ಪಾಕಿಸ್ತಾನದ ಉಗ್ರರು ಭಾರತ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ: ಅಮೆರಿಕಾ ಅಧಿಕಾರಿ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಪಾಕಿಸ್ತಾನದ ಉಗ್ರವಾದಿ ಸಂಘಟನೆಗಳು ಉಗ್ರದಾಳಿಯನ್ನು ಭಾರತದ ಮೇಲೆ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕಾ ಆತಂಕ ವ್ಯಕ್ತಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಪಾಕಿಸ್ತಾನದ ಉಗ್ರವಾದಿ ಸಂಘಟನೆಗಳು ಉಗ್ರದಾಳಿಯನ್ನು ಭಾರತದ ಮೇಲೆ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕಾ ಆತಂಕ ವ್ಯಕ್ತಪಡಿಸಿದೆ.


ಉಗ್ರಗಾಮಿ ಸಂಘಟನೆಗಳ ಪರ ಪಾಕಿಸ್ತಾನ ಮೃದುಧೋರಣೆ ತಳೆಯುತ್ತಿದೆ ಹೀಗಾಗಿ ಸಂಘಟನೆಗಳು ಗಡಿ ಭಾಗದಲ್ಲಿ ಸಕ್ರಿಯವಾಗಿವೆ. ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಉಗ್ರಗಾಮಿ ಚಟುವಟಿಕೆ ತೀವ್ರವಾಗಿದೆ. ಇದಕ್ಕೆ ಚೀನಾ ಬೆಂಬಲ ನೀಡಬಹುದು ಎಂದು ಅನಿಸುತ್ತಿಲ್ಲ ಎಂದು ಇಂಡೊ ಫೆಸಿಫಿಕ್ ಭದ್ರತಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಂಡಲ್ಲ್ ಶ್ರಿವರ್ ವಾಷಿಂಗ್ಟನ್ ನಲ್ಲಿ ನಿನ್ನೆ ಹೇಳಿದ್ದಾರೆ.


ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ಮತ್ತು 35ಎಯನ್ನು ತೆಗೆದುಹಾಕಿದ ನಂತರ ಪಾಕಿಸ್ತಾನದ ನಿಲುವಿಗೆ ಚೀನಾ ದೇಶದ ಬೆಂಬಲವಿದೆಯೇ ಎಂದು ಕೇಳಿದ್ದಕ್ಕೆ ಶ್ರಿವರ್ ಪ್ರತಿಕ್ರಿಯಿಸಿದ್ದಾರೆ.


ಕಾಶ್ಮೀರ ವಿಚಾರದಲ್ಲಿ ಚೀನಾದ ಬೆಂಬಲ ರಾಜತಾಂತ್ರಿಕ ಮತ್ತು ರಾಜಕೀಯವಾದದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚೀನಾದವರು ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಚರ್ಚೆಯಾಗುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಕೂಡ ಚರ್ಚೆಯಾಗುತ್ತಿತ್ತು.
ಚೀನಾ ಪಾಕಿಸ್ತಾನದೊಂದಿಗೆ ದೀರ್ಘಕಾಲೀನ ಸಂಬಂಧ ಹೊಂದಿದ್ದು, ಭಾರತದೊಂದಿಗಿ ಸ್ಪರ್ಧೆಗೆ ಇಳಿದಿದೆ. ಚೀನಾ ಜೊತೆಗೆ ಭಾರತ ಸ್ಥಿರ ಸಂಬಂಧವನ್ನು ಬಯಸುತ್ತಿದೆ ಎಂದು ಶ್ರಿವರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com