ಒಂಟಿ ಸಲಗದ ಸಿಟ್ಟು: ಕಾರನ್ನು ಅಡ್ಡಗಟ್ಟಿ ಟಾಪ್ ಮೇಲೆ ಕುಳಿತ ಆನೆ, ಒಳಗಿದ್ದರ ಹೃದಯ ಢವಢವ, ವಿಡಿಯೋ ವೈರಲ್!

ಆಕ್ರೋಶಗೊಂಡ ಆನೆಗಳು ಕೆಲವೊಮ್ಮೆ ಕಾರುಗಳನ್ನು ಉಲ್ಟಾ ಮಾಡಿರುವ ವಿಡಿಯೋಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಂದು ಒಂಟಿ ಸಲಗ ಸಿಟ್ಟಿನಲ್ಲಿ ಕಾರಿನ ಟಾಪ್ ಮೇಲೆ ಕುಳಿತುಕೊಂಡಿದ್ದು ಕಾರಿನಲ್ಲಿ ಕುಳಿತ್ತಿದ್ದವರು ಪತರಗುಟ್ಟಿ ಹೋಗಿದ್ದಾರೆ. 

Published: 10th November 2019 12:35 PM  |   Last Updated: 10th November 2019 12:36 PM   |  A+A-


Elephant Attack

ಆನೆ ದಾಳಿ

Posted By : Vishwanath S
Source : Online Desk

ಬ್ಯಾಂಕಾಕ್: ಆಕ್ರೋಶಗೊಂಡ ಆನೆಗಳು ಕೆಲವೊಮ್ಮೆ ಕಾರುಗಳನ್ನು ಉಲ್ಟಾ ಮಾಡಿರುವ ವಿಡಿಯೋಗಳನ್ನು ನೋಡಿರುತ್ತೀರಾ. ಆದರೆ ಇಲ್ಲೊಂದು ಒಂಟಿ ಸಲಗ ಸಿಟ್ಟಿನಲ್ಲಿ ಕಾರಿನ ಟಾಪ್ ಮೇಲೆ ಕುಳಿತುಕೊಂಡಿದ್ದು ಕಾರಿನಲ್ಲಿ ಕುಳಿತ್ತಿದ್ದವರು ಪತರಗುಟ್ಟಿ ಹೋಗಿದ್ದಾರೆ. 

ಥೈಲ್ಯಾಂಡ್ ನಲ್ಲಿ ದೈತ್ಯ ಆನೆಯೊಂದು ರಸ್ತೆ ಮಧ್ಯೆ ಕಾರೊಂದನ್ನು ಅಡ್ಡಗಟ್ಟಿ ಟಾಪ್ ಮೇಲೆ ಕುಳಿತುಕೊಂಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಖಾವೊ ಯೈ ರಾಷ್ಟ್ರೀಯ ಉದ್ಯಾನವದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಆನೆ ಬರುತ್ತಿದ್ದನ್ನು ಗಮನಿಸಿದ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಇನ್ನು ಕಾರಿನ ಹತ್ತಿರಕ್ಕೆ ಬಂದ ಆನೆ ಕಾರಿನ ಟಾಪ್ ಮೇಲೆ ಕುಳಿತುಕೊಂಡಿದೆ. ಆನೆಯ ಭಾರಕ್ಕೆ ಕಾರಿನ ಟಾಪ್ ನಜ್ಜಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp