ಎಲ್ಲಾ ರೀತಿಯ ರಾಜಕೀಯ ಜಾಹೀರಾತುಗಳಿಗೆ ನಿಷೇಧ ಹೇರಿದ ಟ್ವಿಟ್ಟರ್ 

ಟ್ವಿಟ್ಟರ್ ಸೋಷಿಯಲ್ ಮೀಡಿಯಾ ಎಲ್ಲಾ ರೀತಿಯ ರಾಜಕೀಯ ಜಾಹೀರಾತುಗಳಿಗೆ ಅಧಿಕೃತವಾಗಿ ನಿಷೇಧ ಹೇರಿದೆ. 
ಟ್ವಿಟ್ಟರ್ ಚಿಹ್ನೆ
ಟ್ವಿಟ್ಟರ್ ಚಿಹ್ನೆ

ಸಾನ್ ಫ್ರಾನ್ಸಿಸ್ಕೊ: ಟ್ವಿಟ್ಟರ್ ಸೋಷಿಯಲ್ ಮೀಡಿಯಾ ಎಲ್ಲಾ ರೀತಿಯ ರಾಜಕೀಯ ಜಾಹೀರಾತುಗಳಿಗೆ ಅಧಿಕೃತವಾಗಿ ನಿಷೇಧ ಹೇರಿದೆ. 


ಅಭ್ಯರ್ಥಿಗಳು, ಪಕ್ಷಗಳು, ಸರ್ಕಾರಗಳು ಅಥವಾ ಅಧಿಕಾರಿಗಳು, ಸಾರ್ವಜನಿಕ ಖಾತೆ ಸಮಿತಿಗಳು(ಪಿಎಸಿ) ಮತ್ತು ಕೆಲವು ರಾಜಕೀಯ ಲಾಭರಹಿತ ಸಂಸ್ಥೆಗಳು ರಾಜಕೀಯ ವಿಷಯಗಳನ್ನು ಇನ್ನು ಮುಂದೆ ಟ್ವಿಟ್ಟರ್ ನಲ್ಲಿ ಹಾಕಿ ಪ್ರಚಾರ ಮಾಡುವಂತಿಲ್ಲ. 
ಜಾಗತಿಕ ಮಟ್ಟದಲ್ಲಿ ಟ್ವಿಟ್ಟರ್ ರಾಜಕೀಯ ವಿಷಯಗಳಿಗೆ ನಿಷೇಧ ಹೇರಿದೆ. ರಾಜಕೀಯ ವಿಷಯಗಳನ್ನು ನಾವು ಖರೀದಿಸಬಾರದು ಅದನ್ನು ತಾನಾಗಿಯೇ ಸಂಪಾದಿಸಬೇಕು ಎಂದು ಟ್ವಿಟ್ಟರ್ ಸಂಸ್ಥೆ ಹೇಳಿದೆ.


ರಾಜಕೀಯ ಜಾಹೀರಾತುಗಳೆಂದರೆ,ರಾಜಕೀಯ ವಿಷಯಗಳನ್ನು ಉಲ್ಲೇಖಿಸುವಂತವುಗಳು, ಮತದಾರರಲ್ಲಿ ಮನವಿ ಮಾಡಿಕೊಳ್ಳುವುದು, ಹಣಕಾಸು ನೆರವು ಕೇಳುವುದು, ಯಾವುದೇ ರೀತಿಯ ರಾಜಕೀಯ ವಿಷಯದ ಪರವಾಗಿ ಅಥವಾ ವಿರುದ್ಧವಾಗಿ ವಕಾಲತ್ತು ವಹಿಸುವುದನ್ನು ಈ ನೀತಿಯಡಿಯಲ್ಲಿ ನಿಷೇಧಿಸಲಾಗಿದೆ ಎಂದು ಟ್ವಿಟ್ಟರ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com