ಫ್ರೆಂಚ್ ಸಂಸತ್ ನಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು! 

ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ದೊರೆತಿದ್ದು, ಫ್ರೆಂಚ್ ಸಂಸತ್ ನಲ್ಲಿ ಪಾಕ್ ಗೆ ಭಾರಿ ಮುಖಭಂಗ ಉಂಟಾಗಿದೆ. 

Published: 02nd October 2019 11:38 PM  |   Last Updated: 02nd October 2019 11:38 PM   |  A+A-


India stops PoK 'President' Masood Khan from addressing programme in French Parliament

ಫ್ರೆಂಚ್ ಸಂಸತ್ ನಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು!

Posted By : Srinivas Rao BV
Source : PTI

ಪ್ಯಾರಿಸ್: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ದೊರೆತಿದ್ದು, ಫ್ರೆಂಚ್ ಸಂಸತ್ ನಲ್ಲಿ ಪಾಕ್ ಗೆ ಭಾರಿ ಮುಖಭಂಗ ಉಂಟಾಗಿದೆ. 

ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್ ಖಾನ್ ಫ್ರೆಂಚ್ ಸಂಸತ್ ನಲ್ಲಿ ಮಾತನಾಡಬೇಕಿತ್ತು. ಆದರೆ ಭಾರತ ತನ್ನ ಶಕ್ತಿಯನ್ನು ಬಳಸಿ ಈ ಕಾರ್ಯಕ್ರಮವನ್ನೇ ರದ್ದುಗೊಳ್ಳುವಂತೆ ಮಾಡಿದೆ. 

ಪ್ಯಾರಿಸ್ ನ ಪಾಕಿಸ್ತಾನದ ರಾಯಭಾರಿ ಫ್ರಾನ್ಸ್ ಪಾರ್ಲಿಮೆಂಟ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಸೂದ್ ಖಾನ್ ನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಫ್ರಾನ್ಸ್ ನ ವಿದೇಶಾಂಗ ಇಲಾಖೆ ಬಳಿ ಆಕ್ಷೇಪ ವ್ಯಕ್ತಪಡಿಸಿ ಈ ರೀತಿಯ ಆಹ್ವಾನ ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುತ್ತದೆ. ಪಿಒಕೆಯೂ ಸೇರಿದಂತೆ ಇಡೀ ಜಮ್ಮು-ಕಾಶ್ಮೀರ ಭಾರತದ ಒಂದು ಅವಿಭಾಜ್ಯ ಅಂಗ ಎಂದು ಮನವರಿಕೆ ಮಾಡಿಕೊಟ್ಟಿತ್ತು. ಅಂತಿಮವಾಗಿ ಕಾರ್ಯಕ್ರಮದಲ್ಲಿ ಮಸೂದ್ ಖಾನ್ ಭಾಗಿಯಾಗುವುದಕ್ಕೆ ಅವಕಾಶವನ್ನು ನಿರಾಕರಿಸಲಾಯಿತು. ಖಾನ್ ಬದಲಾಗಿ ಪಾಕಿಸ್ತಾನದ ರಾಯಭಾರಿ ಕಚೇರಿ ಅಧಿಕಾರಿ ಮೊಯೀನ್-ಉಲ್-ಹಕ್ ನ್ನು ಆಹ್ವಾನಿಸಲಾಗಿತ್ತು, ಆದರೆ ಕಾರ್ಯಕ್ರಮ ವಿಫಲವಾಯಿತು. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp