ಭಾರತವಿಲ್ಲದೆ ವಿಶ್ವಸಂಸ್ಥೆ ವಿಶ್ವಾಸಾರ್ಹತೆಗೆ ಧಕ್ಕೆ: ಜೈಶಂಕರ್

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯತ್ವ ಪಡೆಯುವ ಎಲ್ಲ ಅರ್ಹತೆ ಭಾರತಕ್ಕೆ ಇದೆ. ಭಾರತದ ಇಲ್ಲದೆಯೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆಯುಂಟಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್‌ ಜೈಶಂಕರ್‌ ಹೇಳಿದ್ದಾರೆ.
ಜೈಶಂಕರ್
ಜೈಶಂಕರ್

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯತ್ವ ಪಡೆಯುವ ಎಲ್ಲ ಅರ್ಹತೆ ಭಾರತಕ್ಕೆ ಇದೆ. ಭಾರತದ ಇಲ್ಲದೆಯೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆಯುಂಟಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್‌ ಜೈಶಂಕರ್‌ ಹೇಳಿದ್ದಾರೆ.

ಭಾರತ ಇಲ್ಲದೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೂ ಕುಂದು ಬರುವ ಸಾಧ್ಯತೆಯಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಕಳೆದ ಹಲವು ವರ್ಷಗಳಿಂದಲೂ ಆಗ್ರಹಿಸುತ್ತಿದೆ. 

ಈ ಕುರಿತಂತೆ ಅಮೆರಿಕದಲ್ಲಿ ನಡೆದ ಸಮಾರಂಭದಲ್ಲಿ ಪ್ರಸ್ತಾಪಿಸಿದ್ದು, ವಿಶ್ವದ ಅತಿ ದೊಡ್ಡ ಆರ್ಥಿಕತೆ ಮತ್ತು ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸದಸ್ಯ ದೊರೆಯದೆ ಹೋದರೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರಷ್ಯಾದಿಂದ ಎಸ್‌-400 ಟ್ರಯಂಫ್ ಕ್ಷಿಪಣಿಗಳನ್ನು ಖರೀದಿಸುವ ಭಾರತದ ನಿರ್ಧಾರದ ಬಗ್ಗೆ ಅಮೆರಿಕ ಸರಕಾರದ ಮನವೊಲಿಕ ಪ್ರಯತ್ನವನ್ನೂ ವಿದೇಶಾಂಗ ಸಚಿವ ಜೈಶಂಕರ್‌ನಡೆಸಿದ್ದಾರೆ. ಭಾರತದ ಅಗತ್ಯವನ್ನು ಅಮೆರಿಕ ಅರಿಯಲಿದೆ ಎಂಬ ವಿಶ್ವಾಸವನ್ನು  ಅವರು ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com