ಮೂರು ಭಾರತೀಯ ಇಂಜಿನಿಯರ್ ಗಳ ಬಿಡುಗಡೆಗೆ ತಾಲಿಬಾನ್ ಒಪ್ಪಿಗೆ

ಅಮೆರಿಕ - ತಾಲಿಬಾನ್ ನಾಯಕರ ನಡುವಿನ ಸಂಧಾನದ ಮಾತುಕತೆ ಫಲಪ್ರದವಾಗಿದ್ದು ಪರಿಣಾಮ, ಒತ್ತೆಯಾಳಾಗಿರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳ ಬಿಡುಗಡೆಗೆ ತಾಲಿಬಾನ್ ಸಮ್ಮತಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್:  ಅಮೆರಿಕ - ತಾಲಿಬಾನ್ ನಾಯಕರ ನಡುವಿನ ಸಂಧಾನದ ಮಾತುಕತೆ ಫಲಪ್ರದವಾಗಿದ್ದು ಪರಿಣಾಮ, ಒತ್ತೆಯಾಳಾಗಿರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳ ಬಿಡುಗಡೆಗೆ ತಾಲಿಬಾನ್ ಸಮ್ಮತಿಸಿದೆ.

ತಾಲಿಬಾನ್ ಭಯೋತ್ಪಾದನಾ ಸಂಘಟನೆಗೆ ಸೇರಿದ್ದ ಶೇಖ್ ಅಬ್ದುಲ್ ರಹೀಂ ಮತ್ತು ಮೌಲ್ವಿ ಅಬ್ದುರ್ ರಶೀದ್ ಸೇರಿದಂತೆ 11 ಉಗ್ರರನ್ನು ಬಿಡುಗಡೆ ಮಾಡುವಂತೆ ತಾಲಿಬಾನ್ ಷರತ್ತನ್ನು ಒಪ್ಪಿಕೊಂಡಿದ್ದು, ಅದಕ್ಕೆ ಬದಲಾಗಿ ಕಳೆದ ಒಂದು ವರ್ಷದಿಂದಲೂ ತಾಲಿಬಾನ್ ನಿಯಂತ್ರಣದಲ್ಲಿ ಇರುವ ಮೂವರು ಭಾರತೀಯ ಇಂಜಿನಿಯರ್ ಗಳ ಬಿಡುಗಡೆಗೆ ಸಮ್ಮತಿಸಿರುವುದಾಗಿ ತಾಲಿಬಾನ್ ಹೇಳಿರುವುದಾಗಿ ವರದಿಯಾಗಿದೆ.

ಭಾರತದ ಮೂವರು ಇಂಜಿನಿಯರ್ ಗಳನ್ನು ಯಾವ ಸ್ಥಳದಲ್ಲಿ ಬಂಧಮುಕ್ತಗೊಳಿಸುತ್ತಿದೆ ಎಂಬ ಮಾಹಿತಿ, ವಿವರ ಬಹಿರಂಗವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com