ಇಮ್ರಾನ್ ಖಾನ್ ಗೆ ಸೆಡ್ಡು ಹೊಡೆದ ಪಾಕ್ ಸೇನೆ! ಕರ್ತಾರ್‌ಪುರ ಪ್ರವೇಶಿಸುವ ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಕಡ್ಡಾಯ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೆಡ್ಡು ಹೊಡೆದಿರುವ ಪಾಕ್ ಸೇನೆ ಕರ್ತಾರ್‌ಪುರಕ್ಕೆ ಭೇಟಿ ನೀಡುವ ಬಾರತೀಯ ಯಾತ್ರಾರ್ಥಿಗಳಿಗೆ  ಪಾಸ್‌ಪೋರ್ಟ್ ಕಡ್ದಾಯದಿಂದ ವಿನಾಯಿತಿ ನೀಡುವ ಆದೇಶವನ್ನು  ವಜಾಗೊಳಿಸಿದೆ. 
ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಹೊರಟು ನಿಂತ ಭಾರತೀಯ ಸಿಖ್ಖ್ ಯಾತ್ರಿಗಳು
ಪಾಕಿಸ್ತಾನದ ಕರ್ತಾರ್‌ಪುರಕ್ಕೆ ಹೊರಟು ನಿಂತ ಭಾರತೀಯ ಸಿಖ್ಖ್ ಯಾತ್ರಿಗಳು

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೆಡ್ಡು ಹೊಡೆದಿರುವ ಪಾಕ್ ಸೇನೆ ಕರ್ತಾರ್‌ಪುರಕ್ಕೆ ಭೇಟಿ ನೀಡುವ ಬಾರತೀಯ ಯಾತ್ರಾರ್ಥಿಗಳಿಗೆ  ಪಾಸ್‌ಪೋರ್ಟ್ ಕಡ್ದಾಯದಿಂದ ವಿನಾಯಿತಿ ನೀಡುವ ಆದೇಶವನ್ನು  ವಜಾಗೊಳಿಸಿದೆ.

ನವೆಂಬರ್ 1ರಂದು ಪಾಕ್ ಪ್ರಧಾನಿ ಖಾನ್ ಟ್ವೀಟ್ ಮಡಿ ಭಾರತದಿಂದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ ತೀರ್ಥಯಾತ್ರೆಗಾಗಿ ಪ್ರಯಾಣಿಸುವ ಸಿಖ್ಖ್ಯಾತ್ರಿಕರಿಗೆ ಎರಡು ಪ್ರಮುಖ ಅವಶ್ಯಕತೆಗಳನ್ನು ತಮ್ಮ ಸರ್ಕಾರ ಮನ್ನಾ ಮಾಡಿದೆ.ಭಾರತೀಯ ಸಿಖ್ಖ್ ಯಾತ್ರಾರ್ಥಿಗಳು ಇನ್ನು ಮುಂದೆ ತಮ್ಮ ಪಾಸ್‌ಪೋರ್ಟ್ತರುವ ಅಗತ್ಯವಿಲ್ಲ. ಕರ್ತಾರ್‌ಪುರ ತೀರ್ಥಯಾತ್ರೆಗೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಅಧಿಕೃತ ಮಾನ್ಯತೆ ಪಡೆದ ಗುರುತಿನ ಚೀಟಿಯಷ್ಟೇ ಅಗತ್ಯವಾಗಿರಲಿದೆ. ಎಂದಿದ್ದರು.

ಅಷ್ಟೇ ಅಲ್ಲದೆ ಗುರುದ್ವಾರಕ್ಕೆ  ಭೇಟಿ ನೀಡುವ ಸಿಖ್ಖರು ಇನ್ನು ಮುಂದೆ ಹತ್ತು ದಿನಗಳ ಮುಂಚಿತವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ನಲ್ಲಿ ತಿಳಿಸಿದ್ದರು.

ನವೆಂಬರ್ 9ರಂದು ಕರ್ತಾರ್‌ಪುರ ಕಾರಿಡಾರ್ ತೆರೆದಾಗ ಹಾಗೂ ವೆಂಬರ್ 12 ರಂದು ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆ ದಿನದಂದು ಯಾತ್ರಾರ್ಥಿಗಳಿಂದ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ಖಾನ್ ಹೇಳಿದ್ದಾರೆ.

ಆದರೆ ಪಾಕಿಸ್ತಾನ ಪ್ರಧಾನಿ, ಸರ್ಕಾರದ ಮೇಲೆ ನಿಯಂತ್ರಣ ಹೊಂದಿರುವ ಪಾಕ್ ಸೇನೆ ಈಗ ಅವರ ನಿರ್ಧಾರವನ್ನು ತನ್ನ ವಿಟೋ ಅಧಿಕಾರ ಬಳಸಿ ಬದಲಿಸಿದೆ.ಅದರಂತೆ ಪಾಕ್ ನಲ್ಲಿರುವ ಕರ್ತಾರ್‌ಪುರ ಗುರುದ್ವಾರಕ್ಕೆ ತೆರಳುವುದಕ್ಕೆ ಸಿಖ್ಖ್ ಯಾತ್ರಿಕರು ಪಾಸ್‌ಪೋರ್ಟ್ಹೊಂದೊರುವುದು ಕಡ್ಡಾಯವಾಗಲಿದೆ.

ಭಾರತೀಯ ಸಿಖ್ಖ್ ಯಾತ್ರಾರ್ಥಿಗಳಿಗೆ ಕರ್ತಾರ್‌ಪುರ ಕಾರಿಡಾರ್ ಬಳಸಲು ಪಾಸ್‌ಪೋರ್ಟ್ ಅಗತ್ಯವಿರುತ್ತದೆ ಎಂದು ಮೇಜ್ ಜನರಲ್ ಘಫೂರ್ ಬುಧವಾರ ಹೇಳಿದ್ದಾರೆ ಎಂದು ಹಮ್ ನ್ಯೂಸ್ ಚಾನೆಲ್ ಉಲ್ಲೇಖಿಸಿ ಡಾನ್ ನ್ಯೂಸ್ ಹೇಳಿದೆ."ನಮ್ಮಲ್ಲಿ ಸೆಕ್ಯುರಿಟಿ ಲಿಂಕ್ ಇರುವುದರಿಂದ ಪಾಸ್‌ಪೋರ್ಟ್ ಆಧಾರಿತ ಗುರುತಿನ ಮೇಲೆ ಪ್ರವೇಶವು ಕಾನೂನುಬದ್ಧವಾಗಿರುತ್ತದೆ. ಭದ್ರತೆ ಅಥವಾ ಸಾರ್ವಭೌಮತ್ವದ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ" ಎಂದು ಘಫೂರ್ ಹೇಳಿದರು.

ಕರ್ತಾರ್‌ಪುರ ಕಾರಿಡಾರ್ ನವೆಂಬರ್ 9ರಂದು ಯಾತ್ರಾರ್ಥಿಗಳಿಗೆತೆರೆಯುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com