ಟ್ರಂಪ್ ವ್ಯಾಪಾರ ನೀತಿ: ಚೀನಾ ಉತ್ಪನ್ನಗಳ ಆಮದು ಪ್ರಮಾಣ 35 ಬಿಲಿಯನ್ ಡಾಲರ್ ನಷ್ಟು ಕಡಿತ

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟಿನಿಂದ ಎರಡೂ ದೇಶಗಳಿಗೆ ಆರ್ಥಿಕ ಹಾನಿಯುಂಟು ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟಿನಿಂದ ಎರಡೂ ದೇಶಗಳಿಗೆ ಆರ್ಥಿಕ ಹಾನಿಯುಂಟು ಮಾಡಿದೆ.

ಚೀನಾ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕ ಹೆಚ್ಚಿನ ಸುಂಕ ವಿಧಿಸಿದ್ದರಿಂದ, ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಆಮದು ಪ್ರಮಾಣ 35 ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆ ವ್ಯಾಪಾರ ಮತ್ತು ಅಭಿವೃದ್ಧಿಯ ಸಮಾವೇಶ (ಯುಎನ್ ಸಿಟಿಎಡಿ) ಬಹಿರಂಗಪಡಿಸಿದೆ.

ಈ ವಿಶ್ಲೇಷಣೆಯ ಪ್ರಕಾರ, ಅಮೆರಿಕ ರಫ್ತು ಸುಂಕದಲ್ಲಿ ಶೇ. 25ರಷ್ಟು ನಷ್ಟವಾಗಿದ್ದು, 2019ರ ಮೊದಲಾರ್ಧದಲ್ಲಿ ಅಮೆರಿಕದ ಮಾರುಕಟ್ಟೆಗೆ ಚೀನಾದಿಂದ ಆಮದಾಗುತ್ತಿದ್ದ ಸುಂಕಸಹಿತ ಉತ್ಪನ್ನಗಳು 35 ಅಮೆರಿಕನ್ ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿದೆ ಎಂದು ಯುಎನ್ ಸಿಟಿಎಡಿ ಪತ್ರಿಕಾ ಹೇಳಿಕೆ ತಿಳಿಸಿದೆ.

ಚೀನಾ ಉತ್ಪನ್ನಗಳ ಮೇಲೆ ಸುಂಕ ವಿಧಿಸಿರುವುದು ಎರಡೂ ರಾಷ್ಟ್ರಗಳಿಗೆ ಹಾನಿಯುಂಟುಮಾಡಿದೆ. ಅದರಲ್ಲೂ ಹೆಚ್ಚಾಗಿ ಅಮೆರಿಕದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಯುಎನ್ ಸಿಟಿಎಡಿ ವರದಿ ಎಚ್ಚರಿಕೆ ನೀಡಿದೆ.

ಈ ಬಿಕ್ಕಟ್ಟಿನ ಲಾಭವನ್ನು ತೈವಾನ್ ಪಡೆದುಕೊಂಡಿದ್ದು, ವರ್ಷದ ಮೊದಲಾರ್ಧದಲ್ಲಿ ಅಮೆರಿಕ್ಕೆ 4.2 ಬಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ಉತ್ಪನ್ನಗಳನ್ನು ಅಮೆರಿಕ ಮಾರುಕಟ್ಟೆಗೆ ರಫ್ತು ಮಾಡಿದೆ ಎಂದು ವರದಿ ತಿಳಿಸಿದೆ.

ಮೆಕ್ಸಿಕೋ ಕೂಡ ತನ್ನ ರಫ್ತು ಪ್ರಮಾಣವನ್ನು ಹೆಚ್ಚಿಸಿದ್ದು, ಮುಖ್ಯವಾಗಿ ಕೃಷಿ- ಆಹಾರ, ಸಾರಿಗೆ ಉಪಕರಣಗಳು ಮತ್ತು ಎಲೆಕ್ಟ್ರಿಕ್ ಯಂತ್ರೋಪಕರಣಗಳ ವಲಯಗಳ ಕ್ಷೇತ್ರದಲ್ಲಿ 3.5 ಬಿಲಿಯನ್ ಡಾಲರ್ ನಷ್ಟು ರಫ್ತು ಪ್ರಮಾಣ ಹೆಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com