ಅಯೋಧ್ಯೆ ತೀರ್ಪು ಎಫೆಕ್ಟ್: ಪಾಕ್‍ನಲ್ಲಿ ಹಿಂದು ದೇವಾಲಯಗಳ ನವೀಕರಿಸಲು ಮುಂದಾದ ಇಮ್ರಾನ್ ಖಾನ್!

ಅಯೋಧ್ಯೆ ತೀರ್ಮಾನ  ಪ್ರಕಟವಾಗುತ್ತಿದ್ದಂತೆಯೇ ಅತ್ತ ಕಡೆ  ಹಿಂದೂ ಸಮುದಾಯದ  ಬೇಡಿಕೆಯನ್ನು ಪರಿಗಣಿಸಿ, ಮುಚ್ಚಿದ ಹಿಂದೂ ದೇವಾಲಯಗಳನ್ನು ಮತ್ತೆ ತೆರೆಯಲು ಮತ್ತು ಅವುಗಳನ್ನು ನವೀಕರಿಸಲು ಇಮ್ರಾನ್  ಇಮ್ರಾನ್ ಖಾನ್ ಸರ್ಕಾರ ನಿರ್ಧರಿಸಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಅಯೋಧ್ಯೆ ತೀರ್ಮಾನ  ಪ್ರಕಟವಾಗುತ್ತಿದ್ದಂತೆಯೇ ಅತ್ತ ಕಡೆ  ಹಿಂದೂ ಸಮುದಾಯದ  ಬೇಡಿಕೆಯನ್ನು ಪರಿಗಣಿಸಿ, ಮುಚ್ಚಿದ ಹಿಂದೂ ದೇವಾಲಯಗಳನ್ನು ಮತ್ತೆ ತೆರೆಯಲು ಮತ್ತು ಅವುಗಳನ್ನು ನವೀಕರಿಸಲು ಇಮ್ರಾನ್  ಇಮ್ರಾನ್ ಖಾನ್ ಸರ್ಕಾರ ನಿರ್ಧರಿಸಿದೆ.

ಪಾಕಿಸ್ತಾನದ ಹಿಂದೂ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ, ಮುಚ್ಚಿದ ಹಿಂದೂ ದೇವಾಲಯಗಳನ್ನು ಮತ್ತೆ ತೆರೆಯಲು ಮತ್ತು ಅವುಗಳನ್ನು ನವೀಕರಿಸಲು ಇಮ್ರಾನ್ ಖಾನ್ ಸರ್ಕಾರ ನಿರ್ಧರಿಸಿದೆ ಎಂದು  ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ .

ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ವಕ್ತಾರ ಅಹ್ಮದ್ ಜವಾದ್ ಅವರು ಸರ್ಕಾರದ 10 ಸಾಧನೆಗಳ ವಿವರಗಳನ್ನು ಬಿಡುಗಡೆ ಮಾಡುವಾಗ ಈ ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ. ಈ ದೇವಾಲಯಗಳನ್ನು ಮತ್ತೆ ತೆರೆಯಬೇಕೆಂದು ದೇಶದಲ್ಲಿ ಹಿಂದೂ ಸಮುದಾಯ ಒತ್ತಾಯ ಮಾಡಿದ್ದು, ಈ ಬೇಡಿಕೆಯನ್ನು ಒಪ್ಪಿ ಸರ್ಕಾರ ಈ ದೇವಾಲಯಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com