ಭಾರತದ ಬೆನ್ನಲ್ಲೇ ಶಾಹೀನ್ ಕ್ಷಿಪಣಿಯನ್ನು ಪರೀಕ್ಷಿಸಿ ಎಚ್ಚರಿಕೆ ನೀಡಿದ ಪಾಕಿಸ್ತಾನ!

ಮೊನ್ನೆಯಷ್ಟೇ ಭಾರತ ಅಗ್ನಿ-2 ಕ್ಷಿಪಣಿಯನ್ನು ಪರೀಕ್ಷೆಯನ್ನು  ಯಶಸ್ವಿಯಾಗಿ ನಡೆಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸಹ ಕ್ಷಿಪಣಿ ಪರೀಕ್ಷೆ ನಡೆಸಿ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಶಾಹೀನ್ ಕ್ಷಿಪಣಿ
ಶಾಹೀನ್ ಕ್ಷಿಪಣಿ

ಇಸ್ಲಾಮಾಬಾದ್: ಮೊನ್ನೆಯಷ್ಟೇ ಭಾರತ ಅಗ್ನಿ-2 ಕ್ಷಿಪಣಿಯನ್ನು ಪರೀಕ್ಷೆಯನ್ನು  ಯಶಸ್ವಿಯಾಗಿ ನಡೆಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸಹ ಕ್ಷಿಪಣಿ ಪರೀಕ್ಷೆ ನಡೆಸಿ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವಿರುವ ಅಗ್ನಿ-2 ಕ್ಷಿಪಣಿಯನ್ನು ರಾತ್ರಿಯಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು. ಅಗ್ನಿ-2 ಕ್ಷಿಪಣಿ 2000 ಕಿ.ಮೀ ದೂರದವರೆಗಿನ ದಾಳಿ ವ್ಯಾಪ್ತಿಯನ್ನು ಹೊಂದಿದೆ. 

ಇದೀಗ ಪಾಕಿಸ್ತಾನ ಸಹ ಇಂದು ಶಾಹೀನ್-1 650 ಕಿ.ಮೀ ದೂರದ ಗುರಿಯನ್ನು ಪುಟಿಗಟ್ಟುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ ಎಂದು ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್ ತಿಳಿಸಿದ್ದಾರೆ. 

ಆಗಸ್ಟ್ ನಲ್ಲಿ ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಅದಾದ ಬಳಿಕ ಇದೀಗ ಶಾಹೀನ್ -1 ಕ್ಷಿಪಣಿ ಪರೀಕ್ಷೆ ನಡೆಸಿದೆ. ಪ್ರಸಕ್ತ ವರ್ಷದಲ್ಲಿ ಇದು ನಾಲ್ಕನೇ ಕ್ಷಿಪಣಿ ಪರೀಕ್ಷೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದಿತಿ ಬಳಿಕ ಪಾಕಿಸ್ತಾನ ಕಂಗೆಟ್ಟಿದ್ದು ಭಾರತದ ವಿರುದ್ಧ ಯುದ್ಧ ಸಾರುವ ಬೆದರಿಕೆಗಳನ್ನು ಹಾಕುತ್ತಾ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com