇಕ ಮಂದಿ ಹೇಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com