ಕಾಶ್ಮೀರ ವಿಚಾರವಾಗಿ ಪಾಕ್ ಕುತಂತ್ರ ಮುಂದುವರೆಯಲಿದೆ: 370 ವಿಧಿ ರದ್ಧತಿ ಸಮರ್ಥಿಸಿಕೊಂಡ ಭಾರತ

ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಸಾಕಷ್ಟು ಬಂಡವಾಳ ಹೂಡಿದ್ದು, ಕಾಶ್ಮೀರ ಕುರಿತು ಭಾರತ ಯಾವುದೇ ಕಠಿಣ ನಿಲುವು ತೆಗೆದುಕೊಂಡರೂ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ಮುಂದುವರೆಸುವುದನ್ನು ಈ ಮೊದಲೇ ನಿರೀಕ್ಷಿಸಲಾಗಿತ್ತು ಎಂದು ಭಾರತ ಗುರುವಾರ ಹೇಳಿದೆ. 
ಜೈಶಂಕರ್
ಜೈಶಂಕರ್

ವಾಷಿಂಗ್ಟನ್: ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಸಾಕಷ್ಟು ಬಂಡವಾಳ ಹೂಡಿದ್ದು, ಕಾಶ್ಮೀರ ಕುರಿತು ಭಾರತ ಯಾವುದೇ ಕಠಿಣ ನಿಲುವು ತೆಗೆದುಕೊಂಡರೂ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ಮುಂದುವರೆಸುವುದನ್ನು ಈ ಮೊದಲೇ ನಿರೀಕ್ಷಿಸಲಾಗಿತ್ತು ಎಂದು ಭಾರತ ಗುರುವಾರ ಹೇಳಿದೆ. 

ಅಮೆರಿಕಾದ ಪ್ರಮುಖ ಚಿಂತಕರ ಚಾವಡಿ 'ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ ನ್ಯಾಷನಲ್ ಸ್ಟಡೀಸ್' ಆಯೋಜಿಸಿದ್ದ ವಿದೇಶಾಂಗ ನೀತಿ ಕುರಿತ ಉಪನ್ಯಾಸದಲ್ಲಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡುವ 370 ವಿಧಿ ರದ್ಧತಿ ಬಹುನಿರೀಕ್ಷಿತ ಹೆಜ್ಜೆಯಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಪಾಕಿಸ್ತಾನ ಸಾಕಷ್ಟು ಬಂಡವಾಳ ಹೂಡಿದ್ದು, ಇಂತಹ ಕಠಿಣ ನಿಲುವುಗಳ ವಿರುದ್ಧ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿತ್ತು ಎಂದು ಹೇಳಿದ್ದಾರೆ. 

ಆಗಸ್ಟ್5 ರ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಕಾಶ್ಮೀರದಲ್ಲಿ ಈಗಾಗಲೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಇನ್ನು ಪಾಕಿಸ್ತಾನದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು, ಜನರು ಸಂತೋಷದಿಂದ ಜೀವನ ನಡೆಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ, ಪಾಕಿಸ್ತಾನ ಅದನ್ನು ಬಯಸುವುದಿಲ್ಲ. ಈ ಕುರಿತು ತನ್ನ ಕುತಂತ್ರ ಬುದ್ಧಿಯನ್ನು ಮುಂದುವರೆಸಲಿದೆ. ಕಳೆದ 70 ವರ್ಷಗಳಿಂದ ಏನನ್ನು ಮಾಡಿಕೊಂಡು ಬಂದಿದೆಯೋ ಅದನ್ನೇ ಮಾಡುತ್ತದೆ ಎಂದು ತಿಳಿಸಿದ್ದಾರೆ. 

ಯಾವುದೇ ಉಗ್ರರ ದಾಳಿ, ಭದ್ರತೆಗೆ ಧಕ್ಕೆಯುಂಟಾದರೂ ಅದಕ್ಕೆ ಪಾಕಿಸ್ತಾನವೇ ಕಾರಣ ಎಂದು ಭಾರತ ಹೇಳುತ್ತದೆ ಎಂದು ಇಸ್ಲಾಮಾಬಾದ್ ಹೇಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸುವ ಜೈಶಂಕರ್ ಅವರು, ಇಂತಹ ಹೇಳಿಕೆಗಳಿಗೆ ಇತಿಹಾಸವೇ ಉತ್ತರ ನೀಡುತ್ತದೆ. ಇದು ಆಗಸ್ಟ್ 5ರ ಬಳಿಕ ಎದುರಾದ ಪರಿಸ್ಥಿತಿಗಳಲ್ಲ. ಕಾಶ್ಮೀರ ಭಾರತಕ್ಕೆ ಸೇರಿದ ಬಳಿಕ ಪಾಕಿಸ್ತಾನ ದುರ್ವರ್ತನೆ ಆರಂಭಗೊಂಡಿತ್ತು. ಶ್ರೀನಗರಕ್ಕೆ ಸಾಕಷ್ಟು ಬೆದರಿಕೆಗಳನ್ನೂ ಹಾಕಿದೆ. ಕಾಶ್ಮೀರದ ಇತಿಹಾಸವೇ ಎಲ್ಲವನ್ನೂ ಹೇಳುತ್ತದೆ. ಪಾಕಿಸ್ತಾನದ ಜಿಹಾದ್ ಪರಣಾಣು ಶಸ್ತ್ರಾಸ್ತ್ರದತ್ತ ಸಾಗುತ್ತಿದೆ. ಬೆದರಿಕೆ ಹಾಕುವವರ ವಾಕ್ಚಾತುರ್ತದಿಂದಲೇ ಇದನ್ನು ನಾವು ನೋಡಿದ್ದೇವೆ ಎಂದಿದ್ದಾರೆ. 

ಇದೇ ವೇಳೆ ಪಾಕಿಸ್ತಾನ ಅಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆದುಕೊಳ್ಳುವುದರ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರಸ್ತುತ ಆ ಪ್ರದೇಶವನ್ನು ಪಾಕಿಸ್ತಾನ ಅತಿಕ್ರಮಣಗೊಳಿಸಿದೆ. ನನ್ನ ಸಾರ್ವಭೌಮತ್ವ ಮತ್ತು ನ್ಯಾಯವಾಪ್ತಿಯನ್ನು ನನ್ನ ನಕ್ಷೆಗಳಿಂದ ರೂಪಿಸಲಾಗಿದೆ. ನನ್ನ ನಕ್ಷೆಗಳು 70 ವರ್ಷಗಳಿಂದಲೂ ಇವೆ ಎಂದು ತಿಳಿಸಿದ್ದಾರೆ. 

ಕಾಶ್ಮೀರದಲ್ಲಿ 370 ವಿಧಿ ರದ್ದುಗೊಳಿಸುವುದು ಅತ್ಯಂತ ಸುಲಭದ ಹೆಜ್ಜೆಯಲ್ಲ. ಇದು ಬಹಳ ನಿರೀಕ್ಷಿತ ಹೆಜ್ಜೆಯಾಗಿತ್ತು. ನನ್ನ ಪ್ರಕಾರ ಇದೊಂದು ಅತ್ಯಂತ ದೊಡ್ಡ ಹಾಗೂ ಪ್ರಮುಖ ನಿರ್ಧಾರವಾಗಿದೆ. ಹಲವು ವರ್ಷಗಳ ಹಿಂದೆಯೇ ಈ ಕಾರ್ಯವನ್ನು ಮಾಡಬೇಕಿತ್ತು. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಾಕಷ್ಟು ಹೂಡಿಕೆ ಮಾಡಿದ್ದ ಪಾಕಿಸ್ತಾನ, ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಪಾಕಿಸ್ತಾನದ ವರ್ತನೆ ಹಾಗೂ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿದ್ದೇವೆ. ಭಾರತ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಇತಿಹಾಸವೇ ಎಲ್ಲವನ್ನೂ ಹೇಳುತ್ತೆದ. ಇಂತಹ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ, ಸರ್ಕಾರ ತನ್ನ ಕರ್ತವ್ಯ ನಿಭಾಯಿಸುವುದರಲ್ಲಿ ವಿಫಲಗೊಳ್ಳುತ್ತಿತ್ತು. ಭದ್ರತೆ ಕುರಿತಂತೆ ಈಗಾಗಲೇ ಸೇನೆಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com