ಸಾಲದ ಸುಳಿ: ಐಎಂಎಫ್ ಗೆ ಹೋಲಿಸಿದರೆ ಚೀನಾದಿಂದ ದುಪ್ಪಟ್ಟು ಸಾಲ ಮಾಡಿರುವ ಪಾಕಿಸ್ತಾನ! 

ಪಾಕಿಸ್ತಾನದ ಆರ್ಥಿಕ ದಿವಾಳಿತನ ಜಗಜ್ಜಾಹೀರಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಐಎಂಎಫ್ ನಿಂದ ತೆಗೆದುಕೊಂಡಿರುವುದಕ್ಕಿಂತಲೂ ದುಪ್ಪಟ್ಟು ಮೊತ್ತದ ಸಾಲವನ್ನು ಚೀನಾದಿಂದ ತೆಗೆದುಕೊಂಡಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಸಾಲದ ಸುಳಿ: ಐಎಂಎಫ್ ನಿಂದ ತೆಗೆದುಕೊಂಡಿರುವುದಕ್ಕಿಂತಲೂ ದುಪ್ಪಟ್ಟು ಸಾಲ ಚೀನಾದಿಂದ ತೆಗೆದುಕೊಂಡಿರುವ ಪಾಕಿಸ್ತಾನ!

ಮುಂದಿನ 3 ವರ್ಷಗಳಲ್ಲಿ ಐಎಂಎಫ್ ಗೆ ವಾಪಸ್ ನೀಡಬೇಕಿರುವ ಸಾಲದ ಮೊತ್ತಕ್ಕಿಂತ ಎರಡರಷ್ಟು ಚೀನಾಗೆ ವಾಪಸ್ ನೀಡಬೇಕಿದೆ. 2022 ರ ಜೂನ್ ವೇಳೆಗೆ  ಚೀನಾಗೆ ಪಾಕಿಸ್ತಾನ 6.7 ಬಿಲಿಯನ್ ಡಾಲರ್ ನಷ್ಟು ಹಣವನ್ನು ವಾಪಸ್ ನೀಡಬೇಕಾಗುತ್ತದೆ. ಈ ನಡುವೆ ಐಎಂಎಫ್ ನಿಂದಲೂ ಪಾಕಿಸ್ತಾನ ತುರ್ತಾಗಿ ಸಾಲಪಡೆದಿದ್ದು, 2022 ರ ವೇಳೆಗೆ ಐಎಂಎಫ್ ಗೆ 2.8 ಬಿಲಿಯನ್ ಡಾಲರ್ ನಷ್ಟು ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. 

ಚೀನಾದ ಬೆಲ್ಟ್-ರೋಡ್ ಯೋಜನೆಯ ಅತಿ ದೊಡ್ಡ ಫಲಾನುಭವಿಯಾಗಿರುವ ಪಾಕಿಸ್ತಾನ ಚೀನಾದಿಂದ ನಿರಂತರವಾಗಿ ಸಾಲ ಮಾಡುತ್ತಲೇ ಬಂದಿದೆ. ಆದರೆ ಆ ಹಣ ಅದಕ್ಕೆ ಸಾಲದೇ ಬಂದಿದ್ದು, ಇನ್ನೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಲೇ ಬಂದಿದೆ, ಈ ನಡುವೆ ಆರ್ಥಿಕ ಸಹಾಯಕ್ಕಾಗಿ ಪಾಕಿಸ್ತಾನ ಐಎಂಎಫ್ ಕದವನ್ನೂ ತಟ್ಟಿತ್ತು
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com