ಭಾರತಕ್ಕೆ 1 ಶತಕೋಟಿ ಡಾಲರ್ ಮೊತ್ತದ ನೌಕಾ ಗನ್ ಪೂರೈಸಲು ಟ್ರಂಪ್ ಸರ್ಕಾರ ಒಪ್ಪಿಗೆ 

ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಮತ್ತು ಸಾಗರ ತೀರದಲ್ಲಿ ಬಾಂಬ್ ಸ್ಫೋಟಕ್ಕೆ ಬಳಸುವ 1 ಶತಕೋಟಿ ಡಾಲರ್ ಮೊತ್ತದ ನೌಕಾ ಬಂದೂುಕುಗಳನ್ನು ಭಾರತಕ್ಕೆ ಮಾರಾಟ ಮಾಡುವಂತೆ ಯುಎಸ್ ಕಾಂಗ್ರೆಸ್ ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸೂಚಿಸಿದೆ.
ಎಂಕೆ-45 ಗನ್ ವ್ಯವಸ್ಥೆ
ಎಂಕೆ-45 ಗನ್ ವ್ಯವಸ್ಥೆ

ವಾಷಿಂಗ್ಟನ್: ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಮತ್ತು ಸಾಗರ ತೀರದಲ್ಲಿ ಬಾಂಬ್ ಸ್ಫೋಟಕ್ಕೆ ಬಳಸುವ 1 ಶತಕೋಟಿ ಡಾಲರ್ ಮೊತ್ತದ ನೌಕಾ ಬಂದೂುಕುಗಳನ್ನು ಭಾರತಕ್ಕೆ ಮಾರಾಟ ಮಾಡುವಂತೆ ಯುಎಸ್ ಕಾಂಗ್ರೆಸ್ ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸೂಚಿಸಿದೆ.


ಈ ನೌಕಾ ಬಂದೂಕಿನಿಂದ ಭಾರತೀಯ ನೌಕೆಯ ಯುದ್ಧ ಸಾಮರ್ಥ್ಯಗಳು ಹೆಚ್ಚಾಗಬಹುದು ಎಂಬ ವಿಶ್ವಾಸವಿದೆ. ಈ ನೌಕಾ ಬಂದೂಕು 13ಎಂಕೆ-455 ಇಂಚುಗಳಿದ್ದು/62 ಕ್ಯಾಲಿಬರ್ (ಎಂಒಡಿ 4) ಸಾಮರ್ಥ್ಯವನ್ನು ಹೊಂದಿದೆ. ಈ ನೌಕಾ ಬಂದೂಕು ಮತ್ತು ಸಂಬಂಧಿತ ಉಪಕರಣಗಳ ಅಂದಾಜು ವೆಚ್ಚ 1.0210 ಶತಕೋಟಿ ಡಾಲರ್ ಎಂದು ಅಮೆರಿಕಾದ ರಕ್ಷಣಾ ಭದ್ರತೆ ಸಹಕಾರ ಸಂಸ್ಥೆ ಯುಎಸ್ ಕಾಂಗ್ರೆಸ್ ಗೆ ಅಧಿಸೂಚನೆಯಲ್ಲಿ ತಿಳಿಸಿದೆ.


ಈ ನೌಕಾ ಬಂದೂಕನ್ನು ತಯಾರಿಸುತ್ತಿರುವುದು ಬಿಎಇ ಸಿಸ್ಟಮ್ಸ್ ಲ್ಯಾಂಡ್ ಅಂಡ್ ಆರ್ನಮೆಂಟ್ಸ್. ಇದರ ಖರೀದಿಯಿಂದ ಶತ್ರು ಆಯುದ್ಧ ವ್ಯವಸ್ಥೆಯ ಅಪಾಯದಿಂದ ಭಾರತದ ಇಂದಿನ ಮತ್ತು ಭವಿಷ್ಯದ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಎಂಕೆ -45 ಬಂದೂಕು ವ್ಯವಸ್ಥೆ ಯುಎಸ್ ಮತ್ತು ಇತರ ಮಿತ್ರ ಪಡೆಗಳೊಂದಿಗೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವಾಗ ಭೂಮಿ ಮೇಲಿನ ಯುದ್ಧ ಮತ್ತು ಅಂತರಿಕ್ಷ ಯುದ್ಧಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವನ್ನು ವಿಸ್ತರಿಸುತ್ತದೆ. 


ಸ್ಥಳೀಯ ಬೆದರಿಕೆಗಳು ಮತ್ತು ರಕ್ಷಣಾ ಇಲಾಖೆಯನ್ನು ಬಲವರ್ಧಿಸಲು ಭಾರತ ಈ ನೌಕಾ ಬಂದೂಕನ್ನು ಬಳಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com