ಭಾರತೀಯ ರಾಷ್ಟ್ರೀಯತೆ ಅಂತರರಾಷ್ಟ್ರೀಯ ಸಂಬಂಧಗಳಿಗೆ ವಿರೋಧಿಯಲ್ಲ: ಎಸ್ ಜೈಶಂಕರ್

ಭಾರತೀಯ ರಾಷ್ಟ್ರೀಯತೆ ಜಾಗತಿಕ ವಿರೋಧಿಯಲ್ಲ ಅಷ್ತೇ ಅಲ್ಲದೆ ನಮ್ಮ ಮೂಲತತ್ವದ ಅನುಸಾರವೇ ನಿರ್ವಹಿಸಲ್ಪಡುತ್ತದೆ. ಬೇರೆ ದೇಶಗಳ ಬಗ್ಗೆ ಹೆಚ್ಚು "ಮೃದು ಮತ್ತು ಸಹಕಾರಿ"  ಧೋರಣೆಗೆ ಒತ್ತು ನೀಡಲು ಬಯಸುತ್ತದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.
ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಜೈಶಂಕರ್
ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಜೈಶಂಕರ್

ನವದೆಹಲಿ: ಭಾರತೀಯ ರಾಷ್ಟ್ರೀಯತೆ ಜಾಗತಿಕ ವಿರೋಧಿಯಲ್ಲ ಅಷ್ತೇ ಅಲ್ಲದೆ ನಮ್ಮ ಮೂಲತತ್ವದ ಅನುಸಾರವೇ ನಿರ್ವಹಿಸಲ್ಪಡುತ್ತದೆ. ಬೇರೆ ದೇಶಗಳ ಬಗ್ಗೆ ಹೆಚ್ಚು "ಮೃದು ಮತ್ತು ಸಹಕಾರಿ"  ಧೋರಣೆಗೆ ಒತ್ತು ನೀಡಲು ಬಯಸುತ್ತದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.

"ಒಂದು ರೀತಿಯಲ್ಲಿ, ನಾವು ಮುಂದಾಳುಗಳಂತೆ ಎದ್ದು ಕಾಣುವವರಾಗಿದ್ದೇವೆ. ಆದರೆ ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರೀಯತೆಯ ತತ್ವಗಳಿದ್ದೂ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳೊಡನೆ ಉತ್ತಮ ವ್ಯವಹಾರ ಸಂಬಂಧ ಹೊಂದಿದ್ದೇವೆ." ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಡಾ. ಜೈಶಂಕರ್ ಹೇಳಿದ್ದಾರೆ. ಜೈಶಂಕರ್ ನಾರ್ವೆಯ ರಾಜಕಾರಣಿ ಹಾಗೂ ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಬೋರ್ಜ್ ಬ್ರೆಂಡೆ ಅವರೊಡನೆ ಮಾತುಕತೆ ನಡೆಸಿದ್ದಾರೆ.

"ರಾಷ್ಟ್ರೀಯತೆ ಎನ್ನುವುದು ಜಗತ್ತನ್ನು ನಿರ್ದೇಶಿಸುವ ನಕಾರಾತ್ಮಕ ಭಾವನೆಯಲ್ಲ, ಇದು ಅಂತರಾಷ್ಟ್ರೀಯ ಸಂಬಂಧಗಳಿಗೆ ವಿರೋಧಿಯಲ್ಲ" ಎಂದ ಜೈಶಂಕರ್ "ಬಾರತದಲ್ಲಿ ಜನರು ನೀವು ಅಭಿವೃದ್ದಿ ಕಾಣುತ್ತಿದ್ದರೆ ಜಗತ್ತಿನೊಂದಿಗೆ ಹೆಚ್ಚು ಹೆಚ್ಚು ಕೆಲಸ ಮಾಡಲು ಇಷ್ಟಪಡುತ್ತಾರೆ" ಎಂದರು.

ರಾಜತಾಂತ್ರಿಕತೆಯ ಹಳೆಯ ಮಾದರಿಗಳಿಂದ ದೂರ್ವಾಗುವುದಿಲ್ಲ ಎಂದ ಅವರು ಇದು ಹೆಚ್ಚು ಸೃಜನಶೀಲ, ನವೀನ ಮತ್ತು ತಾತ್ಕಾಲಿಕ ರೀತಿಯ ವ್ಯವಸ್ಥೆಗಳಿಂದ ಆಗಾಗ್ಗೆ ಸಮಸ್ಯೆಗಳಿಗೆ ಕೇಂದ್ರವಾಗುತ್ತದೆ. ಆಗ ರಾಜತಾಂತ್ರಿಕತೆ ಹಲವು ವಿಧಾನದಲ್ಲಿ ಬದಲಾಗುತ್ತದೆ ಎಂದಿದ್ದಾರೆ. 

ವಿಶ್ವದ ಮೇಲೆ ಪ್ರಭಾವ ಬೀರಲು ಬಯಸುವ ದೇಶವಾಗಿ ನಾವು 'ನೆರೆಹೊರೆಯವರ ಮೇಲೆ ಪ್ರಭಾವ ಬೀರಲು' ಪ್ರಾರಂಭಿಸಬೇಕು. "ನಾವೆಂದೂ ನಾವಾಗಿರುತ್ತೇವೆ. ನಾವು ಬೇರೆ ರಾಷ್ಟ್ರದವರಲ್ಲ.ಭಾರತದು ಅಭಿವೃದ್ದಿಯಾಗುತ್ತಿದೆ. ಅದು ತನ್ನ ಸ್ವಂತ ಪ್ರಜ್ಞೆ ಬೆಳೆಸಿಕೊಳ್ಳುತ್ತಿದೆ.ಹಾಗಾಗಿ ಇದೀಗ ನಮಗೆ ಇತರ ದೇಶಗಳ ಅಭಿವೃದ್ದಿ ಮಾದರಿಗಳನ್ನು ಅಳವಡಿಸಿಕೊಳ್ಳುವ ಅಥವಾ ಆ ಪರಿಕಲ್ಪನೆಗಳನ್ನು, ವಿಶ್ಲೇಷಣೆಯನ್ನು ಬಳಸಿಕೊಳ್ಳುವ ಅಗತ್ಯವಿಲ್ಲ " ಜೈಶಂಕರ್ ಹೇಳಿದ್ದಾರೆ.

ಸಂಪರ್ಕ ಮತ್ತು ಅಭಿವೃದ್ಧಿಯ ಬಗ್ಗೆ ತನ್ನ ಅಭಿಪ್ರಾಯಗಳನ್ನು ಇತರರ ಮೇಲೆ ಹೇರುವುದಕ್ಕೆ ಭಾರತ ಎಂದಿಗೂ ಹೋಗುವುದಿಲ್ಲ "ನಾವು ಅಭಿವೃದ್ಧಿ ಪಾಲುದಾರಿಕೆಯನ್ನು ಹೊಂದಿದ್ದೇವೆ ಎಂದು ಕಂಡುಕೊಂಡಿದ್ದೇವೆ.ವಾಸ್ತವವಾಗಿ, ಕಳೆದ ವರ್ಷ ಆಫ್ರಿಕಾಕ್ಕೆ ಹೋದಾಗ ನಮ್ಮ ಪ್ರಧಾನಿ ೯ನರೇಂದ್ರ ಮೋದಿ) ಹೇಳಿದ್ದು ಹೀಗಿತ್ತು- , 'ನೋಡಿ ನಾವು ಆಫ್ರಿಕಾದಲ್ಲಿ ಹೆಚ್ಚಿನದನ್ನು ಮಾಡಲು ಸಿದ್ಧರಿದ್ದೇವೆ, ಆದರೆ ನಿಮಗೆ ಬೇಕಾದುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ '" ಪ್ರಧಾನಿ ಮೋದಿ ಮಾತುಗಳನ್ನು ಜೈಶಂಕರ್ ಉಲ್ಲೇಖಿಸಿದ್ದಾರೆ. ಅಲ್ಲದೆ ಜೈಶಂಕರ್ ಅಫ್ಘಾನಿಸ್ಥಾನದ ಉದಾಹರಣೆ ನಿಡಿ  ಬಹುಶಃ ಹೆಚ್ಚಿನ ಆಫ್ಘನ್ನರಿಗೆ ಅಭಿವೃದ್ಧಿ ದೃಷ್ಟಿಯಿಂದ ಭಾರತವು ಏನು ಮಾಡಿದೆ ಎಂಬುದರ ಬಗ್ಗೆ ತಿಳಿದಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com