ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಮುಖಭಂಗ: ಇಂಗ್ಲೆಂಡ್‌ನಲ್ಲಿ ಭಾರತದ ಮುಂದೆ ಮಂಡಿಯೂರಿದ ಪಾಕ್!

ಏಳು ದಶಗಳಿಂದ ಭಾರತದಲ್ಲಿರುವ ಆಸ್ತಿ ನಮ್ಮದು ಎಂದು ಪಾಕಿಸ್ತಾನ ವಾದಿಸಿಕೊಂಡು ಬರುತ್ತಿತ್ತು. ಈ ವಿಚಾರವಾಗಿ ಇದೀಗ ಬ್ರಿಟನ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತೀವ್ರ ಮುಖಭಂಗ ಅನುಭವಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಏಳು ದಶಗಳಿಂದ ಭಾರತದಲ್ಲಿರುವ ಆಸ್ತಿ ನಮ್ಮದು ಎಂದು ಪಾಕಿಸ್ತಾನ ವಾದಿಸಿಕೊಂಡು ಬರುತ್ತಿತ್ತು. ಈ ವಿಚಾರವಾಗಿ ಇದೀಗ ಬ್ರಿಟನ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತೀವ್ರ ಮುಖಭಂಗ ಅನುಭವಿಸಿದೆ. 

ಹೈದರಾಬಾದ್ ನಿಜಾಮರಿಗೆ ಸೇರಿದ 35 ದಶಲಕ್ಷ ಪೌಂಡ್ ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್ ನಲ್ಲಿ ಕಾನೂನು ಸಮರ ನಡೆಯುತ್ತಿತ್ತು. ಸದ್ಯ ಈ ವಿವಾದ ವಿಚಾರಣೆ ಮುಕ್ತಾಯವಾಗಿದ್ದು, ಲಂಡನ್ ನ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. 

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಜಸ್ಟೀಸ್ ಮಾರ್ಕಸ್ ಸ್ಮಿತ್ ಪಾಕಿಸ್ತಾನದ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಭಾರತ ಮಂಡಿಸಿದ್ದ ವಾದಕ್ಕೆ ಮನ್ನಣೆ ದೊರೆತಿದೆ. 

1947ರ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ವೇಳೆ ಹೈದರಾಬಾದ್ ನಿಜಾಮರು ಲಂಡನ್ ಬ್ಯಾಂಕ್ ನಲ್ಲಿ ಹತ್ತು ಮಿಲಿಯನ್ ಹಾಗೂ ಒಂಬತ್ತು ಶಿಲ್ಲಿಂಗ್ ಇಟ್ಟಿದ್ದರು. ಇದಕ್ಕಾಗಿ ನಿಜಾಮರ ಎಂಟನೇ ವಂಶಸ್ಥ ಪ್ರಿನ್ಸ್ ಮುಕಾರಮ್ ಝಾ ಹಾಗೂ ಈತನ ಕಿರಿಯ ಸಹೋದರ ಮುಫಾಕಮ್ ಝಾ 35 ಮಿಲಿಯನ್ ಪೌಂಡ್ ಗಾಗಿ ಕೋರ್ಟ್ ಮೊರೆ ಹೋಗಿದ್ದರು. 

ಈ ಹಣ ತಮಗೆ ಸೇರಿದ್ದು ಎಂದು ಪಾಕಿಸ್ತಾನ ಸಹ ವಾದಿಸುತ್ತಿತ್ತು. ಈ ಸುದೀರ್ಘ ಕಾನೂನು ಹೋರಾಟ ಸದ್ಯ ಅಂತಿಯ ಹಂತ ತಲುಪಿದೆ. ಇತ್ತೀಚೆಗೆ ಮುಕ್ತಾಯವಾದ ವಿಚಾರಣೆಯಲ್ಲಿ ಮೊತ್ತ ನಿಜಾಮರಿಗೆ ಸೇರುವ ಆಶಾವಾದ ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com