ಫ್ರಾನ್ಸ್ ರಫೇಲ್ ವಿಮಾನ ಸ್ವಾಗತಕ್ಕೆ ದೇಶದಲ್ಲಿ ಸಿದ್ಧತೆ

ಫ್ರಾನ್ಸ್ ನಿಂದ ತರುತ್ತಿರುವ ರಫೇಲ್ ಯುದ್ಧ ವಿಮಾನ ಬರಮಾಡಿಕೊಳ್ಳಲು ಭಾರತೀಯ ವಾಯುಪಡೆ ಈಗಾಗಲೇ ಎಲ್ಲ ತಯಾರಿ ಮಾಡಿಕೊಂಡಿದೆ. ವಾಯುನೆಲೆಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಜೊತೆಗೆ ಪೈಲಟ್‌ಗಳಿಗೂ ಅಗತ್ಯ ತರಬೇತಿ ನೀಡಲಾಗಿದೆ.
ರಫೆಲ್ ಯುದ್ಧ ವಿಮಾನ
ರಫೆಲ್ ಯುದ್ಧ ವಿಮಾನ

ನವದೆಹಲಿ: ಫ್ರಾನ್ಸ್ ನಿಂದ ತರುತ್ತಿರುವ ರಫೇಲ್ ಯುದ್ಧ ವಿಮಾನ ಬರಮಾಡಿಕೊಳ್ಳಲು ಭಾರತೀಯ ವಾಯುಪಡೆ ಈಗಾಗಲೇ ಎಲ್ಲ ತಯಾರಿ ಮಾಡಿಕೊಂಡಿದೆ. ವಾಯುನೆಲೆಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಜೊತೆಗೆ ಪೈಲಟ್‌ಗಳಿಗೂ ಅಗತ್ಯ ತರಬೇತಿ ನೀಡಲಾಗಿದೆ.

ಹರಿಯಾಣದ ಅಂಬಾಲ ಮತ್ತು ಪಶ್ಚಿಮ ಬಂಗಾಳದ ಹಸಿಮರ ವಾಯುನೆಲೆಯಲ್ಲಿ ತಲಾ ಒಂದು ರಫೇಲ್‌ ಕಾರ್ಯನಿರ್ವಹಿಸಲಿವೆ. ಇವು ಪಶ್ಚಿಮ ಮತ್ತು ಪೂರ್ವ ವಲಯಗಳ ಕಣ್ಗಾವಲು ನೋಡಿಕೊಳ್ಳಲಿವೆ.

22 ವರ್ಷಗಳ ಹಿಂದೆ ರಷ್ಯಾದಿಂದ ಸುಖೋಯ್-30 ಯುದ್ಧ ವಿಮಾನ ಆಮದು ಮಾಡಿಕೊಳ್ಳಲಾಗಿತ್ತು. ಅನಂತರ ವಿದೇಶದಿಂದ ಯಾವುದೇ ಫೈಟರ್‌ ಜೆಟ್‌ ವಿಮಾನ ಖರೀದಿಸಿರಲಿಲ್ಲ. ಈಗ ಫ್ರಾನ್ಸ್ ನಿಂದ ರಫೇಲ್ ಖರೀದಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಇದೇ ಪ್ರಮುಖ ಚುನಾವಣಾ ವಿಷಯವಾಗಿತ್ತು. ಕಾಂಗ್ರೆಸ್ ಗೆ ರಫೇಲ್ ಯುದ್ಧ ವಿಮಾನ ಖರೀದಿ ಅಕ್ರಮ ಪ್ರಮುಖ ಅಸ್ತ್ರವೂ ಅಗಿತ್ತು, ಭ್ರಷ್ಟಾಚಾರ ಆರೋಪ ಹೊತ್ತಿರುವ ರಫೇಲ್ ಯುದ್ಧವಿಮಾನಗಳ ಪೈಕಿ ಮೊದಲ ಹಂತದಲ್ಲಿ ವಿಮಾನವನ್ನು ಮಂಗಳವಾರ ಭಾರತಕ್ಕೆ ಹಸ್ತಾಂತರಿಸಲಾಗಿದೆ. 

ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‌ಗೆ ಭೇಟಿ ನೀಡಿದ್ದು ಅಲ್ಲಿಯೇ ಶಸ್ತ್ರ ಪೂಜೆ ನೆರವೇರಿಸಿದ್ದಾರೆ. 36 ರಫೇಲ್ ವಿಮಾನಗಳಿಗಾಗಿ ಭಾರತ - ಫ್ರಾನ್ಸ್‌ 2016 ರ ಸೆಪ್ಟೆಂಬರ್‌ನಲ್ಲಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಎಲ್ಲ 36 ಜೆಟ್‌ ವಿಮಾನಗಳು ಮುಂದಿನ 2022 ವೇಳೆಗೆ ಭಾರತೀಯ ವಾಯುಪಡೆಗೆ ಸೇರಿಕೊಳ್ಳಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com