ದೇಶದ ಇತರ ನಾಗರಿಕರಿಗೆ ಸಿಗುವ ಹಕ್ಕುಗಳನ್ನು ಕಾಶ್ಮೀರ ಜನತೆಗೂ ಕೊಡಿ: ಭಾರತಕ್ಕೆ ಅಮೆರಿಕಾ ಒತ್ತಾಯ 

ಸಾಮಾನ್ಯ ಜನರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿರುವ ಸಂವಹನ ಕಡಿತವನ್ನು ತೆಗೆದುಹಾಕುವಂತೆ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸಮಿತಿ ಒತ್ತಾಯಿಸಿದೆ. 

Published: 08th October 2019 09:41 AM  |   Last Updated: 08th October 2019 09:54 AM   |  A+A-


Security guard

ಭದ್ರತಾ ಸಿಬ್ಬಂದಿ ನಿಯೋಜನೆ

Posted By : Sumana Upadhyaya
Source : PTI

ವಾಷಿಂಗ್ಟನ್: ಸಾಮಾನ್ಯ ಜನರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿರುವ ಸಂವಹನ ಕಡಿತವನ್ನು ತೆಗೆದುಹಾಕುವಂತೆ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸಮಿತಿ ಒತ್ತಾಯಿಸಿದೆ. 


ಕಾಶ್ಮೀರದಲ್ಲಿ ಸಂವಹನ ಮತ್ತು ಸಂಪರ್ಕ ಸಾಧನಗಳನ್ನು ಕಡಿತ ಮಾಡಿರುವುದರಿಂದ ಜನರ ದಿನನಿತ್ಯದ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ, ಕಾಶ್ಮೀರಿಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಮಿತಿ ಸದನ ಟ್ವೀಟ್ ಮಾಡಿದೆ.


ಜಮ್ಮು-ಕಾಶ್ಮೀರದ ಮೇಲೆ ಹೇರಲಾಗಿರುವ ಮೂಲಭೂತ ಸೌಕರ್ಯಗಳ ನಿರ್ಬಂಧವನ್ನು ತೆಗೆದುಹಾಕಿ ಭಾರತದ ಬೇರೆ ಪ್ರದೇಶಗಳ ಜನರಿಗೆ ಸಿಗುತ್ತಿರುವ ಹಕ್ಕುಗಳಿಗೆ ಕಾಶ್ಮೀರಿ ಜನರು ಕೂಡ ಸಮಾನ ಪಾಲುದಾರರು ಎಂದು ತೋರಿಸಲು ಇದು ಸೂಕ್ತ ಸಮಯ ಎಂದು ಅದು ಹೇಳಿದೆ.


ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಸಂವಿಧಾನ ವಿಧಿ 370 ರದ್ದುಪಡಿಸಿ ಜಮ್ಮು-ಕಾಶ್ಮೀರ ಇಬ್ಭಾಗ ಮಾಡಿ ಅದು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳು ಎಂದು ಘೋಷಣೆ ಮಾಡಿದ ನಂತರ ಇಲ್ಲಿ ನಿಷೇಧ ಹೇರಲಾಗಿದೆ. 


ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕರು ಮತ್ತು ಪ್ರಾಕ್ಸಿಗಳ ತೊಂದರೆ, ಕಿರುಕುಳವನ್ನು ತಪ್ಪಿಸಲು ಇದು ಅನಿವಾರ್ಯವಾಗಿತ್ತು ಎಂದು ಭಾರತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದೆ.


ವಿದೇಶಾಂಗ ವ್ಯವಹಾರಗಳ ಸಮಿತಿಯ ಏಷ್ಯಾ-ಪೆಸಿಫಿಕ್ ಮತ್ತು ಪ್ರಸರಣ ರಹಿತ ಉಪಸಮಿತಿ ಅಕ್ಟೋಬರ್ 22 ರಂದು ಕಾಶ್ಮೀರ ಮತ್ತು ದಕ್ಷಿಣ ಏಷ್ಯಾದ ಇತರ ಭಾಗಗಳಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ನಿಗದಿಪಡಿಸಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp