ಕಾಶ್ಮೀರ ವಿಚಾರದಲ್ಲಿ ನಿಮಗೆ ಬೆಂಬಲ ನೀಡುತ್ತಿರುವ 58 ದೇಶಗಳಾವುವು: ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಸಚಿವ

ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ನಿಮಗೆ ಬೆಂಬಲ ನೀಡುತ್ತಿರುವ 58 ರಾಷ್ಟ್ರಗಳು ಯಾವುವು ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹ್ಮೂದ್ ಖುರೇಷಿ ತಾಳ್ಮೆ ಕಳೆದುಕೊಂಡು ಹರಿಹಾಯ್ದಿರುವ ಘಟನೆ ನಡೆದಿದೆ. 
ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹ್ಮೂದ್ ಖುರೇಷಿ
ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹ್ಮೂದ್ ಖುರೇಷಿ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ನಿಮಗೆ ಬೆಂಬಲ ನೀಡುತ್ತಿರುವ 58 ರಾಷ್ಟ್ರಗಳು ಯಾವುವು ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹ್ಮೂದ್ ಖುರೇಷಿ ತಾಳ್ಮೆ ಕಳೆದುಕೊಂಡು ಹರಿಹಾಯ್ದಿರುವ ಘಟನೆ ನಡೆದಿದೆ. 

ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದು ಖುರೇಷಿಯೊಂದು ಸಂದರ್ಶನ ನಡೆಸಿದ್ದು, ಸಂದರ್ಶನದ ವೇಳೆ ಸಂದರ್ಶನಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ 58 ರಾಷ್ಟ್ರಗಳು ಯಾವುವು ಎಂದು ಹೇಳಿದ್ದಾರೆ. ಈ ವೇಳೆ ಖುರೇಷಿ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. 

ಯಾರ ಅಜೆಂಡಾ ಪರವಾಗಿ ನೀವು ಕೆಲಸ ಮಾಡುತ್ತಿದ್ದೀರಾ? ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಯಾವ ರಾಷ್ಟ್ರಗಳು ಬೆಂಬಲಿಸಿವೆ ಅಥವಾ ಇಲ್ಲ ಎಂಬುದನ್ನು ನೀವು ನನಗೆ ಹೇಳಲು ಬರುತ್ತಿದ್ದೀರಾ? ನಿಮಗೆ ಬೇಕಾದದ್ದನ್ನು ನೀವು ಬರೆದುಕೊಳ್ಳಿ ಎಂದು ಹರಿಹಾಯ್ದಿದ್ದಾರೆ. 

ಇದೇ ವೇಳೆ ಖುರೇಷಿಯವರು ಈ ಹಿಂದೆ ಬರೆದುಕೊಂಡಿದ್ದ ಟ್ವೀಟ್ ಬಗ್ಗೆ ಸಂದರ್ಶನಕಾರ ಹೇಳಿದಾಗ, ಆ ಟ್ವೀಟ್'ನ್ನು ನನಗೆ ತೋರಿಸಿ. ಪ್ರಧಾನಮಂತ್ರಿ ಇಮ್ರಾನ್ ಖಾನ್ ಬರೆದ ಟ್ವೀಟ್ ಅಲ್ಲ, ನಾನು ಬರೆದ ಟ್ವೀಟ್ ನ್ನು ನನಗೆ ತೋರಿಸಿ ಎಂದು ಹೇಳಿದ್ದಾರೆ. ಈ ವೇಳೆ ಟ್ವೀಟ್ ತೋರಿಸಿದ ಬಳಿಕ ಮರೆಮಾಚಿಕೊಳ್ಳಲು ಯತ್ನಿಸಿರುವ ಖುರೇಷಿ, ಇದರಲ್ಲಿ ತಪ್ಪೇನೂ ಇಲ್ಲ. ನನ್ನ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಇದರಲ್ಲಿ ಆಶ್ಚರ್ಯ ಪಡುವುದೇನಿದೆ. ನೀವು ಯಾರ ಅಜೆಂಡಾವನ್ನು ಅನುಸರಿಸುತ್ತಿದ್ದೀರಿ ಎಂದು ಸಂದರ್ಶನಕಾರನನ್ನು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com