ಭಾರತೀಯ ಮೂಲದ ಗರ್ಭಿಣಿ ಹತ್ಯೆ:, ಮಾಜಿ ಪತಿ ತಪ್ಪಿತಸ್ಥ-ಲಂಡನ್ ನ್ಯಾಯಾಲಯ ತೀರ್ಪು  

ಗರ್ಭಿಣಿಯಾಗಿದ್ದ ತನ್ನ ಭಾರತೀಯ ಮೂಲದ ಮಾಜಿ ಪತ್ನಿಯನ್ನು ಮಾರಕಾಸ್ತ್ರ ಬಳಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಲಂಡನ್ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಶಿಕ್ಷೆ ಜಾರಿ ಮಾಡಿದೆ.
 

Published: 23rd November 2019 09:45 AM  |   Last Updated: 23rd November 2019 09:45 AM   |  A+A-


ಭಾರತೀಯ ಮೂಲದ ಗರ್ಭಿಣಿ ಹತ್ಯೆ:, ಮಾಜಿ ಪತಿ ತಪ್ಪಿತಸ್ಥ-ಲಂಡನ್ ನ್ಯಾಯಾಲಯ ತೀರ್ಪು

Posted By : Raghavendra Adiga
Source : PTI

ಲಂಡನ್: ಗರ್ಭಿಣಿಯಾಗಿದ್ದ ತನ್ನ ಭಾರತೀಯ ಮೂಲದ ಮಾಜಿ ಪತ್ನಿಯನ್ನು ಮಾರಕಾಸ್ತ್ರ ಬಳಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಲಂಡನ್ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಶಿಕ್ಷೆ ಜಾರಿ ಮಾಡಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ತನ್ನ 35 ವರ್ಷದ ಮಾಜಿ ಪತ್ನಿ ದೇವಿ ಮೇಲೆ ಕ್ರಾಸ್ ಬೌ ಬಳಸಿ ದಾಳಿ ಮಾಡಿದ್ದ  ಮೂಲತಃ ಮಾರಿಷಸ್‌ನ ರಾಮನೋಡ್ಜ್ ಉನ್ಮಥಲ್ಲೆಗಡೂ ಎಂದು ದು ಓಲ್ಡ್ ಬೈಲಿ ನ್ಯಾಯಾಲಯಕ್ಕೆ ಮನವರಿಕೆಯಾಗಿದೆ.

ಎರಡು ಕ್ರಾಸ್ ಬೌಗಳಿಂದ ಶಸ್ತ್ರಸಜ್ಜಿತವಾದ ಉನ್ಮಥಲ್ಲೆಗಡೂ ಪೂರ್ವ ಲಂಡನ್ ಮನೆಯ ಉದ್ಯಾನದ ಕೊನೆಯಲ್ಲಿ ಶೆಡ್ ಒಳಗೆ ಅಡಗಿಕೊಂಡಿದ್ದ. ದೇವಿ ಮೇಲೆ ಹಲ್ಲೆ ಮಾಡಿದ್ದ. ದೇವಿ ಇಸ್ಲಾಂಗೆ ಮತಾಂತರಗೊಂಡ ನಂತರ ಪತಿ ಇಮ್ತಿಯಾಜ್ ಮತ್ತು ಐದು ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಉನ್ಮಥಲ್ಲೆಗಡೂ ಹೊಡೆದ 18 ಇಂಚು ಅಳತೆಯ ಬಾಣವು ದೇವಿಯ ಸೊಂಟವನ್ನು ಪ್ರವೇಶಿಸಿ ಆಕೆಯ ದೇಹದ ಮೂಲಕ ಹೊರಬಂದಿದೆ. ಇದರಿಂದಾಗಿ ಆಕೆಗೆ ಹುಟ್ಟಲಿರುವ ಮಗು ಪಾರಾಗಿದೆ."ಬಾಣದೇಹಕ್ಕೆ 14 ಇಂಚುಗಳಷ್ಟು ನುಗ್ಗಿದ್ದು ದೇವಿ ಸಾಕಷ್ಟು ಗಾಯಗಳನ್ನು ಕಂಡಿದ್ದಳು." ಎಂದು ಸ್ಕಾಟ್ಲೆಂಡ್ ಯಾರ್ಡ್‌ನ ಕೊಲೆ ತನಿಖೆಯ ನೇತೃತ್ವ ವಹಿಸಿದ್ದ ಡಿಟೆಕ್ಟಿವ್ ಸಾರ್ಜೆಂಟ್ ಅಮ್ಜದ್ ಷರೀಫ್ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯು ಆಂತರಿಕ ರಕ್ತಸ್ರಾವದಿಂದ ದೇವಿ ಸಾವನ್ನಪ್ಪಿದ್ದಳೆ ಎಂದು ಹೇಳೀದೆ. ಘಟನಾ ಸ್ಥಳದಲ್ಲಿ ಉನ್ಮಥಲ್ಲೆಗಾಡೂನನ್ನು ಬಂಧಿಸಲಾಯಿತು ಮತ್ತು ಮೆಟ್ರೋಪಾಲಿಟನ್ ಪೊಲೀಸರ ನರಹತ್ಯೆ ಮತ್ತು ಮೇಜರ್ ಕ್ರೈಮ್ ಕಮಾಂಡ್ ನ ಪತ್ತೆದಾರರು ನಡೆಸಿದ ತನಿಖೆಯಲ್ಲಿ ಅವರು ಹಲವಾರು ತಿಂಗಳ ಹಿಂದೆಯೇ ದಾಳಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದರು ಎಂದು ತಿಳಿದುಬಂದಿದೆ.

ದೇವಿಯು ಇಲ್ಫೋರ್ಡ್‌ನ ಪೂರ್ವ ಲಂಡನ್ ನಲ್ಲಿ ಉನ್ಮಥಲ್ಲೆಗಡೂ ಅವರ ಮದುವೆಯಿಂದ ಆದ ಮೂರು ಮಕ್ಕಳು ಃಆಗೂ ತನ್ನ ಎರಡನೇ ಪತಿಯ ಇಬ್ಬರು ಮಕ್ಕಳೊಡನೆ ವಾಸವಿದ್ದರು."ಮರುಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದ ತನ್ನ ಮಾಜಿ ಪತ್ನಿಯ ಬಗ್ಗೆ ಹೊಟ್ಟೆಕಿಚ್ಚು ಮತ್ತು ಅಸೂಯೆ ಭಾವನೆಯಿಂದ ಪ್ರೇರೇಪಿಸಲ್ಪಟ್ಟು 18 ಇಂಚಿನ ಬಾಣವನ್ನು ತುಂಬಿದ ಕ್ರಾಸ್ ಬೌ ಬಳಸಿ ಹತ್ಯೆ ಮಾಡಲಾಗಿದೆ.ಎಂಟು ತಿಂಗಳ ಗರ್ಭಿಣಿಯಾಗಿದ್ದ  ದೇವಿ ಮೆಟ್ಟಿಲ ಮೇಲೆ ಓಡಿ ಹೋಗಿ ಅವನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಳು. ಆದರೆ ಅದೃಷ್ಟವಶಾತ್ ಈ ಘಟನೆಯಿಂದ ಆಕೆಗೆ ಹುಟ್ಟಲಿರುವ ಮಗುವಿನ ಮೇಲೆ ಯಾವ ಪರಿಣಾಮವಾಗಿಲ್ಲ.

ಆರೋಪಿ ಬಂಧನದ ಬಳಿಕ ಪೋಲೀಸರು ಶೆಡ್ ನಲ್ಲಿ ಶೋಧ ನಡೆಸಿದಾಗ ಕ್ರಾಸ್ ಬೌ ಬಾಣಗಳು, ಒಳಗೊಂಡಿರುವ ಕಪ್ಪು ರಕ್ಸ್‌ಯಾಕ್ ಜೊತೆಗೆ ಒಂದು ಜೋಡಿ ಕತ್ತರಿ ಮತ್ತು ಡಕ್ಟ್ ಟೇಪ್‌ನ ರೋಲ್ ಅನ್ನು  ಪತ್ತೆ ಮಾಡಿದ್ದಾರೆ.ಮನೆಯ ನಿವಾಸಿಗಳ ಚಲನವಲನಗಳ ದಿನಾಂಕಗಳು ಮತ್ತು ಸಮಯಗಳನ್ನು ಗುರುತಿಸುವ ಚಾರ್ಟ್ ಕೂಡ ಇತ್ತು.

Stay up to date on all the latest ಅಂತಾರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp