ಅದ್ಭುತ ಅನುಭವ, ಅತ್ಯಂತ ಆರಾಮದಾಯಕ: ರಫೆಲ್ ವಿಮಾನದಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್

ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನದಲ್ಲಿನ ಹಾರಾಟ ಅದ್ಭುತ ಅನುಭವ ಮತ್ತು ಅತ್ಯಂತ ಆರಾಮದಾಯಕ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಫೆಲ್ ವಿಮಾನದಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್
ರಫೆಲ್ ವಿಮಾನದಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್

ಬೋರ್ಡಾಕ್ಸ್​: ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನದಲ್ಲಿನ ಹಾರಾಟ ಅದ್ಭುತ ಅನುಭವ ಮತ್ತು ಅತ್ಯಂತ ಆರಾಮದಾಯಕ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತದ ಬಹು ನಿರೀಕ್ಷಿತ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಕ ರಫೆಲ್ ಫೈಟರ್ ಜೆಟ್ ಯುದ್ಧ ವಿಮಾನದ ಹಸ್ತಾಂತರ ಬಳಿಕ ರಾಜನಾಥ್ ಸಿಂಗ್ ರಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ರಫೇಲ್‌ ಯುದ್ಧ ವಿಮಾನವನ್ನು ಯುದ್ಧ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್‌ ಏವಿಯೇಷನ್‌ನ ಮುಖ್ಯ ಪೈಲಟ್‌ ಫಿಲಿಪ್ ಡುಚಾಟೊ ಚಲಾಯಿಸಿದರು. 

ವಿಮಾನ ಹಾರಾಟದ ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ವಿಮಾನದಲ್ಲಿ ಹಾರಾಟ ಬಹಳ ಮುದ ನೀಡಿದ್ದು, ಉತ್ತಮ ವಿಮಾನಲವಾಗಿದೆ. ಇದು ಸ್ಮರಣೀಯ ಕ್ಷಣವಾಗಿದ್ದು, ಈ ರೀತಿ ಸೂಪರ್ ಸಾನಿಕ್ ವೇಗದ ಯುದ್ಧ ವಿಮಾನದಲ್ಲಿ ಹೀಗೆ ಕುಳಿತು ಹಾರಾಟ ನಡೆಸುವ ಅವಕಾಶ ನನ್ನದಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ರಫೇಲ್‌ನಲ್ಲಿನ ಹಾರಾಟ ಅದ್ಭುತ ಅನುಭವ. ಅತ್ಯಂತ ಆರಾಮದಾಯಕವೆನಿಸುವ ಹಾರಾಟ. ಅತಿವೇಗವಾಗಿ ಹಾರುವ ವಿಮಾನವೊಂದರಲ್ಲಿ ನಾನೂ ಮುಂದೊಂದು ದಿನ ಹಾರಾಟ ನಡೆಸುತ್ತೇನೆ ಎಂದು ನೆನೆಸಿರಲಿಲ್ಲ  ಎಂದು ಹೇಳಿದರು.

ಅಂತೆಯೇ '2021ರ ವೇಳೆಗೆ 18 ವಿಮಾನಗಳು ಭಾರತಕ್ಕೆ ಲಭ್ಯವಾಗಲಿವೆ. 2022ರ ಏಪ್ರಿಲ್‌–ಮೇ ಹೊತ್ತಿಗೆ ಉಳಿದ ರಫೇಲ್‌ ವಿಮಾನಗಳು ಹಸ್ತಾಂತರಗೊಳ್ಳಲಿವೆ. ಇದು ನಮ್ಮ ರಕ್ಷಣೆಗಾಗಿಯೇ ಹೊರತು, ಯಾರಾದ್ದೋ ವಿರುದ್ಧ ಆಕ್ರಮಣಕ್ಕಲ್ಲ. ಇದು ರಕ್ಷಕ ವಿಮಾನ, ಎಂದೂ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಫ್ರಾನ್ಸ್‌ನ ಬೊರಾಡೆಕ್ಸ್‌ ಸಮೀಪದ ಮೆರಿಗ್ನ್ಯಾಕ್‌ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧವಿಮಾನವನ್ನು ಭಾರತದ ಪರವಾಗಿ ಸ್ವೀಕರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com