ನಿಗದಿಯಂತೆ ಭಾರತಕ್ಕೆ ಎಸ್-400 ಕ್ಷಿಪಣಿ ಪೂರೈಸುತ್ತೇವೆ: ವ್ಲಾಡಿಮಿರ್ ಪುಟಿನ್ 

ನಿಗದಿಯಂತೆ ಭಾರತಕ್ಕೆ ರಷ್ಯಾ ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಈ ಬಹು ಶತಕೋಟಿ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಮೆರಿಕಾದ ವಿರೋಧವಿದೆ.
ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ
ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ

ಬ್ರೆಸಿಲಿಯಾ: ನಿಗದಿಯಂತೆ ಭಾರತಕ್ಕೆ ರಷ್ಯಾ ಎಸ್ -400 ದೀರ್ಘ-ಶ್ರೇಣಿಯ ಮೇಲ್ಮೈ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಈ ಬಹು ಶತಕೋಟಿ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಮೆರಿಕಾದ ವಿರೋಧವಿದೆ.


ಎಸ್-400 ಟ್ರಯಂಫ್‌ನ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಯನ್ನು 2015ರಲ್ಲಿ ಖರೀದಿಸುವುದಾಗಿ ಭಾರತ ಘೋಷಿಸಿಕೊಂಡಿತ್ತು. ಕಳೆದ ವರ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಬಂದಿದ್ದ ವೇಳೆ 5.43 ಶತಕೋಟಿ ಡಾಲರ್ ಮೊತ್ತದ ಕ್ಷಿಪಣಿ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.


ಎಸ್-400 ಕ್ಷಿಪಣಿ ಪೂರೈಕೆ ವೇಳೆ ಅಂದುಕೊಂಡಂತೆ ಎಲ್ಲವೂ ನಡೆಯಲಿದೆ ಎಂದು ವ್ಲಾಡಿಮಿರ್ ಪುಟಿನ್ ಸುದ್ದಿಗಾರರಿಗೆ ನಿನ್ನೆ ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾದಲ್ಲಿ ಬ್ರಿಕ್ಸ್ ಶೃಂಗಸಭೆಯ ಹೊರಗೆ ತಿಳಿಸಿದರು.


ಪ್ರತಿಯೊಂದೂ ಯೋಜನೆ ಪ್ರಕಾರವೇ ಹೋಗುತ್ತಿರುವುದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕ್ಷಿಪಣಿ ಪೂರೈಕೆ ವ್ಯವಹಾರವನ್ನು ತ್ವರಿತಗೊಳಿಸುವಂತೆ ಕೇಳಿಕೊಂಡಿಲ್ಲ ಎಂದು ಪುಟಿನ್ ಹೇಳಿರುವುದಾಗಿ ರಷ್ಯಾ ಸರ್ಕಾರದ ಅಧಿಕಾರಿಗಳು ಟಾಸ್ ಸುದ್ದಿಸಂಸ್ಥೆಗೆ ವರದಿ ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ರಿಕ್ಸ್ ಶೃಂಗಸಭೆಯ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಿ ಅದರಲ್ಲಿ ಆಗಿರುವ ಸುಧಾರಣೆಗಳು ಮತ್ತು ವಿಶೇಷ ಕಾರ್ಯತಂತ್ರ ಸಹಭಾಗಿತ್ವವನ್ನು ಉತ್ತೇಜಿಸಲು ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.


ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಾಮಗ್ರಿಗಳನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧ ಹೇರುವಂತೆ ಅಮೆರಿಕಾ ಡೊನಾಲ್ಡ್ ಟ್ರಂಪ್ ಸರ್ಕಾರ ಬೆದರಿಕೆ ಹಾಕಿದ್ದು ಎಸ್-400 ಒಪ್ಪಂದಕ್ಕೆ ಕೂಡ ಅಮೆರಿಕಾ ವಿರೋಧ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com